May 17, 2024

MALNAD TV

HEART OF COFFEE CITY

ಬಿಜೆಪಿ ತೊಲಗಿಸಿ ಜನಪರ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ: ರೇಖಾಹುಲಿಯಪ್ಪಗೌಡ

1 min read

ಚಿಕ್ಕಮಗಳೂರು-ಅಭಿವೃದ್ದಿ ಹರಿಕಾರ  ಎಂದು ಕ್ಷೇತ್ರದ ಶಾಸಕರು ಹೇಳುತ್ತಿದ್ದಾರೆ ಆದರೆ ಹಳ್ಳಿಗಳ ರಸ್ತೆಗಳು ಡಾಂಬರೀಕರಣ ಆಗಿಲ್ಲ ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಸುವಂತೆ ಕೆ.ಪಿ.ಸಿ.ಸಿ ವಕ್ತಾರರಾದ ಶ್ರೀಮತಿ ರೇಖಾಹುಲಿಯಪ್ಪಗೌಡ ಮತದಾರರಲ್ಲಿ ಮನವಿ ಮಾಡಿದರು.ಅವರು ಗೌರಿಕಾಲುವೆ, ವಿಜಯಪುರ, ನುರಾನಿ ಮಸೀದಿ, ರಾಮನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಪರವಾಗಿ ಮತಯಾಚನೆ ಮಾಡಿ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಎಲ್ಲಿ ಹೋದರು ಕಾಂಗ್ರೆಸ್ ಅಭ್ಯರ್ಥಿಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.ನಗರದ ಪ್ರಮುಖ ರಸ್ತೆಗಳು ಅಭಿವೃದ್ಧಿಯಾಗಿದ್ದರೆ ಪ್ರತಿ ವಾರ್ಡಿನಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಚಿಕ್ಕ ಚಿಕ್ಕ ರಸ್ತೆಗಳು ಡಾಂಬರೀಕರಣ ಆಗಿಲ್ಲ ಗುಂಡಿ ಗೊಂಟರುಗಳಿಂದ ಕೂಡಿದೆ. ಚರಂಡಿಗಳು ತುಂಬಿ ತುಳುಕುತ್ತಿವೆ. ದುರಹಂಕಾರಿ ವರ್ತನೆಯಿಂದ ಬೇಸತ್ತು ಈ ಭಾರಿ ಮತದಾರರು ಬದಲಾವಣೆ ಬಯಸಿದ್ದಾರೆ ಎಂದರು.ಮೂಲಭೂತ ಸೌಕರ್ಯಗಳನ್ನು ಬದಗಿಸುವಲ್ಲಿ ಹಾಲಿ ಶಾಸಕರು ವಿಫಲವಾಗಿದ್ದಾರೆ ಕಾಂಗ್ರೆಸ್ ಪಕ್ಷ ಘೋಷಿಸಿರುವ 5 ಗ್ಯಾರಂಟಿಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಾಗುವುದು ಎಂದು ಹೇಳಿದ ಅವರು ರಾಜ್ಯದ, ರಾಷ್ಟ್ರದ ಮಾಸ್ ಲೀಡರ್‍ಗಳನ್ನು ಸಿ.ಟಿ ರವಿಯವರು ಅವಮಾನಿಸುತ್ತಿರುವುದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದೆ ಆದ್ದರಿಂದ ಈ ಭಾರಿ ಜನಪರವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯಗೆ ಮತ ನೀಡಬೇಕೆಂದು ವಿನಂತಿಸಿದರು.
ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಗೆ 2 ಸಾವಿರ ರೂ, ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ಸೇರಿದಂತೆ ಹಲವಾರು ಜನಪರವಾಗಿರುವ ಯೊಜನೆಗಳ ಜಾರಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕಾಗಿ ಮನವಿ ಮಾಡಿದ ರೇಖಾ ಬಿಜೆಪಿಯವರಿಂದ ಹಣ ಪಡೆದು ಅವರಿಗೆ ಮತ ಹಾಕಿದರೆ ಅವರ ಪಾಪದಲ್ಲಿ ನೀವು ಪಾಲು ತೆಗೆದುಕೊಂಡಂತಾಗುತ್ತದೆ ಆದ್ದರಿಂದ ಬಿಜೆಪಿ ಹಣ ಪಡೆದು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕೆಂದು ಹೇಳಿದರು.

