May 17, 2024

MALNAD TV

HEART OF COFFEE CITY

ಸದೃಢ ಆರೋಗ್ಯ-ಮನಸ್ಸು ಇದ್ದರೆ ಸಮಾಜದ ಅಭಿವೃದ್ಧಿ ಸಾಧ್ಯ: ಗುಣನಾಥಶ್ರೀ

1 min read

ಚಿಕ್ಕಮಗಳೂರು: ಕೇವಲ ಊಟ, ಉಪಹಾರದಿಂದಷ್ಟೇ ಸದೃಢ ಮನಸ್ಸು, ದೇಹ ಸಾಧ್ಯವಿಲ್ಲ. ಅದಕ್ಕೆ ಕ್ರೀಯಾತ್ಮಕ ಸದಾ ಚಟುವಟಿಕೆ ಬೇಕಾಗುತ್ತದೆ. ಸದೃಢ ಆರೋಗ್ಯ ಮನಸ್ಸು ಇದ್ದಲ್ಲಿ ಸಮಾಜ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಜೆವಿಎಸ್ ಶಾಲೆ ಆವರಣದಲ್ಲಿ ಸಂಘದ ಮಹಿಳಾ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಮಟ್ಟದ ಥ್ರೋಬಾಲ್ ಮತ್ತು ವಿವಿಧ ಆಟೋಟ ಸ್ಪರ್ಧೆಗಳ ಉದ್ಘಾಟಸನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಕ್ರೀಡಾಕೂಟಗಳಿಂದ ಪರಸ್ಪರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗುತ್ತದೆ, ಕ್ರೀಡೆಯ ಜೊತೆಯಲ್ಲಿ ಸಂಸ್ಕಾರ, ಸಂಸ್ಕøತಿ, ಆಚಾರ ವಿಚಾರಗಳನ್ನೂ ತಿಳಿಸುವ ವಿಚಾರದಲ್ಲಿ ಮಹಿಳೆಯರು ಮಹತ್ವದ ಕೆಲಸ ಮಾಡುತ್ತಾರೆ. ಇಂದು ಅವಿಭಕ್ತ ಕುಟುಂಬಗಳನ್ನು ಒಕ್ಕಲಿಗರ ಮನೆಗಳಲ್ಲಿ ಕಾಣಬಹುದು. ಅಣ್ಣ, ತಮ್ಮ, ತಾಯಿ, ತಂದೆ, ಬಂಧು, ಬಳಗದ ಜೊತೆಗೆ ವಯಸ್ಸಿನಲ್ಲಿ ಹಿರಿಯರಾದವರನ್ನು ಹೇಗೆ ಗೌರವಿಸಬೇಕು, ಸೇವೆ ಮಾಡಬೇಕು ಎನ್ನುವುದನ್ನು ಸಹ ಒಕ್ಕಲಿಗರಲ್ಲಿ ನೋಡುವುದು ಬಹಳಷ್ಟಿದೆ. ಇದು ಇನ್ನೂ ಮುಂದುವರಿಯಬೇಕು ಈ ಕಾರಣಕ್ಕೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂದರು.

ಜಿಲ್ಲಾ ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ಸವಿತಾರಮೇಶ್ ಮಾತನಾಡಿ, ನಮ್ಮಲ್ಲಿರುವ ದುಃಖ, ದುಮ್ಮಾನಗಳನ್ನೆಲ್ಲಾ ಮರೆತು ಒಂದು ದಿನದ ಮಟ್ಟಿಗಾದರೂ ಎಲ್ಲರೂ ಒಟ್ಟಿಗೆ ಸೇರಿ ಬೇರೆ ಬೇರೆ ಜಿಲ್ಲೆಗಳ ಕಲೆ, ಸಂಸ್ಕøತಿಗಳನ್ನು ಪರಸ್ಪರ ಹಂಚಿಕೊಳ್ಳುವ ಉದ್ದೇಶದಿಂದ ಈ ಕ್ರೀಡಾ ಕೂಟ ಏರ್ಪಡಿಸಲಾಗಿದೆ ಎಂದರು.
ಥ್ರೋಬಾಲ್‍ನಲ್ಲಿ ಪ್ರಥಮ ಸ್ಥಾನಗಳಿಸುವ ತಂಡಕ್ಕೆ 15 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ತಲಾ 10 ಹಾಗೂ 5 ಸಾವಿರ ರೂ. ಹಾಗೂ ಟ್ರೋಫಿ ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನ ಮತ್ತು ಸರ್ಟಿಫಿಕೇಟ್ ನೀಡಲಾಗುವುದು ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಸಮಾಜದ ಸಂಘಟನೆ ತುಂಬಾ ಮುಖ್ಯವಾಗುತ್ತದೆ. ನಮ್ಮ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ರಾಜ್ಯದಲ್ಲೇ ಒಳ್ಳೆ ಹೆಸರು ಗಳಿಸಿದೆ. ಉತ್ತಮ ಸದಸ್ಯರ ತಂಡವಿದೆ. ಕ್ರೀಡಾ ಕೂಟದಲ್ಲಿ ಎಲ್ಲರೂ ಸ್ಪೂರ್ತಿಯಿಂದ ಭಾಗವಹಿಸಬೇಕು ಎಂದರು.

ಸಮಾರಂಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿದರು. ಮಹಿಳಾ ಸಂಘದ ಉಪಾಧ್ಯಕ್ಷೆ ಸ್ಮಿತಾಸುರೇಶ್, ಕಾರ್ಯದರ್ಶಿ ಜಾಹ್ನವಿಜಯರಾಂ, ಸಹಕಾರ್ಯದರ್ಶಿ ಶಿಲ್ಪಾವಿಜಯ್, ನಿರ್ದೇಶಕರುಗಳಾದ ಕೃಷ್ಣವೇಣಿ ರಮೇಶ್, ಚಂಪಸುದರ್ಶನ್, ನಾಗರತ್ನಜಗದೀಶ್, ವೇದಶ್ರೀಸತೀಶ್, ಶಾಲಿನಿಸುಬ್ರಹ್ಮಣ್ಯ, ಅಂಜನಾರವಿ, ಭಾಗ್ಯಮಹೇಂದ್ರ, ಸುಭದ್ರನಾರಾಯಣ್, ಅನ್ವಿತಚರಣ್, ಮಂಜುಳಮಂಜುನಾಥ್‍ಗೌಡ, ಸಂದ್ಯಾನಾಗೇಶ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ ಹಾಗೂ ನಿರ್ದೇಶಕರು ಭಾಗವಹಿಸಿದ್ದರು. ಸ್ಮಿತ ಸುರೇಶ್ ಸ್ವಾಗತಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!