May 15, 2024

MALNAD TV

HEART OF COFFEE CITY

ಹಕ್ಕು ಪತ್ರ ನೀಡಲು ಲಂಚದ ಬೇಡಿಕೆ: ತಹಶೀಲ್ದಾರ್ ಅಂಬುಜಾ, ಗ್ರಾಮ ಲೆಕ್ಕಿಗ ಬಂಧನ

1 min read

 

ಶೃಂಗೇರಿ: ಹಕ್ಕು ಪತ್ರ ನೀಡಲು ಲಂಚದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಂಬುಜ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಅವರು ಎಸಿಬಿ ಬಲೆಗೆ ಬಿದ್ದಿದ್ದು. ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ನಂತರದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಶೃಂಗೇರಿಯ ಕಾವಡಿ ವಾಸಿಯಾದ ಸಂಜಯ್ ಅವರಿಗೆ ಹಕ್ಕುಪತ್ರ ಮಾಡಿಕೊಡಲು 60*40 ಜಾಗಕ್ಕೆ 60 ಸಾವಿರ ಹಣಕ್ಕೆ ಬೇಡಿಕೆ ಇಟ್ಟ ಹಿನ್ನಲ್ಲೆ ಎಸಿಬಿ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕಿನ ಕಾವಡಿ ಗ್ರಾಮದ ವಾಸಿಯಾದ ಸಂಜಯ್ ಕುಮಾರ್ ಎಂಬುವರು 2017 ನೇ ಸಾಲಿನಲ್ಲಿ ಬೆಳಂದೂರು ಗ್ರಾಮದ ಕುಂದ್ರಿಯಲ್ಲಿ 18 ಗುಂಟೆ ಜಮೀನು ಖರೀದಿಸಿ ಜಮೀನಿನ ಪಕ್ಕದಲ್ಲಿ 60*60 ಅಳತೆಯ ವಾಸದ ಮನೆಯನ್ನು ನಿರ್ಮಿಸಿದ್ದು. ಮನೆಯ ಹಕ್ಕು ಪತ್ರಕ್ಕಾಗಿ ನಮೂನೆ-94 (ಸಿ) ಅಡಿಯಲ್ಲಿ ಶೃಂಗೇರಿ ತಾಲ್ಲೂಕು ಕಚೇರಿಗೆ 2018 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಮನೆಗೆ ಸಂಬಂಧಪಟ್ಟ ನಕಾರ ಹಾಗೂ ಇತರೆ ದಾಖಲೆಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಶೃಂಗೇರಿಯವರನ್ನು ಭೇಟಿ ಮಾಡಿದಾಗ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ರವರನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ.

ಈ ಸಂಬಂಧ ಜ.3 ರಂದು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ರವರನ್ನು ಭೇಟಿ ಮಾಡಿ ಮನೆಯ ಹಕ್ಕು ಪತ್ರವನ್ನು ಮಾಡಿಕೊಡುವಂತೆ ಕೇಳಿದಾಗ ಅವರು ಹಕ್ಕುಪತ್ರ ಮಾಡಿಕೊಡಲು 60 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಎಸಿಬಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಗುರುವಾರ ಮಧ್ಯಾಹ್ನ ಶೃಂಗೇರಿ ತಾಲೂಕು ಕಚೇರಿಗೆ ಸಂಜಯ್ ಭೇಟಿ ನೀಡಿ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಮನೆಯ ಹಕ್ಕು ಪತ್ರ ಮಾಡಿಕೊಡಲು ಗ್ರಾಮಲೆಕ್ಕಾಧಿಕಾರಿ ಸಿದ್ದಪ್ಪ 60 ಸಾವಿರ ಬೇಡಿಕೆ ಇಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ತಹಶೀಲ್ದಾರ್ ಗ್ರಾಮಲೆಕ್ಕಾಧಿಕಾರಿಯಿಂದ ರೆಕಾಡ್ರ್ಸ್ ರೆಡಿ ಮಾಡಿಕೊಂಡು ಬರುವಂತೆ ಹೇಳಿರುತ್ತಾರೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ರವರನ್ನು ಭೇಟಿ ಮಾಡಿ ಮನೆಯ ಹಕ್ಕು ಪತ್ರದ ಬಗ್ಗೆ ಕೇಳಿದಾಗ ಒಟ್ಟು 60 ಸಾವಿರ ಆಗಗುತ್ತದೆ ಮೊದಲನೇ ಕಂತು 30 ಸಾವಿರದ ಜೊತೆಗೆ ದಾಖಲೆ ನೀಡುವಂತೆ ತಿಳಿಸಿದ್ದಾರೆ.

ಸಂಜಯ್ ಲಂಚದ ಹಣ ನೀಡಿ ಖಾತೆ ಮಾಡಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ಈ ಬಗ್ಗೆ ಪೊಲೀಸ್ ಉಪಾಧೀಕ್ಷಕರು ಎಸಿಬಿ ಪೊಲೀಸ್ ಠಾಣೆ, ಚಿಕ್ಕಮಗಳೂರಿಗೆ ದೂರನ್ನು ನೀಡಿದ್ದು, ಪ್ರಕರಣ ದಾಖಲಾಗಿದ್ದು ಈ ಸಂಬಂಧ ಇಂದು ಶೃಂಗೇರಿಯ ಪಟ್ಟಣದದ ಪ್ರವಾಸಿ ಮಂದಿರದಲ್ಲಿ 25 ಸಾವಿರ ರೂಪಾಯಿಯನ್ನು ಗ್ರಾಮ ಲೆಕ್ಕಾಧಿಕಾರಿ ಸ್ವೀಕರಿಸುವ ಸಂದರ್ಭದಲ್ಲಿ ಡಿವೈಎಸ್‍ಪಿ ಸಿ.ಆರ್ ಗೀತಾ ನೇತೃತ್ವದಲ್ಲಿ ತನಿಖಾಧಿಕಾರಿ ಅನಿಲ್ ಮಂಜುನಾಥ್ ಪಿಐ, ಮತ್ತು ಸಿಬ್ಬಂದಿಗಳು, ಭ್ರಷ್ಟಾಚಾರ ನಿಗ್ರಹ ದಳ ಎ.ಜಿ ರಾಠೋಡ್ ರವರುಗಳು ನಡೆಸಿದ ಕಾರ್ಯಾಚರಣೆಯ ಯಶಸ್ವಿಯಾಗಿದ್ದು ಮೊದಲನೇ ಆಪಾದಿತರಾದ ಶೃಂಗೇರಿ ತಹಶೀಲ್ದಾರ್ ಅಂಬುಜಾ ಹಾಗೂ ಎರಡನೇ ಆಪಾದಿತರಾದ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಅವರನ್ನು ಬಂಧಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಎಸಿಬಿ ಡಿವೈಎಸ್ಪಿ ಸಿ.ಆತ್ ಪತ್ರಿಕಾ ಹೇಳಿಕೆ ಮೂಈಲಕ ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!