May 5, 2024

MALNAD TV

HEART OF COFFEE CITY

ಯಾರ ಪಾಲಾಗಲಿದೆ “ಮಿಸ್ ಟ್ರಾನ್ಸ್ ಪ್ರೈಡ್ ಆಫ್ ಕರ್ನಾಟಕ” ಕಿರೀಟ..!

1 min read

ಚಿಕ್ಕಮಗಳೂರು: ಟ್ರಾನ್ಸ್ ಜಂಡರ್- ಲಿಂಗತ್ವ ಅಲ್ಪಸಂಖ್ಯಾತರಿಗೆ ‘ಮಿಸ್ ಟ್ರಾನ್ಸ್ ಪ್ರೈಡ್ ಆಫ್ ಕರ್ನಾಟಕ ಸ್ಪರ್ಧೆಯನ್ನು ಅ. 28 ರಂದು ಕಾಫಿನಾಡಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಬ್ಯೂಟಿ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷೆ ಅಪರ್ಣ ತಿಳಿಸಿದರು.
ಮಾದ್ಯಮಮಿತ್ರರೊಂದಿಗೆ ಮಾತನಾಡಿದ ಅವರು ಕಾಫಿನಾಡು ಚಿಕ್ಕಮಗಳೂರು ಒಂದು ವಿಶೇಷ ಆಪರೂಪದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಐಬಾ ಗ್ಲಾಮ್ ಗಾಲಾ ವೇದಿಕೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಿಸ್ ಟ್ರಾನ್ಸ್ ಪ್ರೈಡ್ ಆಫ್ ಕರ್ನಾಟಕ ಎಂಬ ವೇದಿಕೆ ಅನಾವರಣಗೊಳಿಸುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ ಹೇರ್ ಅಂಡ್‌ ಬ್ಯೂಟಿ ಕಾಂಟೆಸ್ಟ್, ಡಾಗ್ ಶೋ, ವೃದ್ದಾಶ್ರಮದಲ್ಲಿರುವ ಹಿರಿಯ ನಾಗರೀಕರಿಗೆ ರಾಂಪ್ ವಾಕ್ ನಂತಹ ವಿಶೇಷ ಸ್ಪರ್ಧೆಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.

