May 17, 2024

MALNAD TV

HEART OF COFFEE CITY

ವಿಜೃಂಭಣೆಯಿಂದ ನಡೆದ ಹೊರನಾಡು ಅನ್ನಪೂರ್ಣೇಶ್ವರಿ ರಥೋತ್ಸವ

1 min read

ಮೂಡಿಗೆರೆ: ವರ್ಷವಿಡಿ ಗರ್ಭಗುಡಿಯಲ್ಲಿರುವ ದೇವರು, ಬರುವಂತ ಭಕ್ತರಿಗೆ ದರ್ಶನ ಕೊಡುತ್ತಾಳೆ. ರಥೋತ್ಸವದ ವಿಶೇಷ ದಿನದಲ್ಲಿ ಜಗನ್ಮಾತೆಯು ಹೊರಬಂದು ದಿವ್ಯ ರಥದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುವುದೇ ರಥೋತ್ಸವದ ವಿಷೇಶವಾಗಿದೆ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದರು.
ಹೊರನಾಡು ಅನ್ನಪೂರ್ಣೆಶ್ವರಿ ಅಮ್ಮನವರ ದಿವ್ಯ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ರಥೋತ್ಸವ ದ ವಿವರಣೆ ನೀಡಿದ ಅವರು. ಶ್ರೀಕ್ಷೇತ್ರ ದಲ್ಲಿ ನಡೆಯುವ ರಥೋತ್ಸವದಲ್ಲಿ ಭಕ್ತರಿಗೆ ದೇವರ ದರ್ಶನ , ದೇವತಾ ಸಾನಿದ್ಯ ಮತ್ತು ದೇವರ ಸೇವಾ ಕಾರ್ಯವು ನೇರವಾಗಿ ಲಭಿಸುವುದು. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಏಕ ಮನಸ್ಸಿನಿಂದ ಜಾತಿ ಭೇದ ಮರೆತು ಭಕ್ತಿ ಪ್ರಧಾನವಾಗಿ ರಥವನ್ನು ಎಳೆ ಯುವುದರೊಂದಿಗೆ ದೇವರ ಕೃಪೆಗೆ ಪಾತ್ರರಾಗುತ್ತಾನೆ.

ರಥೋತ್ಸವಗಳಿಗೂ ಮಾನವ ಜೀವನದ ರಥಕ್ಕೂ ಒಂದಕ್ಕೊಂದು ಸಂಭಂಧವಿದೆ. ಜೀವನ-ಬದುಕು ಎಂಬ ರಥದಲ್ಲಿ ಸಂಸಾರದ ಒಳಗಿ ರುವ ಎಲ್ಲರು. ಏಕ ಮನಸ್ಸಿನಿಂದ ರಥವನು ಎಳೆದಾಗ ಹೇಗೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವೋ ಹಾಗೆಯೇ ದೇವರ ರಥವನ್ನು ನಿಶ್ಕಲ್ಮಷoದಿಂದ ಭಕ್ತಿಭಾವದಿಂದ ಎಳೆದಲ್ಲಿ ಒಳಗಿನ ಪರಮಾತ್ಮನನ್ನು ಕಾಣಲು ಸಾಧ್ಯ ಎಂದರು.
ರಥೋತ್ಸವ ಎಂದರೆ ಅದು ಒಂದು ಹಬ್ಬದ ವಾತವಾರಣ. ರಥೋತ್ಸವಕ್ಕೆ ಬರುವ ಭಕ್ತರು ರಥೋತ್ಸವದ ನೆನಪಿಗಾಗಿ ದೇವಾಲಯದ ಸುತ್ತಲು ವಸ್ತುಗಳನ್ನು ಖರಿದಿಸುವುದು ಒಂದು ವಿಶೇಷ. ರಥೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾದರು. ಇದಕ್ಕು ಮುನ್ನಾದೇವಾಲಯದಲ್ಲಿ ಅನ್ನಪೂರ್ಣೆಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಾ.ಜಿ.ಭೀಮೇಶ್ವರ ಜೋಷಿ ಮತ್ತು ರಾಜಲಕ್ಷ್ಮೀ ಜಿ.ಜೋಷಿ ದಂಪತಿಗಳು ವಿಷೇಶ ಪೂಜೆ ಸಲ್ಲಿಸಿ. ದೇವಾಲಯದ ಪ್ರಾಂಗಣದಲ್ಲಿ ಉತ್ಸವ ಮೂರ್ತಿಯನ್ನು ದೇವಾಲಯದ ಪ್ರಧಾನ ಅರ್ಚಕರು ತಲೆಯ ಮೇಲೆ ಹೊತ್ತು. ವೇದ ಮಂತ್ರ ಘೋಷದೊಂದಿಗೆ ಮಂಗಳ ವಾದ್ಯದೊಂದಿಗೆ ಪ್ರದಕ್ಷಿಣೆÉ ಹಾಕಿಸಿ ನಂತರ ಅಮ್ಮನವರ ಮೂರ್ತಿಯನ್ನು ರಥ ದಲ್ಲಿ ಕುಳ್ಳರಿಸಿ ಎಳೆಯಲಾಯಿತು.
ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರೀಜಾಶಂಕರ್ ಜೋಷಿ ಕುಟುಂಬ ಪಾಲ್ಗೊಂಡು ರಥೋತ್ಸವವನು ಯಶಸ್ವಿಗೊಳಿಸಿದರು.
ರಾಜಲಕ್ಷೀ ಬಿ.ಜೋಷಿ ಮತ್ತು ಕುಟುಂಬವರ್ಗದವರು ಮಹಿಳೆಯರಿಗೆ ಬಳೆ ಮತ್ತು ರವಿಕೆ ಕಣವನ್ನು ವಿತರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!