May 14, 2024

MALNAD TV

HEART OF COFFEE CITY

ಕಾಫಿ ತೋಟದಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಕೆ-25 ವರ್ಷದ ಕಾಡಾನೆ ಸಾವು

1 min read

ಚಿಕ್ಕಮಗಳೂರು : ಕಾಫಿ ತೋಟದ ಸುತ್ತ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿಯನ್ನ ಆಳವಡಿಸಿದ ಪರಿಣಾಮ ಕಾಡಾನೆವೊಂದು ಸಾವನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪ ಗಾಳಿಪೂಜೆ ಗ್ರಾಮದಲ್ಲಿ ನಡೆದಿದೆ.

ಕಾಡು ಪ್ರಾಣಿಗಳು ಬರುತ್ತೆ ಆನ್ನೋ ಕಾರಣದಿಂದ ಕಾಫಿ ತೋಟದ ಸುತ್ತ ವಿದ್ಯುತ್ ತಂತಿ ಬೇಲಿಯನ್ನ ಆಳವಡಿಸಲಾಗಿತ್ತು. ಆಹಾರ ಹುಡುಕಿ ತೋಟದ ಕಡೆ ಹೆಜ್ಜೆ ಹಾಕಿದ ಗಜರಾಜ ಹಸಿವನ್ನ ನೀಗಿಸೋ ಮೊದ್ಲೇ ಮಾನವನ ಷಡ್ಯಂತ್ರಕ್ಕೆ ಬಲಿಯಾಗಿದ್ದಾನೆ. ಗ್ರಾಮದ ಬಸವರಾಜು ಎಂಬುವವರು ಕಾಫಿ ತೋಟದ ಸುತ್ತ ಹಾಕಿದ ಹೈ ಪವರ್ ಬೇಲಿ, ಮೂಕ ಜೀವಿಯ ಉಸಿರನ್ನೇ ನಿಲ್ಲಿಸಿದೆ. ಬೆಳ್ಳಂಬೆಳಗ್ಗೆ ಈ ಸುದ್ದಿ ತಿಳಿದು ನೂರಾರು ಜನರು ಕಾಫಿತೋಟದತ್ತ ಹೆಜ್ಜೆ ಹಾಕಿ ಒಂಟಿ ಸಲಗ ಜೀವ ಬಿಟ್ಟಿರೋದನ್ನ ನೋಡಿ ಮರುಕ ಪಟ್ಟರು. ಬೆಳೆ ರಕ್ಷಣೆ ಮಾಡೋಕೆ ಅಂತಾ ಕರೆಂಟ್ ಬೇಲಿ ಹಾಕಿದ್ದಾರೆ, ಬೆಳೆ ರಕ್ಷಣೆ ಅನಿವಾರ್ಯ, ಹಾಗಂತ ಮೂಕ ಜೀವಿಗಳ ಪ್ರಾಣ ತೆಗೆಯೋದು ಎಷ್ಟು ಸರಿ.. ಅನ್ನೋ ಮಾತುಗಳು ಎಲ್ಲರಿಂದಲೂ ಕೇಳಿಬರ್ತಿತ್ತು. ಈ ಭಾಗದಲ್ಲಿ ಹೆಚ್ಚಾಗಿ ಕಾಫಿ ತೋಟಗಳಿದ್ದು, ರೈತರು ಬೆಳೆಗಳನ್ನ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿರೋದು ಸತ್ಯ. ಕಾಫಿ ತೋಟಗಳು, ಹೊಲಗಳು ಗುಡ್ಡ ಪ್ರದೇಶದ ಪಕ್ಕದಲ್ಲೇ ಇರೋದ್ರಿಂದ ಕಾಡಾನೆಗಳು ಆಗಾಗ ಇತ್ತ ಮುಖ ಮಾಡೋದು ಸಾಮಾನ್ಯವಾಗಿಬಿಟ್ಟಿದೆ. ಅಷ್ಟಕ್ಕೂ ಸೋಲಾರ್ ಬೇಲಿಗಳನ್ನ ಬೆಳೆಗಳನ್ನ ರಕ್ಷಿಸಿಕೊಳ್ಳಲು ಅವಕಾಶವಿದೆಯೋ ಹೊರತು, ವಿದ್ಯುತ್ ಸಂಪರ್ಕ ತೆಗೆದುಕೊಂಡು ವಿದ್ಯುತ್ ಬೇಲಿಗಳನ್ನ ಹಾಕಿಕೊಳ್ಳಲು ಪರ್ಮಿಷನ್ ಇಲ್ಲ. ಇದೆಲ್ಲಾ ಗೊತ್ತಿದ್ರೂ ಕೂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಇಂತಹ ದುರಂತ ನಡೆದಾಗ ಮಾತ್ರ ನಿದ್ದೆಯಿಂದ ಏಳ್ತಾರೆ ಬಿಟ್ರೆ ಬೇರೆ ಸಮಯದಲ್ಲಿ ಇತ್ತ ಮುಖ ಹಾಕಲ್ಲ. ಅಷ್ಟೇ ಅಲ್ದೇ ನಾಡಿಗೆ ಬರದೇ ಇರೋ ಹಾಗೆ ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ತೆಗೆದಿರೋ ಆನೆ ಕಾರಿಡಾರಗಳು ಲೆಕ್ಕಕ್ಕೇ ಇಲ್ಲದಂತಾಗಿದೆ. ಆರಾಮವಾಗಿ ಈ ಕಾರಿಡಾರ್ಗಳನ್ನ ದಾಟಿಕೊಂಡು ಕಾಡಾನೆಗಳು ನಾಡಿನತ್ತ ಮುಖ ಮಾಡಬಹದಾಗಿದೆ. ಒಂದ್ವೇಳೆ ಈ ಪ್ರದೇಶದಲ್ಲಿ ಆಳವಾದ ಗುಂಡಿಗಳು ಇದ್ದಿದ್ರೆ ಖಂಡಿತವಾಗಿಯೂ ಮೂಕ ಜೀವಿಯ ಬಲಿ ಆಗುತ್ತಿರಲಿಲ್ಲ ಅನ್ನೋದು ಕೂಡ ಸತ್ಯ..