ಹೇರ್ ಅಂಡ್ ಬ್ಯೂಟಿ ಸ್ಪರ್ಧೆಯಲ್ಲಿ ಬ್ರೈಡಲ್ ಮೇಕಪ್, ಮೈಥಾಲಾಜಿ ಮೇಕಪ್, ಹೇರ್ ಸ್ಟೈಲ್, ನೈಲ್ ಆರ್ಟ್ ಕಾಂಟೆಸ್ಟ್, ಮೆಹಂದಿ ಕಾಂಟೆಸ್ಟ್ ಹೀಗೆ ಐದು ವಿಭಾಗಗಳಿದ್ದು, ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಡಾಗ್ ಶೋ ಕೂಡ ಆಯೋಜಿಸಲಾಗಿದ್ದು, ಇಲ್ಲೂ ಕೂಡ ಆಸಕ್ತರು ಭಾಗವಹಿಸಬಹುದಾಗಿದೆ. ಈ ಡಾಗ್ ಶೋನಲ್ಲಿ ಬರೋಬ್ಬರಿ 20 ಕೋಟಿ ಬೆಲೆಬಾಳುವ ವರ್ಲ್ಡ್ ಬಿಗ್ಗೆಸ್ಟ್ ಆ್ಯಂಡ್ ಎಕ್ಸ್ಪೆನ್ಸಿವ್ ಡಾಗ್ ಎಂದೇ ಪ್ರಖ್ಯಾತಿಯಾಗಿರುವ ಬೆಂಗಳೂರಿನ ಸತೀಶ್ ಕೆಡಬಮ್ಸ್ ಅವರ ಡಾಗ್ ಕೆಡಬಮ್ಸ್ ಅವರ ‘ಡಾಗ್ ಕೆಡಬಮ್ಸ್ ಹೈಡರ್’ ಕೂಡ ಭಾಗವಹಿಸುತ್ತಿರೋದು ವಿಶೇಷ ಸಂಗತಿಯಾಗಿದೆ. ಇದರೊಂದಿಗೆ ಅನಾಥಶ್ರಮದಲ್ಲಿರುವ ಹಿರಿಯ ನಾಗರೀಕರಿಗೆ ಮುಕ್ತವಾಗಿ ರಾಂಪ್ ವಾಕ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅ. 28 ರಂದು ನಡೆಯಲಿರುವ ಸ್ಪರ್ಧೆಯ ಅಂಗವಾಗಿ ಅ. 26ರಂದು ಚಿಕ್ಕಮಗಳೂರು ನಗರದಲ್ಲಿ ವಾಕಥಾನ್-ಸಮಾನತೆಯ ನಡಿಗೆ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ಅನೇಕ ಕಡೆಗಳಿಂದ ಆಗಮಿಸುತ್ತಿರುವ ಮಂಗಳಮುಖಿಯರಿಗೆ ಆರತಿ ಬೆಳಗುವ ಮೂಲಕ ಕಾಫಿನಾಡಿಗೆ ಸ್ವಾಗತ ಮಾಡಲಿದ್ದು, ಬಳಿಕ ಹನುಮಂತಪ್ಪ ಸರ್ಕಲ್ಲಿಂದ ಆಜಾದ್ ಆಜಾದ್‌ ಪಾರ್ಕ್‌ವರೆಗೆ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಮಹಿಳೆಯರಿಗೆ ಪುರುಷರಿಗೆ ಒಂದೇ ರೀತಿಯ ಸ್ನಾನಮಾನ ದೊರೆಯುತ್ತಿದೆ ಆದರೆ ಮಂಗಳಮುಖಿಯರನ್ನ ನಾವೆಲ್ಲರೂ ಅನ್ನುವುದಕ್ಕಿಂತಲೂ ಬಹುತೇಕರು ನೋಡುವ ದೃಷ್ಟಿಕೋನವೇ ಬೇರೆಯಾಗಿದ್ದು, ಅವರಿಗೆ ನಮ್ಮಂತೆ ಬದುಕಲು ಹಕ್ಕಿದ್ರೂ ಕೂಡ ಅದಕ್ಕೆ ನಾವು ಗೊತ್ತಿದೆಯೋ, ಗೊತ್ತಿಲ್ಲದೆಯೋ ಅವಕಾಶ ನೀಡ್ತಿಲ್ಲ ಅನ್ನೋದು ಕಟುಸತ್ಯ. ಅವರೂ ಕೂಡ ನಮ್ಮಂತ ಮನುಷ್ಯರು ಅನ್ನೋದನ್ನ ನಾವೆಲ್ಲರೂ ಅರಿಯೋಣ ಬನ್ನಿ ಆ ದಿನ ಅವರೊಂದಿಗೆ ಹೆಜ್ಜೆ ಹಾಣ, ಮನುಷ್ಯತ್ವ ಮರೆಯೋಣ ಸಮಾನತೆಯನ್ನ ಸಾರೋಣ ಎಂದು ತಿಳಿಸಿದರು.

ಈಗಾಗಲೇ ಚಿಕ್ಕಮಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ಐದು ಕಡೆ ಆಡಿಷನ್ ಮಾಡಿ, ಅ. 28 ರಂದು ಮಿಸ್ ಟ್ರಾನ್ಸ್ ಪ್ರೈಡ್ ಆಫ್ ಕರ್ನಾಟಕದ ಗ್ರಾಂಡ್ ಫಿನಾಲೆಯಲ್ಲಿ ಮಿಸ್ ಟ್ರಾನ್ಸ್ ಫ್ರೆಡ್ ಆಫ್ ಕರ್ನಾಟಕದ ಕಿರೀಟ ಯಾರ ಪಾಲಾಗುತ್ತೆ ಅನ್ನೋದನ್ನ ಅಲ್ಲೇ ಬಂದು ನೋಡಿ ಎಂದು ಮನವಿ ಮಾಡಿದರು.

ಆಲ್ ಇಡಿಯಾ ಹೇರ್ ಆಂಡ್ ಬ್ಯೂಟಿ ಅಸೋಸಿಯೇಶನ್ ಚಿಕ್ಕಮಗಳೂರು ಚಾಪ್ಟರ್, ಕಲಿಯುಗ್ ಇವೆಂಟ್ಸ್, ಲುಕ್ ಬುಕ್ ಯೂನಿಸೆಕ್ಸ್ ಪ್ರೊಫೆಷನಲ್ ಸಲೂನ್ ಆಂಡ್ ಬ್ಯೂಟಿ ಅಕಾಡೆಮಿಗಳು ಈ ಅಪರೂಪದ ಕಾರ್ಯಕ್ರಮದ ಹೊಣೆಗಾರಿಕೆಯನ್ನ ಹೆಗಲಿಗೆ ಹಾಕಿಕೊಂಡಿ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಆದ್ದರಿಂದ ಎಲ್ಲರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!