May 9, 2024

MALNAD TV

HEART OF COFFEE CITY

ನಡು ರಾತ್ರಿ ಫುಲ್ ಟೈಟ್, ರಸ್ತೆ ಮಧ್ಯೆಯೇ ಸ್ಲೀಪಿಂಗ್..! ಉಳಿಯಿತಾ ಜೀವ..?

1 min read

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲಾಗದೆ ರಸ್ತೆ ಮಧ್ಯೆಯೇ ವ್ಯಕ್ತಿ ಓರ್ವ ಮಲಗಿರುವ ಘಟನೆ ಮೂಡಿಗೆರೆ ತಾಲೂಕು ಸಬ್ಬೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಕುಡಿದ ಮತ್ತಿನಲ್ಲಿ ಬೈಕ್ ರೈಡ್ ಮಾಡಲಾಗದೆ ರಸ್ತೆ ಮಧ್ಯೆ ಸ್ಲೀಪಿಂಗ್ ಮಾಡಿದ್ದಾನೆ. ಸದ್ಯ ಬೈಕ್ ಇಂಡಿಕೇಟರ್ ಆನ್ ಇದ್ದಿದ್ದರಿಂದ ಅವನ ಜೀವ ಉಳಿದುಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನು ಗಮನಿಸಿದಂತಹ ವಾಹನ ಸವಾರರು ಅಪಘಾತವಾಗಿರಬಹುದೆಂದು ಆ್ಯಂಬುಲೆನ್ಸ್ ಗೆ ಕರೆ ಕೂಡ ಮಾಡಿದ್ದಾರೆ. ಫುಲ್ ಟೈಟ್ ಆದ ಈ ಭೂಪನು ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದೆ. ಬಣಕಲ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಬೈಕ್ ಸವಾರನನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!