May 10, 2024

MALNAD TV

HEART OF COFFEE CITY

ಅಕ್ರಮ ಸಕ್ರಮ ಹೆಸರಿನಲ್ಲಿ ಗಿರಿ ಪ್ರದೇಶವನ್ನ ಕಬಳಿಸಲು ದೊಡ್ಡ ಹುನ್ನಾರ ?

1 min read

ಚಿಕ್ಕಮಗಳೂರು :  ಲಕ್ಷಾಂತರ ಎಕರೆ ಪ್ರದೇಶವನ್ನ ಒತ್ತುವರಿ ಮಾಡಿರೋ ಮನುಷ್ಯನ ಕಣ್ಣು ಇದೀಗ ಚಿಕ್ಕಮಗಳೂರಿನ ಶೋಲಾ ಅರಣ್ಯದ ಮೇಲೂ ಬಿದ್ದಿದೆ. ಅಪರೂಪದ ನಿಸರ್ಗ ಮಾತೆಯ ಕೊಡುಗೆಯನ್ನ ಉಳಿಸಿ-ಬೆಳೆಸಿಬೇಕೆಂದು ವನ್ಯಜೀವಿ ಪರಿಪಾಲಕರು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದ್ದಾರೆ.

ಮುಳ್ಳಯ್ಯನಗಿರಿಯ ಬ್ಯೂಟಿಯನ್ನ ಹೆಚ್ಚಿಸಿರುವುದೇ ಶೋಲಾ ಅರಣ್ಯ. ದಟ್ಟ ಕಾನನದಿಂದ ಕೂಡಿರೋ ಈ ಸುಂದರ ಶೋಲಾ ಅರಣ್ಯ ವೇದಾ ನದಿ ಸೇರಿದಂತೆ ಅನೇಕ ನದಿತೊರೆಗಳ ಉಗಮ ಸ್ಥಾನ ಕೂಡ. ಎರಡು ಗುಡ್ಡಗಳ ನಡುವೆ ಹುಟ್ಟಿ ಬೆಳೆಯೋ ಈ ಶೋಲಾ ಕಾಡು ವರ್ಷ ಪೂರ್ತಿ ಹಚ್ಚ ಹಸಿರಿನಿಂದ ಕೂಡಿರುತ್ತೆ. ಗುಡ್ಡಗಳಿಂದ ಹರಿದು ಬರೋ ನೀರನ್ನ ತನ್ನ ಉದರದಲ್ಲಿ ಹಿಡಿದಿಟ್ಟು ವರ್ಷಪೂರ್ತಿ ಹರಿಸುತ್ತಾ ಅಂತರ್ಜಲವನ್ನೂ ಹೆಚ್ಚಿಸುತ್ತೆ. ಚಿಕ್ಕಮಗಳೂರು ನಗರ ಸೇರಿದಂತೆ ನೂರಾರು ಹಳ್ಳಿಗಳ ನೀರಿನ ಮೂಲವೂ ಇದೇ ಕಾಡು. ಇಂತಹ ಅಪರೂಪದ ಶೋಲಾ ಕಾಡುಗಳು ಇದೀಗ ನೋಡುನೋಡುತ್ತಿದ್ದಂತೆ ಕಣ್ಮರೆಯಾಗುತ್ತಿರೋದು ಪರಿಸರ ಪ್ರೇಮಿಗಳು ಸೇರಿದಂತೆ ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿದೆ. ಉಳ್ಳವರು ತಮ್ಮ ಪ್ರಭಾವ ಬಳಸಿಕೊಂಡು ಈ ಅಪರೂಪದ ಬೆಟ್ಟವನ್ನೂ ಅಗೆದು ಕಾಫಿತೋಟ ಮಾಡಲು ಮುಂದಾಗ್ತಿರೋದು ಆಕ್ರೋಶ ಹುಟ್ಟುಹಾಕಿದೆ. ಇದಕ್ಕೆ ಅಧಿಕಾರಿವರ್ಗ ಮಂಜೂರಾತಿಯ ಗ್ರೀನ್ ಸಿಗ್ನಲ್ ನೀಡ್ತಿರೋದು ಭವಿಷ್ಯದಲ್ಲಿ ಕಾಫಿನಾಡಿನಲ್ಲಿ ದೊಡ್ಡ ಅನಾಹುತ ಸಂಭವಿಸಬಹುದು ಅನ್ನೋ ಆತಂಕ ಸ್ಥಳೀಯರನ್ನ ಕಾಡ್ತಿದೆ.

