May 14, 2024

MALNAD TV

HEART OF COFFEE CITY

ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

1 min read

 

ಚಿಕ್ಕಮಗಳೂರು: ಕ್ರೀಡಾಕೂಟಗಳಲ್ಲಿ ನಾವೆಲ್ಲಾ ಒಂದು ತಂಡವಾಗಿ ಒಂದೇ ಧೈಯ ಹಾಗೂ ಗುರಿಯೊಂದಿಗೆ ಹೇಗೆ ಆಟವಾಡುತ್ತವೆಯೋ ಹಾಗೆಯೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುವಾಗೂ ಒಂದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಇಲಾಖೆಗೆ ಉತ್ತಮ ಹೆಸರು ಬರುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಹೆಚ್ ಅಕ್ಷಯ್ ಹೇಳಿದರು.

ನಗರದ ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತ್ತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಕ್ರೀಡಾಕೂಟದ ಆಯೋಜನೆಯ ಹಿಂದೆ ವರ್ಷವಿಡೀ ಒತ್ತಡದ ಕೆಲಸ ನಿರ್ವಹಿಸಿದ ನಮಗೆ ಮನರಂಜನೆಯ ಜೊತೆಗೆ ಮನಸ್ಸಿಗೆ ಉಲ್ಲಾಸ ಸಿಗುವಂತಾಗಲಿ. ಈ ಮೂಲಕ ಮತ್ತಷ್ಟು ಕೆಲಸ ನಿರ್ವಹಿಸಲು ಚೈತನ್ಯ ಉಂಟಾಗಲಿ ಎಂಬ ನಿಟ್ಟಿನಲ್ಲ ಈ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ಎರಡು ವರ್ಷ ಕೋವಿಡ್ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಸಹ ಫ್ರೆಂಟ್ ಲೈನ್ ವರ್ಕರ್ ಆಗಿ ಕಾರ್ಯನಿರ್ವಹಿಸಿದ್ದು ಇಂತಹ ಒತ್ತಡದ ನಡುವೆ ಈ ಕ್ರೀಡಾಕೂಟ ನಿಮ್ಮೆಲ್ಲರಿಗೂ ಹೊಸ ಚೈತನ್ಯ ತುಂಬಲಿ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅಂತರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ ಸುನೀಲ್, ಕ್ರೀಡಾಕೂಟದಲ್ಲಿ ಭಾಗಿಯಾಗಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಇದಕ್ಕೂ ಮೊದಲು ಕ್ರೀಡಾಕೂಟದಲಿ ವಿವಿಧ ವಿಭಾಗದ ಐದು ತಂಡಗಳಿಂದ ಪಥಸಂಚಲನದ ಮೂಲಕ ಅತಿಥಿಗಳಿಂದ ವಂದನೆ ಸ್ವೀಕಾರ ಮಾಡಲಾಯಿತು. ಬಳಿಕ ಕಳೆದ ಬಾರಿಯ ಕ್ರೀಡಾಕೂಟದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಜಿ.ಕೆ ಪ್ರಸನ್ನ ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತರುವ ಮೂಲಕ ಅತಿಥಿಗಳಿಂದ ಜ್ಯೋತಿ ಸ್ಪರ್ಶಿಸಿ ಹಾಗೂ ಆಕಾಶಕ್ಕೆ ಬಣ್ಣದ ಬಲೂನ್ ಮತ್ತು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಅಧಿಕೃತವಾಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಪ್ರಥಸಂಚಲನದಲ್ಲಿ ಭಾಗಿಯಾದ ತಂಡಗಳ ನಾಯಕರು ಕ್ರೀಡಾ ಪ್ರಮಾಣ ವಚನ ಸ್ವೀಕರಿಸಿದರು ಬಳಿಕ ವಿವಿಧ ಕ್ರೀಡಾಕೂಟಗಳು ನಡೆದವು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಕುಟುಂಬಸ್ಥರು ಹಾಜರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!