May 2, 2024

MALNAD TV

HEART OF COFFEE CITY

ರೈತರು ಸಾವಯವ ಕೃಷಿ ಮಾಡುವ ಬಗ್ಗೆ ಆಕರ್ಷಿತರಾಗಬೇಕು: ಮಂಜಪ್ಪ

1 min read

 

ಭೂಮಿ ಮತ್ತು ಪರಿಸರ ವಿಷ ಪೂರಿತವಾಗಿದ್ದು ಇದರಿಂದಾಗಿ ಮುನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಕೃಷಿಯಲ್ಲಿ ಹಿಂದಿನ ಹಳೆ ಪದ್ದತಿ ಅನುಸರಿಸುವ ಮೂಲಕ ರೈತರು ಸಾವಯವ ಕೃಷಿಯತ್ತ ಆಕರ್ಷಿತರಾದಾಗ ಮಾತ್ರ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುಲು ಸಾಧ್ಯವಾಗುತ್ತದೆ ಎಂದು ಶ್ರೀ ವೇದಾವತಿ ಸಾವಯವ ರೈತ ಉತ್ಪಾದಕರ ಸಂಘದ ಅಧಕ್ಷ ಎ.ಕೆ ಮಂಜಪ್ಪ ತಿಳಿಸಿದರು.ಅವರು ಇಂದು ಸಮೀಪದ ಹರಿಹರದಳ್ಳಿ ಗ್ರಾಮದಲ್ಲಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ರೈತರಿಗೆ ಸಾವಯವ ಕೃಷಿ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾವಯವ ಕೃಷಿ ಮೂಲಕ ಬೆಳೆಯನ್ನು ಬೆಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು 2022 ಮಾರ್ಚ್ 10 ರಂದು ಶ್ರೀ ವೇದಾವತಿ ಸಾವಯವ ರೈತ ಉತ್ಪಾದಕ ಕಂಪನಿಯನ್ನು ಪ್ರಾರಂಭ ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಬದ್ದವಾಗಿದೆ ಎಂದು ಹೇಳಿದರು.ಇದರಲ್ಲಿ ರೈತರುಗಳೇ ಷೇರುದಾರರಾಗಿದ್ದು, ಈಗಾಗಲೇ 400 ಜನ ಷೇರುದಾರರಾಗಿದ್ದಾರೆ ಇನ್ನು ಒಂದು ಸಾವಿರ ಷೇರುದಾರರನ್ನಾಗಿಸಲು ಗುರಿ ಹೊಂದಿದ್ದು, ಅವರುಗಳಲ್ಲಿ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸಿ ರೈತರನ್ನು ಉದ್ಯಮಿಗಳನ್ನಾಗಿ ಬೆಳೆಸಲು ಸಂಸ್ಥೆ ಉದ್ದೇಶ ಹೊಂದಿದೆ ಎಂದು ತಿಳಿಸಿದರು.ರೈತರೊಂದಿಗೆ ತಂಡವಾಗಿ ಕೆಲಸ ಮಾಡುತ್ತಿದ್ದು, ಇದು ಆದಾಗ ಮಾತ್ರ ನೂರಾರು ಜನರಿಗೆ ಉದ್ಯೋಗ ಕೊಡಲು ಸಾಧ್ಯವಾಗುತ್ತದೆ ಎಂಬುದನ್ನು ಮನಗಾಣಲಾಗಿದೆ. ನಬಾರ್ಡ್ ಸಹಭಾಗಿತ್ವದೊಂದಿಗೆ ಮಂಡ್ಯದಲ್ಲಿ ವಿಕಸನ ಸಂಸ್ಥೆ ಪ್ರಾರಂಭವಾಗಿದೆ. ವಿಜ್ಞಾನಿಗಳು ರೈತರಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿ ಸಮಾಜದ ಋಣ ತೀರಿಸುವ ಒಂದು ಪ್ರಯತ್ನವಾಗಿದೆ ಎಂದರು.ಈಗಾಗಲೇ ತಾಲ್ಲೂಕಿನ ಲಕ್ಯಾ, ಕಸಬಾ, ಅಂಬಳೆ ಈ ಮೂರು ಹೋಬಳಿಗಳಲ್ಲಿ ನಮ್ಮ ಸಂಸ್ಥೆಯನ್ನು ಆರಂಭಿಸಿ, ಕಾರ್ಯ ಪ್ರವೃತ್ತವಾಗಿದೆ ಈ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಂಸ್ಥೆಯ ಸಹಕಾರದೊಂದಿಗೆ ರೈತರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಮಂಡ್ಯ ವಿಕಸನ ಸಂಸ್ಥೆ ನಿರ್ದೇಶಕ ಪ್ರಕಾಶ್ ಪಾಟೀಲ್ ಮಾತನಾಡಿ, ಈ ಸಂಸ್ಥೆ ಉತ್ಪಾದಕರ ಕಂಪನಿಗೆ ತಾಂತ್ರಿಕ ನೈಪುಣ್ಯತೆಗಳನ್ನು ಪರಿಚಯಿಸುವುದರ ಜೊತೆಗೆ ಸಾವಯವ ಕೃಷಿಯಿಂದಾಗುವ ಲಾಭಗಳ ಬಗ್ಗೆ ಹಾಗೂ ಯಾವ ಕಂಪನಿಯಿಂದ ಪ್ರಮಾಣಪತ್ರ ಪಡೆದರೆ ನಮ್ಮ ಉತ್ಪನ್ನಗಳಿಗೆ ಉತ್ತಮ ಮಾರಾಟ ಮತ್ತು ರಫ್ತು ಮಾಡಲು ಒಳ್ಳೆಯ ಅವಕಾಶ ಸಿಗುತ್ತದೆ ಎಂಬುದನ್ನು ರೈತರಿಗೆ ಮನವರಿಕೆ ಮಾಡುತ್ತೇವೆ ಎಂದರು.
ಮಣ್ಣಿನ ಸಂರಕ್ಷಣೆ ಮಾಡುವ ಬಗ್ಗೆ ಬೇಕಾದ ಸಾರಜನಕ, ರಂಜಕ ಒದಗಿಸುವುದರ ಮಾಹಿತಿ ಕುರಿತು ವಿಷಮುಕ್ತ ಆಹಾರ ಬೆಳೆಗಳನ್ನು ಬೆಳೆಯುವ ಬಗ್ಗೆಯೂ ರೈತರಿಗೆ ವಿವರಿಸಲಾಗುವುದು ಮತ್ತು ವೀಡಿಯೋ ಪ್ರದರ್ಶನದ ಮೂಲಕ ರೈತರಲ್ಲಿ ಅರಿವು ಮೂಡಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಎಂ.ಎಸ್ ವಿಜಯೇಂದ್ರ, ಮಂಜಪ್ಪ, ಶಿವಣ್ಣ, ಶಾಂತರಾಮ್ ಹೆಗ್ಗಡೆ, ಸಿಇಓ ಶಶಿಧರ್, ಆರ್.ಓ.ಸಿ.ಓ ಪ್ರವೀಣ್ ಮತ್ತಿತರರು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!