May 16, 2024

MALNAD TV

HEART OF COFFEE CITY

ಜಾತಿ ಎಂಬುದು ಬಹಳ ಅಪಾಯಕಾರಿ: ಕುಂ.ವೀರಭದ್ರಪ್ಪ

1 min read

 

ಚಿಕ್ಕಮಗಳೂರು: ರಾಜ್ಯೋತ್ಸವ ಸಂದರ್ಭದಲ್ಲಿ ಗಾಂಧೀಜಿ ಭಾವಚಿತ್ರ ದೊಡ್ಡದಾಗಿರುತ್ತೆ. ಅಂಬೇಡ್ಕರ್ ಭಾವಚಿತ್ರ ಚಿಕ್ಕದಾಗಿರುತ್ತದೆ ಇದು ಸರಿಯಲ್ಲ ಎಂದು ಸಾಹಿತಿ ಚಿಂತಕ ಡಾ.ಕುಂ.ವೀರಭದ್ರಪ್ಪ ಹೇಳಿದರು.ನಗರದ ಆಜಾದ್‍ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 131ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಲಿತರಿಗೆ ಕನಸುಕಾಣುವ ಶಕ್ತಿ ಕೊಟ್ಟಿದ್ದು, ಸಂವಿಧಾನವೆಂದು ತಿಳಿಸಿದರು.

ದಲಿತರು ಈ ದೇಶದ ಮೂಲ ನಿವಾಸಿಗಳು. ಜಾತಿ ಎಂಬುದು ಬಹಳ ಅಪಾಯಕಾರಿ. ಅಂಬೇಡ್ಕರ್‍ಗೆ ಬಹಳ ಸಲ ಅಪಮಾನಗಳಾದರೂ ಅದನ್ನು ಸಹಿಸಿಕೊಂಡು ಶೂದ್ರರ ವಿಮೋಚನೆಗೆ ಅವಿರತವಾಗಿ ಹೋರಾಟ ನಡೆಸಿದರು. ನಾವೆಲ್ಲ ಅವರ ಫಲಾನುಭವಿಗಳು ಎಂಬುದನ್ನು ಮರೆಯಬಾರದೆಂದರು.
ಮೇಲ್ವರ್ಗದ ಜನರ ಮೇಲೆ ಸಿಟ್ಟಿದ್ದರೂ ದೇಶವನ್ನು ಅಂಬೇಡ್ಕರ್ ಬಹಳವಾಗಿ ಪ್ರೀತಿಸುತ್ತಿದ್ದರು. ದೇಶಕ್ಕಾಗಿಯೇ ತನ್ನ ಮಡದಿ ಮಕ್ಕಳನ್ನು ಕಳೆದುಕೊಂಡರು. ಅಂಬೇಡ್ಕರ್ ಅತ್ಯುತ್ತಮ ದಾರ್ಶನಿಕ ಅದ್ವಿತೀಯ ಪಂಡಿತ ಎಂದು ಬಣ್ಣಿಸಿ, ಮಹಿಳೆಯರ ಪರವಾಗಿ ಹೋರಾಟ ನಡೆಸಿದರು. ಅವರಿಗೆ ಪಿತ್ರಾರ್ಜಿತ ಆಸ್ತಿಯನ್ನು ಹಂಚಿಕೆ ಮಾಡಲು ಹಿಂದುಕೋಟ್‍ಬಿಲ್ ತಂದರು. ಅದಕ್ಕೆ ಪಾರ್ಲಿಮೆಂಟ್‍ನಲ್ಲಿ ಸೋಲುಂಟಾದಾಗ ಹಿಂದು,ಮುಂದು ನೋಡದೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಹೊರಬಂದರೆಂದು ತಿಳಿಸಿದರು.

ಜನಪರ ಹೋರಾಟಗಾರ ಶಾಫಿ ಬೆಳ್ಳಾರೆ ಅಂಬೇಡ್ಕರ್ ಜಯಂತಿ ಶೋಷಿತ ಸಮುದಾಯದ ಹಬ್ಬವಾಗಿ ಪರಿವರ್ತನೆಯಾಗುತ್ತಿದೆ. ಸಂವಿಧಾನ ಇರುವ ಕಾರಣಕ್ಕೆ ಜಿಲ್ಲೆಯಲ್ಲಿ ನಾವೆಲ್ಲ ಒಟ್ಟಿಗೆ ಕುಳಿತುಕೊಂಡಿದ್ದೇವೆ. ಅಂಬೇಡ್ಕರ್ ಅವರದು ಮರೆಯಾರದ ವ್ಯಕ್ತಿತ್ವ ಸಮಾನತೆಯನ್ನು ಪ್ರತಿಪಾದಿಸಿದವರು. ಮನುಸ್ಮøತಿಯನ್ನು ಪೋಷಣೆ ಮಾಡುವವರು ಅಧಿಕಾರದಲ್ಲಿದ್ದು, ಈ ಬಗ್ಗೆ ನಾವೆಲ್ಲರು ಚಿಂತಿಸಬೇಕಾಗಿದೆ ಎಂದು ಹೇಳಿದರು.
ಶೋಷಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮನೆಯಲ್ಲಿ ಒಬ್ಬ ಅಂಬೇಡ್ಕರ್‍ನನ್ನು ಸೃಷ್ಟಿಸಬೇಕಾಗಿದೆ. ಪ್ರತಿಯೊಬ್ಬು ಅಸ್ಪøಶ್ಯರು ಸ್ವಾಭಿಮಾನದಿಂದ ಬದುಕುವ ಕನಸುಕಂಡಿದ್ದಾರೆ. ಮನುವಾರಿ ವಿರುದ್ಧ ಹೋರಾಟದ ಕಿಚ್ಚು ಹತ್ತಿಸಬೇಕಾಗಿದೆ ಎಂದು ನುಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!