ಬೇರೆ ಅರಣ್ಯದ ಹಾಗೆ ಈ ಶೋಲಾ ಅರನ್ಯಗಳಲ್ಲ. ಶೋಲಾ ಅರಣ್ಯ ಕಾಣ ಸಿಗುವುದೇ ತುಂಬಾ ವಿರಳ. ಶೋಲಾ ಕಾಡು ವರ್ಷವಿಡಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ವಿಭಿನ್ನವಾಗಿದೆ. ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಮಾತ್ರ ಇರುವ ಈ ದಟ್ಟಾರಣ್ಯ ಕಾಫಿನಾಡಲ್ಲಿ ಯಥೇಚ್ಛವಾಗಿದೆ. ಅದು ಜಿಲ್ಲೆಯ ಸಂಪತ್ತು ಕೂಡ. ಇದನ್ನ ಉಳಿಸಿ ಬೆಳೆಸಬೇಕಾಗಿರುವುದು ಜಿಲ್ಲಾಡಳಿತದ ಜೊತೆ ಪ್ರತಿಯೊಬ್ಬ ಕಾಫಿನಾಡಿಗನ ಜವಾಬ್ದಾರಿ. ಈ ಕಾಡು ಸಸ್ಯಹಾರಿ ಹಾಗೂ ಮಾಂಸಹಾರಿ ಪ್ರಾಣಿಗಳೆರಡಕ್ಕೂ ಕೂಡ ಪ್ರಿಯವಾದ ಕಾಡು. ಇಲ್ಲಿನ ಗಿಡ ಮರಗಳನ್ನ ನಂಬಿ ಸಸ್ಯಹಾರಿಗಳು ಬದುಕ್ತಿದ್ರೆ, ಸಸ್ಯಹಾರಿಗಳನ್ನ ಅವಲಂಬಿಸಿ ಮಾಂಸಹಾರಿಗಳು ಬದುಕ್ತಿವೆ. ಆದರೆ, ಇಂತಹಾ ಕಾಡುಗಳನ್ನ ಯಾರೋ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕಾಫಿ ಗಿಡ ನೆಡುವ ಸಲುವಾಗಿ ಕಡಿಯುತ್ತಿರುವುದು ನಮ್ಮ ಅಂತ್ಯಕ್ಕೆ ನಾವೇ ಕೊಡಲಿ ಪೆಟ್ಟು ಹಾಕುತ್ತಿದ್ದೀವಾ ಅನ್ನೋ ಆತಂಕ ಮೂಡಿಸಿದೆ.

 

 

ತುಂಬಾ ಸೂಕ್ಷ್ಮವಲಯವಾಗಿರುವ ಮುಳ್ಳಯ್ಯನಗಿರಿ ಭಾಗದಲ್ಲಿ ಶೋಲಾ ಕಾಡುಗಳ ಮೇಲೆ ಸವಾರಿ ನಡಿತಿರೋದು ಸಂಬಂಧಪಟ್ಟವರ ಗಮನಕ್ಕೆ ಇಲ್ಲ ಅಂತೇನಿಲ್ಲ. ಗೊತ್ತಿದ್ದೂ, ಎಲ್ಲಾ ಅರಿವಿದ್ರೂ ಜಾಣಕುರುಡುತನ ಪ್ರದರ್ಶನ ಮಾಡ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಬಗ್ಗೆ ಎಲ್ಲರಿಗೂ ತಿಳಿದಿದೆ. ಒಟ್ಟಾರೆ, ಕಾಫಿನಾಡಲ್ಲಿ ಲಕ್ಷಾಂತರ ಎಕರೆ ಪ್ರದೇಶವನ್ನ ಒತ್ತುವರಿ ಮಾಡಿರೋ ಮನುಷ್ಯನ ಕಣ್ಣು ಇದೀಗ ಶೋಲಾ ಅರಣ್ಯದ ಮೇಲೂ ಬಿದ್ದಿದೆ. ಕಾಡನ್ನ ನಿರ್ಮಿಸೋದು ಕಷ್ಟಸಾಧ್ಯ. ಆದ್ರೆ, ಶೋಲಾ ಕಾಡುಗಳನ್ನ ನಿರ್ಮಿಸೋದು ಅಸಾಧ್ಯ. ಇನ್ಮುಂದೆಯಾದ್ರೂ ಸರ್ಕಾರ ಹಾಗೂ ಸಂಬಂಧಪಟ್ಟವರು ಕಣ್ಮರೆಯಾಗ್ತಿರುವ ಅಪರೂಪದ ಶೋಲಾ ಅರಣ್ಯದ ಉಳಿವಿಗೆ ಶ್ರಮಿಸಬೇಕಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!