May 8, 2024

MALNAD TV

HEART OF COFFEE CITY

ಆರೋಗ್ಯ ಕಾಪಾಡಿಕೊಳ್ಳುವುದು ದುಬಾರಿ, ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಿ : ಭೋಜೇಗೌಡ

1 min read

ಚಿಕ್ಕಮಗಳೂರು: ಇವತ್ತಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ತೀವ್ರ ದುಬಾರಿ ಯಾಗಿದ್ದು ಆ ನಿಟ್ಟಿನಲ್ಲಿ ಅಲ್ಲಲ್ಲಿ ನಡೆಯುವ ಉಚಿತ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.ನಗರದ ಶಂಕರಪುರ ಬಡಾವಣೆಯ ಅಂಬೇಡ್ಕರ್ ಶಾಲೆಯಲ್ಲಿ ಜಾತ್ಯಾತೀತ ಜನತಾದಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಆರೋಗ್ಯದ ವಿಚಾರದಲ್ಲಿ ಕೆಲವು ಮಂದಿ ಖಾಸಗೀ ಆಸ್ಪತ್ರೆಗೆ ತೆರಳಿದ ದುಬಾರಿ ಹಣ ಖರ್ಚು ಮಾಡಿದ್ದಾರೆ. ಅದನ್ನು ತೀರಿಸಲಾಗದೇ ಲಕ್ಷಾಂತರ ಮಂದಿ ಸಾಲದ ಸುಳಿಯಲ್ಲಿ ಸಿಲುಕಿರುವುದು ನಮ್ಮ ಮುಂದಿದೆ. ಅಂತಹವರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಇಂದಿನ ದಿನಗಳಲ್ಲಿ ತಂದೆ ತಾಯಿಂದಿರ ವೃದ್ದಾಪ್ಯದಲ್ಲಿ ಆರೋಗ್ಯ ಸಮಸ್ಯೆಯಿಂದ ಕೆಲವು ಮಕ್ಕಳು ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಿಸದೇ ಅವರನ್ನು ಬೀದಿಪಾಲು ಮಾಡಿದ್ದಾರೆ. ಅಂತಹ ಸಮಯದಲ್ಲಿ ಅವರಿಗೆ ಯಾವುದೇ ಸೌಲಭ್ಯಗಳು ಸಿಗದೇ ಸಾವಪ್ಪಿದ್ದಾರೆ. ಆದ್ದರಿಂದ ಅಲ್ಲಲ್ಲಿ ನಡೆಯುವ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.

ಈ ವಾರ್ಡಿನಲ್ಲಿ ಅನೇಕ ಮಂದಿ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ನಿವಾಸಿಗಳು ವಾಸಿಸುತ್ತಿದ್ದು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ. ಇದರೊಂದಿಗೆ ಲಕ್ಷಾಂತರ ಮೌಲ್ಯದ ಉಚಿತ ಔಷಧಿ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಅವಶ್ಯವಿದ್ದಲ್ಲಿ ಕಣ್ಣಿನ ಸಮಸ್ಯೆ ಇರುವವರಿಗೆ ಉಚಿತ ಕನ್ನಡದ ವ್ಯವಸ್ಥೆಯನ್ನು ಆಯೋಜಕರು ಕಲ್ಪಿಸಿದ್ದು ಇಂತಹ ಕಾರ್ಯಕ್ರಮಗಳು ಸಮಾಜ ಸುಧಾರಣೆಗೆ ಶ್ಲಾಘನೀಯ ಎಂದರು.ಕೊರೊನಾ ಸಂದರ್ಭದಲ್ಲಿ ಅನೇಕ ಮಂದಿ ದುಬಾರಿ ವೆಚ್ಚ ಖರ್ಚು ಮಾಡಿ ಬದುಕಿರುವುದು ಉಂಟು, ಸಾವಪ್ಪಿರುವುದು ಉಂಟು. ಅವರ ರಕ್ಷಣೆಗೆ ಸರ್ಕಾರ ಮುಂದಾಗಿಲ್ಲ. ಹಾಗಾಗಿ ಪಕ್ಷದಿಂದ ಆಯೋಜಿಸಿರುವ ಇಂತಹ ತಪಾಸಣಾ ಶಿಬಿರ ಅವರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.

ಶಿಬಿರದ ಆಯೋಜಕ ಹಾಗೂ ಜೆಡಿಎಸ್ ಮುಖಂಡ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ ಕಳೆದ ಏಳು ವರ್ಷಗಳಿಂದ ಜನಸೇವೆ ಮಾಡಿಕೊಂಡು ಬಂದಿದ್ದು ಇದು ನನ್ನ ನವತ್ತೈದನೇ ಆರೋಗ್ಯ ಶಿಬಿರವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಂತಹ ಶಿಬಿರಗಳನ್ನು ಆಯೋಜಿಸಲಾಗಿದ್ದು ಶಿಬಿರದಲ್ಲಿ ಮೂಳೆ, ಚರ್ಮ, ಮಂಡಿ ನೋವು, ಕಣ್ಣಿನ ತಜ್ಞರು, ಸಾಮಾನ್ಯ ಕಾಯಿಲೆ ಸೇರಿದಂತೆ ಸುಮಾರು ಎಂಟು ಮಂದಿ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸುತ್ತಿದ್ದಾರೆ ಎಂದರು.

ಸುಮಾರು ಐದು ವಾರ್ಡ್‍ಗಳ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು ಎರಡು ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜಪ್ಪ, ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ದೇವಿಪ್ರಸಾದ್, ವಕ್ತಾರ ಹೊಲದಗದ್ದೆ ಗಿರೀಶ್, ನಗರಸಭಾ ಸದಸ್ಯ ಗೋಪಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಿಸಾರ್ ಅಹ್ಮದ್, ಉಪಾಧ್ಯಕ್ಷ ಅಯೂಬ್‍ಖಾನ್, ನಗರಾಧ್ಯಕ್ಷ ಇರ್ಷಾದ್, ಮುಖಂ ಡರುಗಳಾದ ಮಾನು ಮಿರಾಂಡ, ಮಂಜಣ್ಣ, ಚಿದಾನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!