May 17, 2024

MALNAD TV

HEART OF COFFEE CITY

ಪ್ರಧಾನಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪೂರಕ ರಾಜ್ಯ ಬಜೆಟ್: ಸಿ.ಟಿ ರವಿ

1 min read

 

ಚಿಕ್ಕಮಗಳೂರು: ರಾಜ್ಯದ ನೀರಾವರಿ ಯೋಜನೆಗಳಲ್ಲಿಆಪಾರಜ್ಞಾನ, ಬಡವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಇರುವ ಕಾಳಜಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು ಸಚಿವರಾಗಿ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆಯ ಕನಸನ್ನು ನನಸು ಮಾಡುವಂತಹ ಪೂರಕವಾದ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ತಿಳಿಸಿದ್ದಾರೆ.

ಕನ್ನಡನಾಡಿನ ಅಭಿವೃದ್ಧಿಗೆ ಇಂದು ಮಂಡನೆಯಾಗಿರುವ ರಾಜ್ಯಬಜೆಟ್ ಜನಸ್ನೇಹಿ ಮತ್ತು ಜನಸಾಮಾನ್ಯರ ಬಜೆಟ್ ಎಂಬುದರಲ್ಲಿಎರಡು ಮಾತಿಲ್ಲ. ರೈತರು, ಬಡವರು, ಮಹಿಳೆಯರು, ವಿದ್ಯಾರ್ಥಿಗಳು ಹೀಗೆ ಎಲ್ಲಾ ವರ್ಗದವರಿಗೂ ಬಜೆಟ್  ಪಾಲುನೀಡಿರುವುದು ಸ್ವಾಗತಾರ್ಹ. ಈ ಪ್ರಸ್ತುತ ಬಜೆಟ್ನಲ್ಲಿ ಪ್ರಮುಖ ನೀರಾವರಿ ಯೋಜನೆಗಳಿಗೆ ದೊರೆತ ಅನುದಾನ ಸಿಂಹಪಾಲು. 3ನೇ ಹಂತದ ಕೃಷ್ಣಾಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ, ಕಳಸಾ ಬಂಡೂರಿ ನಾಲಾ ತಿರುವುಯೋಜನೆಗೆ 1 ಸಾವಿರಕೋಟಿ, ಭದ್ರಾಮೇಲ್ದಂಡೆಯೋಜನೆಗೆ 3 ಸಾವಿರಕೋಟಿ, ಎತ್ತಿನಹೊಳೆ ಯೋಜನೆಗೆ 3 ಸಾವಿರಕೋಟಿ, ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ, ತುಂಗಭದ್ರಾ ಜಲಾಶಯದ ನೀರು ಸಂಗ್ರಹ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1 ಸಾವಿರ ಕೋಟಿ, 8,774 ಕೋಟಿ ಮೊತ್ತದ ಹೊಸ ನೀರಾವರಿಯೋಜನೆಗಳ ಅನುಷ್ಠಾನಕ್ಕೆ ಕ್ರಮ ಮತ್ತು ರಾಜ್ಯಗಳ ಕೆರೆ ಅಭಿವೃದ್ಧಿಗೆ 500 ಕೋಟಿ ಮೊತ್ತದ ಕ್ರಿಯಾಯೋಜನೆ ಬಜೆಟ್ನಲ್ಲಿ ರೂಪಿಸಲಾಗಿದೆ. ಇದಕ್ಕಿಂತ ಜನಪ್ರಿಯ ಬಜೆಟ್‍ಅನು ್ನಕಾಂಗ್ರೆಸ್ ಆಡಳಿತದಲ್ಲಿದ್ದಾಗ ಯಾರೂ ಮಂಡಿಸಲಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರಿಗೆ ವಿಶೇಷ ಅನುದಾನ, ಗ್ರಾಮೀಣ ಮಕ್ಕಳಿಗೆ ನೀಟ್ ತರಬೇತಿ, ಬಡವರಿಗೆ ಉಚಿತ ಕಣ್ಣಿನಚಿಕಿತ್ಸೆ, ಮುಜರಾಯಿ ದೇವಾಲಯಗಳಿಗೆ ಸ್ವಾಯತ್ತತೆ ಹೀಗೆ ಹಲವು ಹೊಸತುಗಳಿಗೆ ಬಜೆಟ್ ಮುನ್ನುಡಿ ಬರೆಯಲಾಗಿದೆ. ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರೂಪ್‍ವೇ ನಿರ್ಮಾಣಕ್ಕೆ ಮತ್ತುಅಭಿವೃದ್ಧಿಗೆ 100 ಕೊಟಿ ರೂಪಾಯಿ ಅನುದಾನ, ಹಂಪಿ, ಬಾದಾಪಿ, ಐಹೊಳೆ, ಪಟ್ಟದಕಲ್ಲು ವಿಜಯಪುರ ಪ್ರವಾಸಿ ವರ್ತುಲ, ಹಾಗೂ ಮೈಸೂರು, ಶ್ರೀರಂಗಪಟ್ಟಣ, ಹಾಸನ, ಬೇಲೂರು, ಹಳೇಬೀಡು ಪ್ರವಾಸಿ ವರ್ತುಲ ಅಭಿವೃದ್ಧಿಮತ್ತು ಬೇಲೂರು, ಹಳೇಬೀಡು, ಸೋಮನಾಥಪುರ ಸೇರಿದಂತೆ ಹೊಯ್ಸಳರ ಸ್ಮಾರಕಗಳನ್ನು ಪ್ರಸಕ್ತ ಸಾಲಿನಲ್ಲಿಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ ಕೈಗೊಂಡಿರುವುದು ಪ್ರವಾಸೋದ್ಯಮ ಅಭಿವೃದ್ಧಿ ಬೃಹತ್ ಹೆಜ್ಜೆಯಾಗಿದೆ ಎಂದು ತಿಳಿಸದ್ದಾರೆ.