ಕಾಡಾನೆ ಮಾನವ ಸಂಘರ್ಷ ಹತ್ತಾರು ವರ್ಷಗಳಿಂದಲೂ ಕೂಡ ನಡೆದುಕೊಂಡು ಬರ್ತಿದ್ರೂ ಕೂಡ ಇಲ್ಲಿಯವರೆಗೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಖಂಡಿತಾ ನಾವು ಬೆಳೆದ ಬೆಳೆಗಳನ್ನ ರಕ್ಷಿಸಬೇಕು, ಹಾಗಂತ ಮೂಕ ಪ್ರಾಣಿಯ ಜೀವವನ್ನ ತೆಗೆಯುವುದಲ್ಲ. ಯಾವ ರೀತಿ ನಾವುಗಳು ಹೊಟ್ಟೆ ಹೊರೆಯಲು ಕಷ್ಟಪಡುತ್ತೆವೋ, ಹಾಗೇ ಈ ಮೂಕ ಪ್ರಾಣಿಯೂ ಆಹಾರ ಹುಡುಕಿ ಗ್ರಾಮದ ಅಂಚಿಗೆ ಬರೋದು ಸರ್ವೇ ಸಾಮಾನ್ಯ. ನಮಗೆ ಈ ಸಮಾಜದಲ್ಲಿ ಬದುಕಲು ಹೇಗೆ ಹಕ್ಕಿದ್ಯೋ, ಹಾಗೆ ಅವುಗಳಿಗೂ ಬದುಕಲು ಹಕ್ಕಿದೆ ಅನ್ನೋ ಸತ್ಯವನ್ನ ನಾವುಗಳು ಯಾಕೆ ಅರ್ಥ ಮಾಡಿಕೊಳ್ತಿಲ್ಲ ಅನ್ನೋದೇ ನಿಜಕ್ಕೂ ದುರಂತ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!