May 2, 2024

MALNAD TV

HEART OF COFFEE CITY

ಕಾಫಿ ಬೆಳೆಗಾರರ ಹಲವು ಬೇಡಿಕೆ ಆಗ್ರಹಿಸಿ ಪ್ರತಿಭಟನೆ

1 min read

ಚಿಕ್ಕಮಗಳೂರು : ಕಾಫಿ ಫ್ಲಾಂಟರ್ ಎಂದರೆ ನೂರಾರು ಜನರಿಗೆ ಆಶ್ರಯ ದಾತ, ಸದಾ ಹಚ್ಚ ಹಸುರಿನ ನಾಡಿನಲ್ಲಿ ಇರುವವರು. ಶ್ರೀಮಂತಿಕೆಯ ಅಗ್ರಗಣ್ಯರು ಎಂಬ ಇತ್ಯಾದಿ ಬಿರುದು ಬಾವಲಿಗಳಿಗೆ ಹೆಸರಾದ ಕಾಫಿ ಬೆಳೆಗಾರರ ಬದುಕು ಸಮುದ್ರದೊಂದಿಗೆ ನೆಂಟಸ್ಥಿಕೆ ಉಪ್ಪಿಗೆ ಬಡತನ ಎಂಬಂತಾಗಿದೆ. ಹೌದು ಕಾಫಿಯ ನಾಡು, ಕಾಫಿಯ ಕಣಜ, ಶ್ರೀಮಂತಿಕೆಯ ದಿಕ್ಸೂಚಿ, ಲಕ್ಷಾಂತರ ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಟ ಉಧ್ಯಮ, ಹೀಗೆ ನಾನಾ ಹಿರಿಮೆ ಗರಿಮೆಗಳನ್ನು ತನ್ನ ಮುಡಿಗೆ ಸೇರಿಸಿಕೊಂಡಿದ್ದ ಕಾಫಿ ಉಧ್ಯಮವು ಇಂದು ಪ್ರಕೃತಿಯ ಮುನಿಸಿನಿಂದ, ಬೆಂಬಲ ಬೆಲೆಯ ಪ್ರೋತ್ಸಾಹವಿಲ್ಲದೆ, ಸರ್ಕಾರದ ನಿರ್ಲಕ್ಷ ದೋರಣೆಯಿಂದ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿ ತನ್ನ ನಂಬಿ ಬದುಕು ದೂಡುತ್ತಿದ್ದ ಕಾಫಿ ಮಾಲೀಕರ ಬದುಕನಷ್ಟೇ ಅಲ್ಲದೆ ಸಾವಿರಾರು ಕಾರ್ಮಿಕರ ಬದುಕನ್ನು ಬೀದಿಗೆ ದೂಡುತ್ತಿದೆ ಇದು ನಿಜಕ್ಕೂ ಮಲೆನಾಡಿಗರಿಗಂತೂ ದುಂಖದ ಸಂಗತಿಯಾಗಿದೆ.

