May 18, 2024

MALNAD TV

HEART OF COFFEE CITY

ಮಹಿಷ ದಸರಾ ಆಚರಣೆಗೆ ಕಾಫಿನಾಡಲ್ಲಿ ಭಾರೀ ವಿರೋಧ; ನಿಷೇಧಾಜ್ಞೆ ಜಾರಿ

1 min read

 

ಚಿಕ್ಕಮಗಳೂರು : ಮಹಿಷ ದಸರಾ ಆಚರಣೆಗೆ ಕಾಫಿನಾಡಲ್ಲಿ ಭಾರೀ ವಿರೋಧ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ 6 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.ಅ.19 ರಿಂದ ಅ.24 ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಇದೇ ತಿಂಗಳ 20 ರಂದು ಚಿಕ್ಕಮಗಳೂರು ನಗರದಲ್ಲಿ ಮಹಿಷ ದಸರಾ ಆಚರಣೆ ಕಾರ್ಯಕ್ರಮವನ್ನು ದಲಿತ, ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಆಯೋಜನೆ ಮಾಡಿದ್ದರು. ಇದಕ್ಕಾಗಿ ನಗರದಲ್ಲಿ ಸಿದ್ದತೆ ಕೂಡ ನಡೆಯುತಿತ್ತು.ಅಷ್ಟೇ ಅಲ್ಲದೆ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರೊ.ಭಗವಾನ್ ಆಗಮಿಸಲಿದ್ದರು.ಆದರೆ ಪ್ರೋ. ಭಗವಾನ್ ಆಗಮನಕ್ಕೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು.ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವಂತಹ ಪ್ರೊ. ಭಗವಾನ್ ಅವರು ಜಿಲ್ಲೆಗೆ ಆಗಮಿಸಿದಂತೆ ನಿರ್ಬಂಧ ಹೇರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದರು.

ಚಿಕ್ಕಮಗಳೂರಿನಲ್ಲಿ ನಡೆಯುವಂತಹ ಕಾರ್ಯಕ್ರಮಕ್ಕೆ ಅವರು ಬಾರದಂತೆ ನಿರ್ಬಂಧ ಹಾಕಬೇಕು. ಅವರನ್ನ ಚಿಕ್ಕಮಗಳೂರಿಗೆ ಕರೆಯಿಸಿ ಇಲ್ಲಿನ ವಾತಾವರಣವನ್ನ ಹಾಳು ಮಾಡುವ ಉದ್ದೇಶದಿಂದ ಕೆಲವು ಸಂಘಟನೆಗಳು ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಅದಕ್ಕಾಗಿ ಅವರನ್ನು ಜಿಲ್ಲೆಯೊಳಗೆ ಬಿಡಬಾರದು ಅವರನ್ನು ಗಡಿಪಾರು ಮಾಡಬೇಕು ಇಂದು ಆರೋಪಿಸಿದ್ದರು.
ಇಷ್ಟಾದರೂ ಅವರನ್ನು ಜಿಲ್ಲೆಗೆ ಕರೆದು ಕಾರ್ಯಕ್ರಮವನ್ನು ಮಾಡಿದರೆ ಇಲ್ಲಿ ನಡೆಯುವಂತಹ ಅಹಿತಕರ ಘಟನೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮತ್ತು ಸರ್ಕಾರವೇ ಕಾರಣವಾಗಿರುತ್ತದೆ ಎಂದು ಸಹ ಎಚ್ಚರಿಸಿದರು.ಮಹಿಷ ದಸರಾ, ಭಗವಾನ್ ವಿಚಾರವಾಗಿ ಪರ ವಿರೋಧ ಚರ್ಚೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!