ಇನ್ನು ಚಿಕ್ಕಮಗಳೂರಿಗೆ ಬಹುದೊಡ್ಡ ಕೊಡುಗೆ ನೀಡಿದ್ದು ದಶಕಗಳ ಬೇಡಿಕೆಯಾದ ಚಿಕ್ಕಮಗಳೂರು ಜಿಲ್ಲೆಗೆಪ್ರತ್ಯೇಕ ಹಾಲುಒಕ್ಕೂಟದ ಸ್ಥಾಪಿಸುವ ಬಗ್ಗೆ ಪ್ರಸಕ್ತ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಿಸುವ ಮೂಲಕ ಚಿಕ್ಕಮಗಳೂರು ಜನರಿಗೆ ಬಹುದೊಡ್ಡ ಕೊಡುಗೆನೀಡಿದ್ದಾರೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವುದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಆಡಳಿತಾತ್ಮಕವಾಗಿ ಜಿಲ್ಲೆ ಸ್ವಾವಲಂಬಿ ಆಗಲಿದೆ. ಇದರಿಂದ ಜಿಲ್ಲೆಯ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ರೋಪ್ ವೇ ಹಾಗೂ ಚಿಕ್ಕಮಗಳೂರಿಗೆ ಹೆಲಿಪೋರ್ಟ್‍ಗೆ ಈ ಬಾರಿಯ ಬಜೆಟ್ನಲ್ಲಿ ಆದ್ಯತೆನೀಡಲಾಗಿರುವುದು ಸಂತೋಷದ ವಿಷಯ. ಮತ್ತು ಚಿಕ್ಕಮಗಳೂರು-ಬೇಲೂರು-ಹಾಸನ ರೈಲುಮಾರ್ಗವನ್ನು ಕೇಂದ ್ರಸರ್ಕಾರದ ಸಹಯೋಗದೊಂದಿಗೆ ಶೇ. 50:50 ರ ಅನುಪಾತದಲ್ಲಿನಿರ್ಮಾಣ ಮಾಡಲು ಬಜೆಟ್ನಲ್ಲಿಘೋಷಣೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!