May 17, 2024

MALNAD TV

HEART OF COFFEE CITY

ಹಿಜಾಬ್ ಧರಿಸಿ ತರಗತಿಗೆ ಅವಕಾಶ ಕೋರಿ ಐಡಿಎಸ್ ಜಿ ಕಾಲೇಜು ಬಳಿ ಪ್ರತಿಭಟನೆ

1 min read

ಚಿಕ್ಕಮಗಳೂರು: ಹಿಜಾಬ್ ಧರಿಸಿಕೊಂಡು ಕಾಲೇಜಿನ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶನೀಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿನಿಯರು ಕಾಲೇಜಿನ ಗೇಟಿನ ಹೊರಭಾಗದಲ್ಲಿ ಧರಣಿ ನಡೆಸಿದರು.ಕಾಲೇಜಿನ ಗೇಟಿನ ಹೊರಭಾಗದಲ್ಲಿ ಕುಳಿತು ಓದಿಕೊಳ್ಳಲಾರಂಭಿಸಿದರು. ಬಿಸಿಲು ಏರತೊಡಗಿದಾಗ ಗೇಟನ್ನು ತೆಗೆದು ಒಳಗಡೆ ಪ್ರತಿಭಟನಾ ಧರಣಿ ನಡೆಸಲು ಅವಕಾಶಮಾಡಿಕೊಡಲಾಯಿತು. ಈ ರೀತಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಯುತ್ತಿರುವುದು ಮೂರನೇಬಾರಿಗೆ.

ಹಿಜಾಬ್‍ಧರಿಸಿ ಕಾಲೇಜಿಗೆ ಪ್ರವೇಶಿಸಲು ಅವಕಾಶನೀಡದಿದ್ದರೆ, ಆನ್‍ಲೈನ್ ತರಗತಿಗೆ ಮುಂದಾಗಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು, ಇಂಟರ್‍ನಲ್ಲಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಕಾಲೇಜಿನ ಹೊರಭಾಗದಲ್ಲಿ ಪರೀಕ್ಷೆ ಬರೆಯಲು ಅವಕಾಶಮಾಡಿಕೊಡಬೇಕೆಂದು ಆಗ್ರಹಿಸಿದರು.
ಹಿಜಾಬ್‍ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲವೆಂದು ಉಪನ್ಯಾಸಕರು ಪ್ರತಿಭಟನಾನಿರತರಿಗೆ ಹೇಳಿದಾಗ, ಬೇರೆ ಕಾಲೇಜಿನಲ್ಲಿ ಅವಕಾಶಮಾಡಿಕೊಟ್ಟಿದ್ದಾರೆಂದು ವಿದ್ಯಾರ್ಥಿನಿಯೊಬ್ಬರು ಹೇಳಿದಾಗ, ಅದು ಸಮವಸ್ತ್ರ ಇಲ್ಲದ ಕಾಲೇಜಾಗಿರಬೇಕೆಂದರು.

ಮೊದಲಬಾರಿಗೆ ಹಿಜಾಬ್‍ಧರಿಸಿ ಕಾಲೇಜಿಗೆ ಬರಲು ಅವಕಾಶಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರಿನ್ಸಿಪಾಲರಿಗೆ ಮನವಿ ಸಲ್ಲಿಸಲಾಗಿತ್ತು. ಬಳಿಕ ಪ್ರತಿಭಟನೆ ನಡೆಸಿದ್ದು, ಈಗ ಕಾಲೇಜಿನಲ್ಲಿ ಮೂರನೇಬಾರಿಗೆ ಪ್ರತಿಭಟನೆಗೆ ವಿದ್ಯಾರ್ಥಿನಿಯರು ಮುಂದಾಗಿದ್ದಾರೆ. ಈ ಕುರಿತು ಮಾತನಾಡಲು ಪ್ರಿನ್ಸಿಪಾಲರು ನಿರಾಕರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!