 

 

ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಮಾತನಾಡಿ ಈ ಉರಿಬಿಸಿಲಿನಲ್ಲಿಯೂ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಪಡೆಯ ಶ್ರಮ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಫüಲಿಸುತ್ತದೆ. ನನ್ನ ಗೆಲುವಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನ ಮೃತರಾದರು ಅವರಾರು ಹಸಿವಿನಿಂದ ಸಾಯಲಿಲ್ಲ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರತಿಯೊಬ್ಬ ನಾಗರೀಕರಿಗೆ 7 ಕೆ.ಜಿ ಅಕ್ಕಿ ನೀಡಿತ್ತು ಆದರೆ ಬಿಜೆಪಿಯ ಸರ್ಕಾರ ಕೇವಲ ತಲಾ 4 ಕೆ.ಜಿಯಂತೆ ಅಕ್ಕಿ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿದರು.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಿಸಿದೆ. ಬಡವರ ಬದುಕಿನ ಪರವಾಗಿ ನಿಲ್ಲುತ್ತದೆ ಸ್ಥಳೀಯ ಶಾಸಕರ ಗೆಲುವಿಗೆ ನಾನು ರೇಖಾ ಸೇರಿದಂತೆ ಹಲವಾರು ಜನರ ಪರಿಶ್ರಮ ಕಾರಣ ಆದರೆ ಶಾಸಕ ಸಿ.ಟಿ ರವಿ ಅಧಿಕಾರದ ಅಮಲು ನೆತ್ತಿಗೇರಿದ್ದು ಎಲ್ಲರನ್ನು ತುಚ್ಚವಾಗಿ ಕಾಣುತ್ತಾ ದುರಹಂಕಾರಿ ವರ್ತನೆಯಿಂದ ಬೇಸತ್ತು ಹೊರ ಬಂದೆ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆಯನ್ನು ಕೈಗೆ ತೆಗೆದುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಕೀರ್ತಿ ಏನಾದರು ಇದ್ದರೆ ಅದು ಸಿ.ಟಿ ರವಿಯವರಿಗೆ ಸಲ್ಲುತ್ತದೆ. ತಿಂಗಳಲ್ಲಿ 25 ದಿನ ಹೊರ ರಾಜ್ಯಗಳಲ್ಲಿ ಪ್ರವಾಸದಲ್ಲಿರುತ್ತಾರೆ ಅವರನ್ನು ತಿರಸ್ಕರಿಸಿ ಸ್ಥಳೀಯವಾಗಿ ನಿಮಗೆ ಸದಾ ಸಿಗುವ ನನ್ನನ್ನು ಕ್ರ.ಸಂ 2. ಹಸ್ತದ ಗುರುತಿಗೆ ಮತ ನೀಡುವ ಮೂಲಕ ತಮ್ಮ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಮತ ಪ್ರಚಾರ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ. ಮಹಮದ್, ವಕ್ತಾರ ರೂಬಿನ್ ಮೊಸಸ್, ಅಲ್ಪ ಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ನಯಾಜ್ ಅಹಮದ್, ಸಹನಾ ರೋಬನ್, ಬಿ.ಎಸ್ ಮಹಮದ್, ಸಿಲ್ವೆಸ್ಟರ್, ಫಿಲೋಮಿನ, ಮಧುಗೌಡ, ಜೋಷಿ, ಜುಬಿ, ಪ್ಯಾರಜಾನ್, ಭರತ್ ತನೂಜ್ ಕುಮಾರ್ ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!