May 16, 2024

MALNAD TV

HEART OF COFFEE CITY

ಭಜನೆ ಮನಸ್ಸಿನ ಕಲ್ಮಶಗಳನ್ನು ತೊಳೆದು ಶುದ್ಧಗೊಳಿಸುತ್ತದೆ: ಡಾ.ಹೆಚ್.ಎಲ್.ನಾಗರಾಜ್

1 min read

ಚಿಕ್ಕಮಗಳೂರು: ಭಜನೆ ಮನಸ್ಸಿನ ಕಲ್ಮಶಗಳನ್ನು ತೊಳೆದು ಮನಸ್ಸನ್ನು ಶುದ್ದಗೊಳಿಸುತ್ತದೆ, ಮನುಷ್ಯನನ್ನು ಆಧ್ಯಾತ್ಮಿಕವಾಗಿ ಬೆಳೆಸಿ ಭಗವಂತನ ಸಾಮಿಪ್ಯಕ್ಕೆ ಕರೆದೊಯ್ಯುತ್ತದೆ, ಮಾನಸಿಕ ಶಾಂತಿ ನೆಮ್ಮದಿ ನೀಡುತ್ತದೆ ಎಂದು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಹೇಳಿದರು.ಜಿಲ್ಲಾ ಜಾನಪದ ತೃತೀಯ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಜೆ.ಪಿ.ಯಶೋಧಮ್ಮ ರಾಮೇಗೌಡ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಭಜನೆ ಮನುಷ್ಯನನ್ನು ದೈವತ್ವದ ಕಡೆಗೆ ಕರೆದೊಯ್ಯುವ ಪ್ರಮುಖವಾದ ಸಾಧನ, ಅನಾದಿ ಕಾಲದಿಂದ ಹಳ್ಳಿಹಳ್ಳಿಗಳಲ್ಲಿ ಭಜನಾ ತಂಡಗಳಿದ್ದವು, ಗ್ರಾಮೀಣರೆಲ್ಲರೂ ಸೇರಿ ಸಾಮೂಹಿಕವಾಗಿ ಭಜನೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಜನೆ ಮಾಡಲು ನಾಚಿಕೆ ಮತ್ತು ಮುಜುಗರ ಪಡುತ್ತಿರುವುದರಿಂದಾಗಿ ಭಜನಾ ತಂಡಗಳು ಕ್ಷೀಣಿಸುತ್ತಿವೆ ಎಂದು ವಿಷಾದಿಸಿದರು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಎಲ್ಲಿಂದಲೋ ಬಂದಿದ್ದಲ್ಲ, ಅದು ಈ ನೆಲದ ಸಂಸ್ಕøತಿ, ನಮ್ಮ ಪೂರ್ವಿಕರು ಶ್ರಮದ ದುಡಿಮೆಯ ನಡುವೆ ಕಟ್ಟಿ ಬೆಳೆಸಿದ ಜಾನಪದವನ್ನು ಉಳಿಸಿ ಬೆಳೆಸಿದರೆ ಮಾತ್ರ ದೇಶದ ಸಂಸ್ಕøತಿ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ವಿಜೃಂಭಿಸುತ್ತಿದ್ದ ಭಜನಾ ತಂಡಗಳು ಇತ್ತೀಚಿನ ವರ್ಷಗಳಲ್ಲಿ ಕ್ಷೀಣಿಸುತ್ತಿದ್ದು ಅದನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 25 ಸಾವಿರ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 15 ಸಾವಿರ, ತೃತೀಯ ಸ್ಥಾನ ಪಡೆದವರಿಗೆ 10 ಸಾವಿರ ರೂ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.ತಾಲೂಕಿನ 35 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಅದ್ಭುತವಾಗಿ ಹಾಡುವ ಮೂಲಕ ಕೇಳುಗರ ಮನ ಗೆದ್ದವು, ಮಹಿಳಾ ತಂಡಗಳ ಭಜನೆ, ಭಕ್ತಿ ಗೀತೆಗಳ ಗಾಯನ ಗಮನ ಸೆಳೆದವು.

ಜಿ.ಪಂ.ಮಾಜಿ ಸದಸ್ಯ ಹಿರಿಗಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಉಪಾಧ್ಯಕ್ಷ ಜಿ.ಬಿ.ವಿರೂಪಾಕ್ಷ, ಡಾ.ವಿನಾಯಕ ಸಿಂದಿಗೆರೆ, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ವೆಂಕಟೇಶ್ ಪೈ, ದಾಸ ಸಾಹಿತ್ಯ ಪ್ರಾಜಕ್ಟ್‍ನ ಜಿಲ್ಲಾ ಸಂಚಾಲಕ ಉದಯಸಿಂಹ, ಬಸವೇಶ್ವರ ಭಜನಾ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಬೇಲೂರಿನ ಸಂಗೀತ ವಿದ್ವಾನ್ ಶ್ರೀವತ್ಸ, ಕಲಾವಿದ ಮಂಜೇಶ್, ಪೂರ್ಣೇಶ್ ಕೆಸರಿಕೆ, ಬೆಳವಾಡಿ ಪ್ರಕಾಶ್, ಗಾಯಕಿ ಜ್ಯೋತಿ ವಿನೀತ್‍ಕುಮಾರ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!