ಇಂತಹ ಕಾಪಿ ಉದ್ಯಮದ ಮಂಡಳಿಯನ್ನು ಉಳಿಸಿ, ಕಾಫಿ ಬೆಳೆಗಾರರಿಗೆ ಸೂಕ್ತ ಸೌಲಭ್ಯ ನೀಡುವಂತೆ ಆಗ್ರಹಿಸಿ ಹಾಗೂ ವಿದೇಶಿ ಕಾಳು ಮೆಣಸು ನಿಲ್ಲಿಸಿ, ದೇಶಿಯ ಕಾಳು ಮೆಣಸು ಉಳಿಸಿ ಎಂಬ ಆಗ್ರಹದೊಂದಿಗೆ ಆಲ್ದೂರು ಕಾಫಿ ಬೆಳೆಗಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿಂದು ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ಮೈದಾನದಲ್ಲಿ ಸೇರಿದ ಕಾಫಿ ಬೆಳೆಗಾರರು ಕೇಂದ್ರ ಸರ್ಕಾರದ ಕಾಫಿ ಉಧ್ಯಮ ವಿರೋಧಿ ನೀತಿಯ ವಿರುದ್ದ ಘೋಷಣೆ ಕೂಗಿದರು. ಕೇಂದ್ರ ಸರ್ಕಾರವು ಕಾಫಿ ಬೆಳೆಗಾರರಿಗೆ ನೀಡುತ್ತಿದ್ದ ಸೌಲಭ್ಯಗಳನ್ನು ನಿಲ್ಲಿಸುವ ಮೂಲಕ ಸರ್ಕಾರದ ಅನುದಾನ ತಡೆದಿದೆ. ಕಾಫಿ ಮಂಡಳಿಯ ಶಕ್ತಿ ಕುಂದಿಸಲು ಮಾರುಕಟ್ಟೆ ವಿಭಾಗವನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ. ಕಾಫಿ ಮಂಡಳಿಯೆಂಬ ಸರ್ಕಾರಿ ಸಾಮ್ಯದ ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಮುಚ್ಚುವುದನ್ನು ವಿರೋಧಿಸಿ, ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಸಿ,  ಜಿಲ್ಲೆಯಲ್ಲಿರುವ ಶಾಖಾ ಕೇಂದ್ರಗಳನ್ನು ಮುಚ್ಚುವುದನ್ನು ವಿರೋಧಿಸಿ ಹಾಗೂ ವಿದೇಶದಿಂದ ಕಾಳು ಮೆಣಸು ಆಮದು ನಿಲ್ಲಿಸಿ ದೇಶಿಯ ಕಾಳು ಮೆಣಸು ಉಳಿಸುವಂತೆ ಆಗ್ರಹಿಸಿ ಗಾಂಧಿ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಕ್ಕೋತ್ತಾಯ ಪತ್ರ ನೀಡಿದ್ರು.

ಕಾಫಿ ಬೆಳೆಗಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸರ್ಕಾರ ಮತ್ತು ನಾನು ಇದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಾಫಿ ಉಧ್ಯಮ ಉಳಿವಿಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ಶಾಂತಿ ರೀತಿಯಲ್ಲಿ ಹಾಗೂ ಗೌರವಯುತವಾಗಿ ಪ್ರತಿಭಟನೆ ನಡೆಸಿರುವ ಕಾಫಿ ಬೆಳೆಗಾರರ ಹಕ್ಕೋತ್ತಾಯಗಳಾದ ಕೇಂದ್ರ ಸರ್ಕಾರವು ಕಾಫಿ ಬೆಳೆಗಾರರಿಗೆ ನೀಡುತ್ತಿದ್ದ ಸೌಲಭ್ಯಗಳನ್ನು ಮುಂದುವರೆಸುವುದು. ಕಾಫಿ ಮಂಡಳಿಯ ಶಕ್ತಿ ಹೆಚ್ಚಿಸಲು ಮಾರುಕಟ್ಟೆ ವಿಭಾಗಕ್ಕೆ ಚೈತನ್ಯ ನೀಡುವುದು. ಕಾಫಿ ಮಂಡಳಿಯೆಂಬ ಸರ್ಕಾರಿ ಸಾಮ್ಯದ ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಮುಚ್ಚುವುದನ್ನು ತಡೆಯುವುದು, ಹಾಗೂ ವಿದೇಶದಿಂದ ಕಾಳು ಮೆಣಸು ಆಮದು ನಿಲ್ಲಿಸಿ ದೇಶಿಯ ಕಾಳು ಮೆಣಸು ಉಳಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಕಾಫಿ ಬೆಳೆಗಾರರ ಕೋಪವನ್ನು ಕಿಡಿಯಲ್ಲಿಯೇ ಶಮನ ಮಾಡುತ್ತಾರೆಯೇ ಕಾದು ನೋಡಬೇಕು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!