May 2, 2024

MALNAD TV

HEART OF COFFEE CITY

ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರ ಸಾಧನೆ ಸಮಾಜಕ್ಕೆ ಮಾದರಿ; ಟಿ.ಡಿ.ರಾಜೇಗೌಡ

1 min read

ಚಿಕ್ಕಮಗಳೂರು: ಮಹಿಳೆಯರು ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಒಕ್ಕಲಿಗರ ಮಹಿಳಾ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸೂಪರ್ ಮಾಮ್ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಮತ್ತು ಫ್ಯಾಷನ್ ಶೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಉನ್ನತ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಆಧುನಿಕ ಯುಗದಲ್ಲಿ ಮಹಿಳೆಯರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಇದರಿಂದ ಹೊರಬರಲು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಒತ್ತಡದಿಂದ ಹೊರಬರಬಹುದು ಎಂದರು.

ಮಾಜಿ ಸಚಿವೆ ಮೊಟಮ್ಮ ರವರು ಮಹಿಳೆಯರಿಗಾಗಿ ಸ್ತ್ರೀ ಶಕ್ತಿ ಸಂಘಗಳನ್ನು ಪ್ರಾರಂಭಿಸಿ ಮಹಿಳೆಯರಿಗೆ ಶಕ್ತಿ ತುಂಬಿದ್ದರು, ಮಹಿಳಾ ಸಂಘದ ಗೀತಾ ರವರು ಮಹಿಳೆಯರಿಗಾಗಿಯೇ ಬ್ಯಾಂಕನ್ನು ಪ್ರಾರಂಭಿಸಿ ಮಾದರಿಯಾಗಿದ್ದಾರೆ, ಚಂದ್ರಯಾನದಲ್ಲೂ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.
ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವ ಮೂಲಕ ಶಿಕ್ಷಣವಂತರು ಹಾಗೂ ಸ್ವಾವಲಂಬಿಗಳಾಗಬೇಕು. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ, ಮಹಿಳೆಯರು ಮತ್ತು ಪುರುಷರು ಸಮಾನರೆಂಬ ಭಾವನೆ ಮೂಡುತ್ತಿದ್ದು. ಮಹಿಳೆಯರು ಕ್ರೀಡೆ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ತಮ್ಮ ಸಾಮರ್ಥ್ಯವನ್ನು ತೋರ್ಪಡಿಸುತ್ತಿದ್ದಾರೆ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ರಾಜಶೇಖರ್ ಮಾತನಾಡಿ ಮಹಿಳಾ ಸಂಘ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಹಿಳೆಯರಿಗೆ ಅಗತ್ಯ ಇರುವ ಸಲಹೆ ಸಹಕಾರವನ್ನು ನೀಡುತ್ತ ಉತ್ತಮ ಸಂಘಟನೆ ಮಾಡಿದ್ದಾರೆ. ಸಮಾಜದ ಸಂಘಟನೆ ತುಂಬಾ ಮುಖ್ಯವಾಗುತ್ತದೆ. ನಮ್ಮ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ರಾಜ್ಯದಲ್ಲೇ ಒಳ್ಳೆ ಹೆಸರು ಗಳಿಸಿದೆ ಮತ್ತು ಉತ್ತಮ ಸದಸ್ಯರ ತಂಡವಿದೆ ಎಂದರು.
ಮಲೆನಾಡಿನ ಮಹಿಳೆಯರು ಉತ್ತಮ ಸಂಸ್ಕೃತಿ ಸಂಸ್ಕಾರ ಹೊಂದಿ ಒಕ್ಕಲಿಗರ ಮಹಿಳಾ ಸಂಘವನ್ನು ಬೃಹತ್ ಮಟ್ಟದಲ್ಲಿ ಸಂಘಟಿಸಿ ರಾಜ್ಯದಲ್ಲಿಯೆ ಮಾದರಿಯಾಗಿದ್ದಾರೆ, ಮಲೆನಾಡಿನ ಯಾವುದೆ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ಮಾಡಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಸಂಘಟನೆಯನ್ನು ಉತ್ತಮವಾಗಿ ಮಾಡಿದ್ದಾರೆ ಎಂದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷರಾದ ಸವಿತರಮೇಶ್ ಮಾತನಾಡಿ ನಮ್ಮ ಸಂಘವು ಪ್ರತಿ ತಿಂಗಳು ವಿವಿಧ ರೀತಿಯ ಮಹಿಳೆಯರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಜೊತೆಗೆ ಮಹಿಳಾ ದಿನಾಚಾರಣೆಯಂದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ, ಈ ಭಾರಿ ಎಲ್ಲರ ಸಲಹೆ ಪಡೆದು, ಸೂಪರ್ ಮಾಮ್ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ ಫ್ಯಾಷನ್ ಷೋ ಕಾರ್ಯಕ್ರಮ ಮಾಡಲಾಗಿದೆ ಎಂದರು.

ಈ ಸಂರ್ದದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೆಗೌಡ, ಮಾಜಿ ಸಚಿವೆ ಮೊಟಮ್ಮ, ಬೆಂಗಳೂರಿನ ತೀರ್ಪುಗಾರರಾದ ನೀರಜ್ ನಟರಾಜ್, ಮಿಸ್ ಇಂಡಿಯಾ 2018ರ ಶ್ವೇತಾನಿರಂಜನ್, ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಮಾಡೆಲ್ ಮತ್ತು ಸೆಕ್ಷನ್ ಅಧಿಕಾರಿ ಶ್ವೇತಾಗೌಡ, ಕಿರುತೆರೆ ನಟಿ ಶರ್ಮಿತಾಗೌಡ, ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣಗೌಡ, ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಒಕ್ಕಲಿಗ ಮಹಿಳಾ ಸಂಘದ ಉಪಾಧ್ಯಕ್ಷೆ ಸ್ಮಿತಾ ಸುರೇಶ್, ಕಾರ್ಯದರ್ಶಿ ಜಾಹ್ನವಿಜಯರಾಮ್, ಸಹಕಾರ್ಯದರ್ಶಿ ಶಿಲ್ಪವಿಜಯ್, ನಿರ್ದೇಶಕರುಗಳಾದ ಶಾಲಿನಿ ಸುಬ್ರಹ್ಮಣ್ಯ, ಕೃಷ್ಣವೇಣಿ ರಮೇಶ್, ಚಂಪಾ ಸುದರ್ಶನ್, ನಾಗರತ್ನ ಜಗದೀಶ್, ವೇದಶ್ರೀ ಸತೀಶ್, ಸುಭದ್ರಾ ನಾರಾಯಣ್, ಅಂಜನಾರವಿ, ಭಾಗ್ಯ ಮಹೇಂದ್ರ, ಮಂಜುಳಾ ಮಂಜುನಾಥ್, ಸಂದ್ಯಾನಾಗೇಶ್, ಅನ್ವಿತಾಚರಣ್ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!