May 16, 2024

MALNAD TV

HEART OF COFFEE CITY

ಆರೋಪ ಸಾಬೀತು ಪಡಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ- A.C. ಕುಮಾರ್ ಗೌಡ

1 min read

ಚಿಕ್ಕಮಗಳೂರು: ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜೇಗೌಡ ಅವರು ನನ್ನ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸದೇ ಹೋದಲ್ಲಿ ಇವರ ಮೇಲೆ ನಾನೇ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ನಗರಸಭೆ ಸದಸ್ಯ A.C. ಕುಮಾರ್ ಗೌಡ ತಿಳಿಸಿದರು.

ಈ ಕುರಿತಾಗಿ ಮಾತನಾಡಿದ ಅವರು  ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜೇಗೌಡ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಾನು ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿಯೂ, ಕೋಮುವಾದಿ ಪಕ್ಷದ ಜೊತೆಗೂಡಿ ಹಣ ಪಡೆದಿದ್ದೇನೆ ಎಂದು ನನ್ನ ಮೇಲೆ ಆರೋಪವನ್ನು ಮಾಡಿದ್ದರು. ನನ್ನ ಬಗ್ಗೆ ಹಾಗೂ ನನ್ನ ಪಕ್ಷದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇವರಿಗೆ ಇರುವುದಿಲ್ಲ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅದು ಸಾಮಾನ್ಯ ನಾಗರೀಕರಿಂದ ಹಿಡಿದು ದೇಶದ ರಾಷ್ಟ್ರಪತಿಯ ವರೆಗೂ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂಬ ಸಾಮಾನ್ಯ ಜ್ಞಾನ ಇವರಿಗೆ ಇಲ್ಲದಿರುವುದು ವಿಪರ್ಯಾಸ ಎಂದರು.

ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಿ ನಾನು ಕಾನೂನುಬದ್ಧ ಹೋರಾಟಕ್ಕೆ ಸಿದ್ಧನಿದ್ದೇನೆ ಎಂದ ಅವರು ನಾವುಗಳು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಕೋವುವಾದಿ ಪಕ್ಷದ ಜೊತೆಗೂಡಿ ಕೆಲಸ ಮಾಡಿದ್ದವು ಎಂಬುದು ನಿಮಗೆ ನೆನಪಿಲ್ಲವೇ? ಅಥವಾ ಜಾಣಕುರುಡೇ? ಎಂದು ಪ್ರಶ್ನೆ ಮಾಡಿದರು. ನಾನು ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿ ಬ್ಲ್ಯಾಕ್ ಮೇಲ್ ಮಾಡಿರುವ ಬಗ್ಗೆ ತಮ್ಮ ಬಳಿ ದಾಖಲೆಗಳಿದ್ದರೆ ಬಹಿರಂಗ ಪಡಿಸಿ ಎಂದು ಹೇಳಿದರು

ಹೌದು ನಾವು ನಗರಸಭಾ ಅಧ್ಯಕ್ಷರ ಚುನಾವಣೆಯ ಸಂಧರ್ಭದಲ್ಲಿ ನಮ್ಮ ವಾರ್ಡ್ ಗಳ ಅಭಿವೃದ್ಧಿಯ ದೃಷ್ಠಿಯಿಂದ ಬಿಜೆಪಿ ಗೆ ಕೈ ಎತ್ತಿರುವುದು ನಿಜ. ಅಭಿವೃದ್ಧಿಯ ದೃಷ್ಟಿಯಿಂದ ಕೈ ಎತ್ತಿದ್ದರೂ ಸಹ ಅಲ್ಲಿಯ ಅಕ್ರಮಗಳ ಬಗ್ಗೆ, ಕಾನೂನುಬಾಹಿರ ನಡೆಗಳ ಬಗ್ಗೆ,ಭ್ರಷ್ಟಾಚಾರದ ಬಗ್ಗೆ, ಸಾರ್ವಜನಿಕ ತೆರಿಗೆ ಹಣದ ದುರುಪಯೋಗದ ಬಗ್ಗೆ ಧ್ವನಿ ಎತ್ತಿದ್ದೇವೆ, ಹೋರಾಟ ಮಾಡಿದ್ದೇವೆ, ಸಂಬಂಧಿಸಿದ ಇಲಾಖೆಗಳಿಗೆ ದೂರನ್ನೂ ಸಹ ದಾಖಲು ಮಾಡಿದ್ದೇವೆ. ಆದರೇ ಕೈ ಕೆಳಗಿಸಿ ಕೂತಿದ್ದ ನಾವುಗಳು ಏನನ್ನು ಮಾಡಿದ್ದೀರೆಂದು ತಮಗೆ ತಾವೇ ಪ್ರಶ್ನಿಸಿಕೊಳ್ಳಿ. ಇಲ್ಲವಾದಲ್ಲಿ ಸಾರ್ವಜನಿಕರಿಗೆ ಕೇಳಿ ತಿಳಿಯಿರಿ ಎಂದು ಆಕ್ರೋಶ ಹೊರಹಾಕಿದರು.

ಚಿಕ್ಕಮಗಳೂರು ನಗರಸಭೆ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ನಡೆದಿರುವ ಆಕ್ರಮಗಳ ಎಲ್ಲಾ ದಾಖಲೆಗಳನ್ನು ಸಾರ್ವಜನಿಕವಾಗಿ ತಮ್ಮ ಮುಂದಿಡುತ್ತೇನೆ. ನಿಮ್ಮದೇ ಸರ್ಕಾರವಿದೆ, ನಿಮ್ಮದೇ ಶಾಸಕರಿದ್ದಾರೆ, ನಿಮಗೆ ನಿಮ್ಮ ಸರ್ಕಾರದಿಂದ ಪಾರದರ್ಶಕ ಆಡಳಿತ ಕೊಡುವ ವಿಶ್ವಾಸವಿದ್ದರೆ ನಿಮ್ಮ ಸರ್ಕಾರದ ಮಟ್ಟದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಲು ಸಹಕರಿಸಿದರೆ ನೂರಾರು ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರವನ್ನು ಬಯಲಿಗೆಳೆಯಲು ಸಾದ್ಯವಾಗುತ್ತದೆ ಎಂದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!