May 13, 2024

MALNAD TV

HEART OF COFFEE CITY

ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಇನ್ಮುಂದೆ ಶುಲ್ಕ ಅನ್ವಯ

1 min read

ಚಿಕ್ಕಮಗಳೂರುನಗರದ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಇನ್ನು ಮುಂದಿನ ದಿನಗಳಲ್ಲಿ ಶುಲ್ಕ ಅನ್ವಯವಾಗಲಿದೆ. ವಾಹನಗಳ ಸುಲಲಿತ ಸಂಚಾರ ಜತೆಗೆ ವಾಹನಗಳ ದಟ್ಟಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಗರಸಭೆ ನಿರ್ಧಾರ ಕೈಗೊಂಡಿದ್ದು ಈ ಸಂಬ0ಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಬುಧವಾರ ಪೂರ್ಣಗೊಂಡಿದ್ದು ನಿರ್ಮಲ ಭಾರತಿ ಟ್ರಸ್ಟ್ಗೆ ಟೆಂಡರ್ ಪಡೆದುಕೊಂಡಿದೆ.

ಈ ಸಂಬ0ಧ ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯ ವಾಹನ ನಿಲುಗಡೆ ಹಕ್ಕಿನ ಬಹಿರಂಗ ಹರಾಜು ಬುಧವಾರ ನಡೆದಿದ್ದು ಭಾಗಿಯಾಗಿದ್ದ ೯ ಟೆಂಡರ್‌ದಾರರ ಪೈಕಿ ನಿರ್ಮಲ ಭಾರತಿ ಟ್ರಸ್ಟ್ ೧೬ ಲಕ್ಷಕ್ಕೆ ಟೆಂಡರ್ ವಹಿಸಿಕೊಂಡಿದೆ ಮುಂದಿನ ದಿನಗಳಲ್ಲಿ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ಅನ್ವಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿಕೊAಡರು.
ದ್ವಿಚಕ್ರ ವಾಹನ ಹೊರತುಪಡಿಸಿ ನಾಲ್ಕು ಚಕ್ರದ ವಾಹನ, ಕಾರುಗಳು, ಖಾಸಗಿ ವಾಹನಗಳಿಗೆ ಪ್ರತಿ ಗಂಟೆಗೆ ೧೦ ರೂಗಳನ್ನು ನಿಗಧಿಪಡಿಸಿದು, ೧೫೦೦ ರೂಗಳ ಮಾಸಿಕ ಪಾಸ್‌ಗಳನ್ನು ವಿತರಿಸಲಾಗುವುದು. ೨ ಗಂಟೆಗೂ ಹೆಚ್ಚು ಕಾಲ ವಾಹನ ನಿಲುಗಡೆ ಮಾಡಿದ್ದಲ್ಲಿ ಹೆಚ್ಚುವರಿಯಾಗಿ ೫ ರೂಗಳನ್ನು ನೀಡಬೇಕಾಗುತ್ತದೆ. ಈ ನಿಯಮ ಸರ್ಕಾರಿ, ಶಾಲಾ ಬಸ್‌ಗಳಿಗೆ ಅನ್ವಯವಾಗುವುದಿಲ್ಲ ನಗರದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದರು.
ಇದರಿಂದಾಗಿ ಅನಗತ್ಯವಾಗಿ ನಿಲುಗಡೆಯಾಗುತ್ತಿದ್ದ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ. ಇದರ ಸಾಧಕ ಬಾದಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಐಜಿರಸ್ತೆ, ಮಾರ್ಕೆಟ್ ರಸ್ತೆ, ವಿಜಯಪುರ, ಮುಂತಾದ ಪ್ರಮುಖ ರಸ್ತೆಗಳಲ್ಲಿ ಶುಲ್ಕ ನಿಯಮ ವಿಧಿಸಲಾಗುವುದು. ಎಂಜಿರಸ್ತೆಯಲ್ಲಿ ಪೊಲೀಸರ ಸಹಕಾರದೊಂದಿಗೆ ವಾಹನ ನಿಲುಗಡೆಗೆ ಮಾರ್ಗಸೂಚಿಗಳನ್ನು ಹಾಕಲಾಗುತ್ತಿದ್ದು ನವೆಂಬರ್ ೧ ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್ ಮಾತನಾಡಿ ನಗರದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಈ ನಿಯಮ ನಿಜಕ್ಕೂ ಒಳ್ಳೆಯದು, ಟೆಂಡರ್‌ದಾರರು ಆರಂಭದ ದಿನಗಳಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕ ವಸೂಲಾತಿ ಮಾಡುವಾಗ ವಾಹನ ಸವಾರರ ಮನವೊಲಿಸುವ ಮೂಲಕ ಶುಲ್ಕ ವಸೂಲಿ ಮಾಡಬೇಕು ಅನಗತ್ಯ ವಾಗ್ವಾದಗಳಿಗೆ ಎಡೆ ಮಾಡಿಕೊಡದಂತೆ ಕೇಳಿಕೊಂಡರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!