May 5, 2024

MALNAD TV

HEART OF COFFEE CITY

ಒತ್ತುವರಿ ಮತ್ತು ನಕಲಿ ದಾಖಲೆ ಸೃಷ್ಟಿ ಮಾಡಿದ ಭೂಮಿಯನ್ನು ಭೂರಹಿತರಿಗೆ ಹಂಚಿ; ಗೌಸ್ ಮೊಹಿಯುದ್ದಿನ್

1 min read

ಚಿಕ್ಕಮಗಳೂರು: ಒತ್ತುವರಿ ಮತ್ತು ನಕಲಿ ದಾಖಲೆ ಸೃಷ್ಟಿ ಮಾಡಿದ ಭೂಮಿಯನ್ನು ಭೂಹೀನರಿಗೆ ಹಂಚಬೇಕು ಎಂದು ಚಿಕ್ಕಮಗಳೂರು, ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಗೌಸ್ ಮೊಹಿಯುದ್ದಿನ್ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭಾರಿ ಭೂ ಕಬಳಿಕೆ ಮತ್ತು ಬಾರಿ ಒತ್ತುವರಿ ನಡೆದಿರುವ ಮತ್ತು ಅಕ್ರಮ ಮಂಜೂರಾತಿ ಬಗ್ಗೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದೆ. ಒತ್ತುವರಿದಾರು ಅಕ್ರಮ ಮಂಜೂರಿದಾರರು ನಮ್ಮ ಅಕ್ರಮ ಭೂಮಿ ಉಳಿಸಿಕೊಳ್ಳಲು ತೆರೆಮರೆಯಲ್ಲಿ ಉಪವಿಭಾಗಾಧಿಕಾರಿಗಳನ್ನು ವರ್ಗಾವಣೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ವದಂತಿ ಕೂಡ ಕೇಳಿ ಬರುತ್ತಿದೆ. ಆದರೆ ಉಪವಿಭಾಗಾಧಿಕಾರಿಗಳು ಜನಪರವಾದ ಹಲವಾರು, ಬಡವರ ಪರವಾದ ಕಲಸ ಮಾಡುತ್ತಿದ್ದಾರೆ, ಆದ್ದರಿಂದ ಅವರನ್ನು ಯಾವುದೇ ಕಾರಣಕ್ಕು ವರ್ಗಾವಣೆ ಮಾಡಬಾರದು. ಒಂದು ವೇಳೆ ವರ್ಗಾವಣೆ ಮಾಡಿದರೆ ಸಂಘಟನೆಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರ ತಕ್ಷಣ ಜಾರಿ ಒತ್ತುವರಿ ಖುಲ್ಲಮಾಡಿ ಭೂಹೀನ ಬಡ ಕುಟುಂಬಗಳಿಗೆ ಎರಡು ಎಕರೆ ಭೂಮಿ ನೀಡಬೇಕು. ಅಷ್ಟೇ ಅಲ್ಲದೆ ಅರಣ್ಯ ಇಲಾಖೆ ನೀಲಗಿರಿ ಗಿಡಗಳನ್ನು ತೆರವು ಮಾಡಬೇಕು. ಸರ್ವೋಚ ನ್ಯಾಯಾಲಯದ ಆದೇಶವಿದ್ದರೂ ಎಲ್ಲಾಕಡೆ ನೀಲಗಿರಿ ಮರಗಳನ್ನು ಬೆಳೆಸಿರುವುದು ಮಾತ್ರವಲ್ಲ ಶ್ರೀಮಂತರು ನೂರಾರು ಎಕ್ಕರೆ ಒತ್ತುವರಿ ಮಾಡಿದರು ಯಾವುದೇ ಕ್ರಮ ಕೈಗೊಳ್ಳದೇ ಇರುವ ಇಲಾಖೆ ಬಡವರ ಬದುಕಿಗಾಗಿ ಒಂದು ಎಕರೆ, ಎರಡು ಎಕರೆ ಭೂಮಿ ಸಾಗುವಳಿ ಮಾಡುತ್ತಿದ್ದಾರೆ ಅವರ ಕೃಷಿಯನ್ನು ಹಾಳು ಮಾಡಿ ಬೀದಿಗೆ ಬೀಳಿಸುತ್ತಿದ್ದಾರೆ ಎಂದರು.
ಆದರೆ ಅರಣ್ಯ ಇಲಾಖೆಗೆ ಒತ್ತಾಯ ಪೂರ್ವಕ ಮನವಿ ಏನೆಂದರೆ ಅರಣ್ಯ ಭೂಮಿಯನ್ನು ಸರ್ವೇ ಮಾಡಿ ಅರಣ್ಯ ಭೂಮಿಗೆ ಟ್ರಂಚ್ ಅಥವಾ ಬೇಲಿ ಮಾಡಿಕೊಳ್ಳಬೇಕು, ಏಕೆಂದರೆ ಈಗ ಖಾಲಿ ಇರುವ ಎಲ್ಲಾ ಭೂಮಿ ಅರಣ ಇಲಾಖೆ ತಮ್ಮದೇ ಅನ್ನುವ ರೀತಿಯಲ್ಲಿ ಎಲ್ಲಾ ಭೂಮಿಗೂ ಬೇಲಿ ಹಾಕಿಕೊಂಡು ಬಡವರಿಗೆ ಸಿಕ್ಕಬೇಕಾದ ಭೂಮಿಗೆ ಅಡ್ಡಗಾಲು ಹಾಕುತ್ತಿದೆ ಎಂದು ತಿಳಿಸಿದರು.
ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿಯನ್ನು ಬೇರ್ಪಡಿಸಬೇಕು ಅದು ಬಿಟ್ಟು ಬದುಕಿಗಾಗಿ ಒಂದೆರಡು ಎಕರೆ ಭೂಮಿ ಸಾಗುವಳಿ ಮಾಡುತ್ತಿರುವ ಬಡವರ ತಂಟೆಗೆ ಅರಣ್ಯ ಇಲಾಖೆ ಬಂದರೆ ಸಂಘಟನೆ ಅರಣ್ಯ ಇಲಾಖೆ ವಿರುದ್ಧ ಜನಪರ ಹೋರಾಟ ಮತ್ತು ಕಾನೂನು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಲ್ಲದೆ ಜಿಲ್ಲಾಡಳಿತ ಕೂಡ ಬಡವರಿಗೆ ನಿವೇಶನ ಬದುಕಿಗಾಗಿ ಎರಡು ಎಕರೆ ಭೂಮಿ ಕೂಡಬೇಕು ಎಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!