May 16, 2024

MALNAD TV

HEART OF COFFEE CITY

ರಾಜ್ಯದ ನೀರಿನ ದಾಹ ನೀಗಿಸುವ ಕಾಯಕವೇ ಜೆಡಿಎಸ್ ಗುರಿ_ಹೆಚ್.ಡಿ ಕುಮಾರಸ್ವಾಮಿ

1 min read

 

ಚಿಕ್ಕಮಗಳೂರು: ರೈತರಿಗೆ ಕೃಷಿ ಮತ್ತು ವ್ಯವಸಾಯಕ್ಕಾಗಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರಾಜ್ಯಾದ್ಯಂತ ಇರುವ ನದಿ ಮೂಲಗಳಿಂದ 9 ನೀರನ್ನು ಸಂಗ್ರಹಿಸಿ ನೀರಾವರಿಗಾಗಿ ದೊಡ್ಡ ಯೋಜನೆಯನ್ನು ರೂಪಿಸುವ ಸಲುವಾಗಿ ಭದ್ರಾ ನದಿ ಮೂಲದಿಂದ ನೀರನ್ನು ಸಂಗ್ರಹಿಸಿ ಕರ್ನಾಟಕ ರಾಜ್ಯದಲ್ಲಿ ಶೇಕಡ 70 ರಷ್ಟು ನೀರನ್ನು ವ್ಯರ್ಥವಾಗುತ್ತಿತ್ತು ಮುಂದಿನ ದಿನಗಳಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನೀರಿನ ಸಂಪೂರ್ಣ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸಿಕೊಂಡಿದ್ದು ರಾಜ್ಯದ ನೀರಿನ ದಾಹ ನೀಗಿಸಲು ಸೂಕ್ತ ಕ್ರಮಹಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದರು.

ಕಳಸದಲ್ಲಿ ಸೋಮವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಲಧಾರೆಯ ಮುಖಾಂತರ 5 ಲಕ್ಷ ಕೋಟಿ ಹಣ ನಿರಾವರಿ ಯೋಜನೆಗೆ ಬೇಕಾಗಿದ್ದು ನಾಔಉ ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ಇದನ್ನು ಹೊಂದಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇನೆ. ಆದರೆ ಇದರಲ್ಲಿ ದುಡ್ಡು ಹೊಡೆಯುವ ಕೆಲಸ ನಾವು ಮಾಡುವುದಿಲ್ಲ. ಇದರಲ್ಲಿ ಯಾರದರೂ ಒಬ್ಬ ಶಾಸಕ ಅಥವಾ ಮಂತ್ರಿ ಪರ್ಸಂಟೇಜ್ ತೆಗೆದುಕೊಂಡರೆ ಅಂತವರನ್ನು ಒಂದು ಕ್ಷಣವೂ ನಮ್ಮ ಜೊತೆ ಇಟ್ಟುಕೊಳುವುದಿಲ್ಲ. ಈಗ ಮಾಡುತ್ತಿರುವ ನನ್ನ ಹೋರಾಟ ಸರ್ವಜನಾಂಗದ ಶಾಂತಿಯ ತೋಟ ಮಾಡಲು ಹೊರತು ಬೆಂಕಿ ಹಚ್ಚುವ ಕೆಲಸಕ್ಕೆ ಅಲ್ಲ. ಸಮಾಜ ಸಮಾಜದ ಮದ್ಯೆ ಸಂಘರ್ಷ ಹುಟ್ಟು ಹಾಕಿ ಬಡವರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ ಇಂತವರ ಜೊತೆ ಸೇರಿ ನಾನು ಸರ್ಕಾರ ಮಾಡಬೇಕಾ ಎಂದು ಪ್ರಶ್ನಿಸಿದರು

ನೀರನ್ನು ಬಳಕೆ ಮಾಡುವುದರಲ್ಲಿ ರಾಷ್ಟ್ರೀಯ ಪಕ್ಷಗಳು ಈ ರಾಜ್ಯದ ಜನತೆಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ 43 ಉಪ ನದಿಗಳಿದ್ದಾವೆ ಆ ನದಿಗಳ ನೀರನ್ನು ರೈತರಿಗೆ ಮತ್ತು ಪ್ರತೀ ಮನೆಗಳಿಗೆ ಶುದ್ದವಾದ ಕುಡಿಯುವ ನೀರನ್ನು ಕೊಡುವ ಉದ್ದೇಶವೇ ಈ ಜನತಾ ಜಲಧಾರೆ ಕಾರ್ಯಕ್ರಮವಾಗಿದೆ. ರಸ್ತೆಗಳು, ಸೇತುವೆಗಳು, ಕುಡಿಯುವ ನೀರು ಇದೆಲ್ಲ ಪ್ರಾರಂಭವಾಗಿದ್ದು ಜನತಾದಳ ಎಂಟು ವರ್ಷ ಆಡಳಿತ ಮಾಡಿದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯನ್ನು ಕಂಡಿದ್ದೆ ಅಂದಿನಿಂದ.

ಕಾಂಗ್ರೆಸ್ಸಿನ ಡಿಪಿಆರ್ ನಲ್ಲಿ ಕಳಸ ಭದ್ರಾ ಮೇಲ್ದಂಡೆ ಯೋಜನೆಯಿಂದ ಕಳಸ ಮಳುಗಡೆಯಾಗುವುದನ್ನು ಉಳಿಸಿಕೊಟ್ಟಿರುವುದು ನಾವು. ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿರುವುದು ನಾವು, ಇನಾಂ ಭೂಮಿಯಿಂದ ರೈತರನ್ನು ಉಳಿಸಿದ್ದು ನಾವು. ಆದರೆ ಊರಿಗೆ ಬಂದಾಗ ಪ್ರೀತಿಯಿಂದ ಮನೆ ಮಗನಂತೆ ನೋಡಿಕೊಂಡು ಪ್ರೀತಿ ತೋರಿಸ್ತೀರಿ ಆದರೆ ಓಟು ಮಾತ್ರ ಕೊಡಲ್ಲ ಇದು ನನ್ನ ದೌರ್ಬಲ್ಯ ಎಂದರು.

ಕೇಂದ್ರ ಸರ್ಕಾರಕ್ಕೆ ಈ ರಾಜ್ಯದ ಜನ ಕಟ್ಟುತ್ತಿರುವ ತೆರಿಗೆ ಹಣ ಎರಡನೇ ಸ್ಥಾನದಲ್ಲಿ ನಾವಿದ್ದೇವೆ. ಆದರೆ ನಮ್ಮ ರಾಜ್ಯಕ್ಕೆ ಅನುದಾನ ನೀಡಲು ಚೌಕಾಶಿ ಮಾಡುತ್ತಿದ್ದಾರೆ.ನಮ್ಮನ್ನು ಬಿ ಟೀಮ್ ಎಂದು ಹೀಯಾಳಿಸುತ್ತೀರಾ. ನಮ್ಮ ಪಕ್ಷವನ್ನು ಯಾವನಿಗೋ ಗುತ್ತಿಗೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!