April 29, 2024

MALNAD TV

HEART OF COFFEE CITY

ಮುಖ್ಯಮಂತ್ರಿ ಆಗಬೇಕೆಂದು ನಾನಂತೂ ಗಡ್ಡ ಬಿಟ್ಟಿಲ್ಲ -ಸಿ.ಟಿ.ರವಿ

1 min read

ಕರ್ನಾಟಕ ಮತ್ತು ತಮಿಳುನಾಡು ರಾಜಕಾರಣ ಮಾಡದೆ ಎರಡೂ ರಾಜ್ಯಕ್ಕೆ ಅನುಕೂಲವಾಗುವಂತೆ ಮಧ್ಯಮ ಮಾರ್ಗದಲ್ಲಿ ಮೇಕೆದಾಟು ಯೋಜನೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಜೆಪಿ ತಮಿಳುನಾಡು ಘಟಕದ ಉಸ್ತುವಾರಿ, ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಉಪವಾಸ ಮಾಡುವುದಾಗಿ ಹೇಳಿರುವ ಬಗ್ಗೆ ಭಾನುವಾರ ಸುದ್ದಿಗಾರರ ಪ್ರಶ್ನೆ ಮಾಡಿದಾಗ, ಬೆಂಗಳೂರಿನಲ್ಲಿ ಶೇ.30ರಷ್ಟು ತಮಿಳುನಾಡಿನವರೇ ಇದ್ದಾರೆ. ದೇಶದ ಎಲ್ಲ ಜನ ಬೆಂಗಳೂರಿನಲ್ಲಿದ್ದಾರೆ. ಎರಡೂ ರಾಜ್ಯದ ಮುಖ್ಯಮಂತ್ರಿಗಳು ರಾಜಕಾರಣ ಮಾಡದೆ ವಾಸ್ತವಿಕ ನೆಲೆಯಲ್ಲಿ ಯೋಚನೆ ಮಾಡಬೇಕು ಎಂದರು. ಸಿಎಂ ಆಗೋಕೆ ಯೋಗ ಬೇಕು :
ಮುಖ್ಯಮಂತ್ರಿ ಹುದ್ದೆಯ ರೇಸ್ ವಿಚಾರದಲ್ಲಿ 15 ದಿನ ಮಾಧ್ಯಮದಲ್ಲಿ ನಾನೊಬ್ಬನೇ ಅಲ್ಲದೆ ಹಲವರ ಹೆಸರು ಬರುತ್ತಿತ್ತು, ಮುಖ್ಯಮಂತ್ರಿಯಾಗಲು ಯೋಗವೂ ಇರಬೇಕಲ್ವ, ಈಗ ಬಸವರಾಜ ಬೊಮ್ಮಾಯಿ ಅವರಿಗೆ ಯೋಗ ಕೂಡಿಬಂದಿದೆ. ಅವರು ಒಳ್ಳೆ ಕೆಲಸ ಮಾಡುತ್ತಾರೆಂಬ ನಿರೀಕ್ಷೆ ಇದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ಸ್ನೇಹಿತರು. ಅವರಿಗೆ ಎಲ್ಲ ರೀತಿಹ ಸಹಕಾರ ಕೊಡುತ್ತೇವೆ. ರಾಜ್ಯದ ಹಿತಕ್ಕೆ ಅವರು ಮಾಡುವ ಕೆಲಸಕ್ಕೆ ನಮ್ಮ ಬೆಂಬಲ ಇರುತ್ತದೆ. ರಾಜ್ಯದ ಹಿತವನ್ನೇ ಆದ್ಯತೆಯನ್ನಾಗಿ ಇಟ್ಟುಕೊಂಡು ಸಂಪುಟ ರಚನೆ ಮಾಡಬೇಕು. ಸಾಮಾಜಿಕ, ಪ್ರಾದೇಶಿಕ ಸಮತೋಲನ ಕಾಪಾಡಬೇಕು. ಒಳ್ಳೆ ಸಂಪುಟ ರಚಿಸಿ ಪುನಃ ಅವರ ನೇತೃತ್ವದಲ್ಲೇ ಚುನಾವಣೆ ಗೆದ್ದು ಬರಬೇಕು ಎಂದು ಆಶಿಸಿದರು. ವಿಜಯನಗರದ ಮೈಲಾರಲಿಂಗನ ಕಾರ್ಣಿಕದ ಬಗ್ಗೆ ನನಗೆ ಗೊತ್ತಿಲ್ಲ, ನಾನಂತೂ ಮುಖ್ಯಮಂತ್ರಿ ಆಗಬೇಕು ಎಂಬ ಕಾರಣಕ್ಕೆ ಗಡ್ಡ ಬಿಟ್ಟಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಗಡ್ಡದಾರಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾರ್ಣಿಕ ಹೇಳಿರುವುದು ನಿಜವಾಗಿದ್ದರೆ ಬಹಳ ಜನ ಗಡ್ಡ ಬಿಡಬಹುದು. ಯರ‍್ಯಾರು ಮುಖ್ಯಮಂತ್ರಿ ಆಕಾಂಕ್ಷಿ ಇದ್ದಾರೋ ಅವರೆಲ್ಲ ಗಡ್ಡ ಬಿಡಲು ಪ್ರಾರಂಭಿಸಬಹುದು ಎಂದರು.
ಕಾಲೇಜು ದಿನಗಳಿಂದಲೂ ನಾನು ನಿರಂತರವಾಗಿ ಗಡ್ಡ ಬಿಡುತ್ತಿದ್ದೇನೆ. ಹಣೆಗೆ ತಿಲಕ, ಕಿವಿಗೆ ಮುರ, ಗಡ್ಡ ನನ್ನ ಐಡೆಂಟಿಟಿಯ ಒಂದು ಭಾಗ ನೋಡಿದವರು ದೂರದಿಂದಲೇ ಸಿ.ಟಿ.ರವಿ ಎಂದು ಹೇಳಲು ಇದು ನನ್ನ ಐಡೆಂಟಿಟಿಯ ಭಾಗ ಎಂದು ಹೇಳಿದರು.
ನನಗೆ ಪಕ್ಷನಿಷ್ಠೆ ಪರಿಶ್ರಮದ ಮೇಲೆ ಮಾತ್ರ ವಿಶ್ವಾಸವಿದೆ. ಕುಟ್ಟಪ್ಪ ಅವರನ್ನು ನನ್ನನ್ನು ಆಲ್ದೂರು ಹೋಬಳಿ ಅಧ್ಯಕ್ಷನ್ನಾಗಿ ನೇಮಕ ಮಾಡಿದಾಗ ನಿನಗೆ ಭವಿಷ್ಯ ಇದೆ. ಪಕ್ಷನಿಷ್ಠೆ ಬಿಡಬೇಡ, ಪರಿಶ್ರಮದಿಂದ ಕೆಲಸ ಮಾಡು ಎಂದಿದ್ದರು. ಅದೇ ಮಂತ್ರ ಪಾಲಿಸಿಕೊಂಡು ಬಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮುಟ್ಟಿದ್ದೇನೆ. ಭಗವಂತ ಏನೇನು ಬರೆದಿದ್ದಾನೋ, ತಾಯಿಯ ಆಶೀರ್ವಾದ ಏನಿದೆಯೋ ಗೊತ್ತಿಲ್ಲ, ಆದರೆ, ಮುಖ್ಯಮಂತ್ರಿ ಆಗಬೇಕೆಂದು ನಾನಂತೂ ಗಡ್ಡ ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!