May 17, 2024

MALNAD TV

HEART OF COFFEE CITY

ಜಿಲ್ಲೆಯನ್ನು ನಿರ್ಮಲಗೊಳಿಸಲು ಸ್ವಚ್ಚತಾ ಅಭಿಯಾನ ಕಾರ್ಯಕ್ರಮ

1 min read

ಚಿಕ್ಕಮಗಳೂರು: ಜಿಲ್ಲೆಯನ್ನು ನಿರ್ಮಲಗೊಳಿಸುವ ನಿಟ್ಟಿನಲ್ಲಿ ಮೂಡಿಗೆರೆ ಹಾಗೂ ಚಿಕ್ಕಮಗಳೂರು ಗ್ರಾಮಪಂಚಾಯಿತಿಗಳ ಸಹಕಾರದೊಂದಿಗೆ ಒಂದು ದಿನದ ಸ್ವಚ್ಚತಾ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಚಿಕ್ಕಮಗಳೂರಿನಿಂದ ಮೂಡಿಗೆರೆ-ಕೊಟ್ಟಿಗೆಹಾರದವರೆಗೂ ಸ್ವಚ್ಚತಾ ಕಾರ್ಯ ನಡೆದಿದೆ ಎಂದು ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ಶಿವರಾತ್ರಿ ಅಂಗವಾಗಿ ಧರ್ಮಸ್ಥಳ ಪಾದಯಾತ್ರೆಗೆ ತೆರಳಿದ್ದವರಿಂದ ಉಂಟಾಗಿದ್ದ ಮಾಲಿನ್ಯ ನಿವಾರಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡಿದ್ದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಸ್ವಚ್ಚತಾ ಅಭಿಯಾನ ಉದ್ಧೇಶಿಸಿ ಮಾತನಾಡಿ, ಅಭಿಯಾನದಲ್ಲಿ ಜಿಲ್ಲಾಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮಪಂಚಾಯಿತಿ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಶಾಲಾ-ಕಾಲೇಜು ಎನ್‍ಎಸ್‍ಎಸ್, ಎ.ಸಿಸಿ ಶಿಬಿರಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನೆಹರೂ ಯುವ ಕೇಂದ್ರದ ಸಿಬ್ಬಂದಿಗಳು, ಧರ್ಮಸ್ಥಳ ಸಂಘದ ಸದಸ್ಯರು, ಸ್ವಯಂ ಸೇವಕರು ಒಳಗೊಂಡಂತೆ ಒಟ್ಟು 40 ತಂಡಗಳನ್ನು ರಚಿಸಲಾಗಿದ್ದು 800 ಕ್ಕೂ ಹೆಚ್ಚು ಮಂದಿ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಚತಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ತಾಲ್ಲೂಕಿನ ಯಾವುದಾದರೂ ಪ್ರವಾಸಿತಾಣ, ಸಾರ್ವಜನಿಕ ಸ್ಥಳಗಳನ್ನು ಆಯ್ಕೆಮಾಡಿಕೊಂಡು ಸ್ವಚ್ಚತಾ ಕಾರ್ಯ ನಡೆಸುವಂತೆ ತಾಲ್ಲೂಕಿನ ಇಒಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ 226 ಗ್ರಾಮಪಂಚಾಯಿತಿಗಳಿಗೆ ಈಗಾಗಲೇ ಸ್ವಚ್ಚವಾಹಿನಿಗಳನ್ನು ನೀಡಲಾಗಿದ್ದು ವೈಜ್ಞಾನಿಕವಾಗಿ ಮನೆ ಮನೆ ಕಸ ಸಂಗ್ರಹ ಕಾರ್ಯ ನಡೆಯುತ್ತಿದೆ ಅಲ್ಲದೇ ಚರಂಡಿ, ಸಾರ್ವಜನಿಕ ಪ್ರದೇಶಗಳ ಸ್ವಚ್ಚತೆಕಾರ್ಯವು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ವಿವಿದೆಡೆ ಅಭಿಯಾನದ ಯೋಜನೆ ರೂಪಿಸಲಾಗುವುದು ಇದಕ್ಕೆ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿದರು.

ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಾರಾನಾಥ್ ಮಾತನಾಡಿ, ಧರ್ಮಸ್ಥಳಕ್ಕೆ ಕೈಗೊಂಡಿದ್ದ ಪಾದಾಯಾತ್ರೆ ಮಾರ್ಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಅನೈರ್ಮಲ್ಯ ಹೆಚ್ಚಿದ್ದು ಈ ಹಿನ್ನೆಲೆ ಜಿಲ್ಲಾಡಳಿತ ಗ್ರಾ.ಪಂ ಸಹಕಾರದೊಂದಿಗೆ ಚಿಕ್ಕಮಗಳೂರಿನ ರಾಂಪುರದಿಂದ ಮೂಡಿಗೆರೆಯವರೆಗೆ ಸುಮಾರು 80 ಕಿ.ಮೀ ಸ್ವಚ್ಚತಾ ಅಭಿಯಾನ ಕೈಗೊಂಡಿದ್ದು, ಅಭಿಯಾನದಲ್ಲಿ ಐಡಿಎಸ್‍ಜಿ, ಸೆಂಟ್‍ಮೇರಿಸ್ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಇಲ್ಲಿನ ಸ್ವಚ್ಚತಾ ಅಭಿಯಾನದಲ್ಲಿ ಒಟ್ಟು 6 ತಂಡಗಳನ್ನು ರಚಿಸಲಾಗಿದ್ದು, ಜನರಿಗೆ ಸ್ವಚ್ಚತೆಯ ಅರಿವು ಮೂಡಿಸುವುದರ ಜತೆಗೆ ಶ್ರಮದಾನ ಕೈಗೊಳ್ಳಲಾಗಿದೆ. ತೇಗೂರು, ಮೂಗ್ತಿಹಳ್ಳಿ, ವಸ್ತಾರೆ, ಕೂದುವಳ್ಳಿ ಸತ್ತಿಹಳ್ಳಿ ಸೇರಿದಂತೆ ವಿವಿಧ ಗ್ರಾಮಪಂಚಾಯಿತಿಗಳು ಅಭಿಯಾನಕ್ಕೆ ಕೈಜೋಡಿಸಿವೆ ಎಂದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!