May 14, 2024

MALNAD TV

HEART OF COFFEE CITY

ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ಕಾಫಿನಾಡ ಬಿ.ಎಸ್.ರಾಜು ನೇಮಕ

1 min read

 

ಚಿಕ್ಕಮಗಳೂರು. ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಯೋಧ ಬಿ.ಎಸ್. ರಾಜುರವರು ಇಂದು (ಮೇ 1) ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮನೋಜ್ ನರವಣೆಯವರು ಸೇನೆಯ ಮುಖ್ಯಸ್ಥರಾಗಿ ನೇಮಕವಾದ ಬೆನ್ನಲ್ಲೇ ಅವರಿಂದ ತೆರವಾದ ಸ್ಥಾನವನ್ನ ಕನ್ನಡಿಗ ಬಿ.ಎಸ್. ರಾಜುರವರು ತುಂಬುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಬೆ.ಎಸ್.ರಾಜು ಅವರ ಸ್ವಗ್ರಾಮ ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಿ.ಎಸ್.ರಾಜು ಪ್ರಪಂಚದ ಮೂರನೇ ಶಕ್ತಿಯುತ ಸೇನೆಯಾಗಿರುವ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗುತ್ತಿರುವುದಕ್ಕೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಂದ-ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

 

ತಮ್ಮೂರಿನ ಹುಡುಗ ಸೇನೆಯ ಎರಡನೇ ಅತ್ಯುನ್ನತ ಸ್ಥಾನವನ್ನ ಅಲಂಕರಿಸುತ್ತಿರುವುದಕ್ಕೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಿ.ಎಸ್‌ರಾಜು ಅವರಿಗೆ ಜಯಘೋಷ ಕೂಗಿ, ನಮ್ಮೂರಿನ ಹುಡುಗ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ. 1963ರಲ್ಲಿ ಬಿ.ಎಸ್. ಸೋಮಶೇಖರ್-ವಿಮಲಾ ದಂಪತಿಯ ಪುತ್ರನಾಗಿ ಜನಿಸಿದ ಬಿ.ಎಸ್.ರಾಜು ಬಾಲ್ಯದಲ್ಲೇ ಸೈನ್ಯದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಹಾಗಾಗಿ, 5ನೇ ತರಗತಿಗೆ ಬಿಜಾಪುರದ ಸೈನಿಕ ಶಾಲೆಗೆ ಸೇರಿ ಸೈನಿಕನಾಗುವ ಕನಸು ಕಂಡರು. ಆ ಬಳಿಕ 1984ರಲ್ಲಿ ಸೇನೆಗೆ ಸೇರಿದ ಬಿ.ಎಸ್. ರಾಜು ಸೇನೆಯ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿದ್ದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ನಮ್ಮ ಸೇನೆ ಗೆಲ್ಲಲ್ಲು ಕರುನಾಡಿನ ಯೋಧನ ಪಾತ್ರವೂ ಬಹು ದೊಡ್ದದು. ಆ ಬಳಿಕ ಶತ್ರುದೇಶದ ಮೇಲೆ ನಡೆಯುತ್ತಿದ್ದ ಕಾಳಗದಲ್ಲೂ ಕನ್ನಡಿಗನ ಮಾರ್ಗದರ್ಶನ ಹೆಮ್ಮೆಯ ಸೈನಕರಿಗಿತ್ತು.

ಇತ್ತಿಚೀಗೆ ಉರಿ ಪ್ರದೇಶದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ನಲ್ಲೂ ಕೂಡ ಬಿ.ಎಸ್. ರಾಜುರವರ ಬುದ್ದಿವಂತಿಕೆ ಕೆಲಸ ಮಾಡಿತ್ತು ಅಂತ ಅವರನ್ನ ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಸೇನೆಯ ಅತ್ಯುನ್ನತ ಹುದ್ದೆ ಅಲಂಕರಿಸುತ್ತಿರುವ ಕನ್ನಡಿಗರ ಹೆಮ್ಮೆ ಬಿ.ಎಸ್. ರಾಜು ಅವರ ದೇಶ ಕಾಯುವ ಅತ್ತುನ್ನತ ಕಾಯಕದಲ್ಲೂ ಜಯಕಂಡು ಮತ್ತುಷ್ಟು ಗೌರವ-ಕೀರ್ತಿ ಸಂಪಾದಿಸಲಿ ಅನ್ನೋದು ಕನ್ನಡಿಗನ ಆಸೆ-ಹಾರೈಕೆಯಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!