May 9, 2024

MALNAD TV

HEART OF COFFEE CITY

ರಕ್ತದಾನ ಮಹಾದಾನ, ರಕ್ತಕ್ಕೆ ಯಾವುದೇ ಜಾತಿಬೇದ ಇಲ್ಲ- ಮೋಹನ್‌ಕುಮಾರ್

1 min read

ಚಿಕ್ಕಮಗಳೂರು-ರಕ್ತದಾನ ಮಹಾದಾನ, ರಕ್ತಕ್ಕೆ ಯಾವುದೇ ಜಾತಿಬೇದ ಇಲ್ಲ, ರಕ್ತದ ಅವಶ್ಯಕತೆ ಇದ್ದಾಗ ಎಲ್ಲಾ ಜಾತಿ ಜನಾಂಗದವರು ರಕ್ತದಾನ ಮಾಡಿದಾಗ ಮಾತ್ರ ಸಮಾನತೆ ಕಾಣಲು ಸಾಧ್ಯ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಮೋಹನ್‌ಕುಮಾರ್ ತಿಳಿಸಿದರು.ಅವರು ಇಂದು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಅಖಿಲ ಭಾರತೀಯ ತೇರಾಪಂಥ್ ಯುವ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು.18 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ ಯಾರುಬೇಕಾದರೂ ರಕ್ತದಾನ ಮಾಡಬಹುದಾಗಿದೆ, ಈ ನಿಟ್ಟಿನಲ್ಲಿ ಚಿಕ್ಕಮಗಳೂರು ರಕ್ತನಿಧ ಕೇಂದ್ರ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.ರಕ್ತದಾನ ಮಾತ್ರವಲ್ಲ ಬಿಳಿರಕ್ತಕಣ ಪ್ರತ್ಯೇಕಿಸುವ ಯಂತ್ರಗಳನ್ನು ಸುಸ್ತಿತಿಯಲ್ಲಿಡಲು ಶ್ರಮವಹಿಸುತ್ತಿದ್ದೇವೆ, ರೋಗಿಗಳಿಗೆ ಅಗತ್ಯವಿದ್ದಾಗ ಬೇರೆ ಬೇರೆ ಜಿಲ್ಲೆಗಳಲ್ಲಿ ರಕ್ತ ಪಡೆಯುತ್ತಿದ್ದು, ಅವರ ಸಹಕಾರಕ್ಕೆ ಧನ್ಯವಾದಗಳನ್ನು ಹೇಳಿದರು.ರಕ್ತದ ಅವಶ್ಯಕತೆ ಇರುವ ರೋಗಿಯ ಸಂಬAಧಿಗಳಿಗೆ ಒತ್ತಡ ಹಾಕದೆ ಸ್ವಯಂ ಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸಬೇಕು ಇದಕ್ಕಾಗಿ ದಾನಿಗಳ ಸಂಖ್ಯೆ ದೊಡ್ಡದಿದ್ದು, ಅಗತ್ಯವಿದ್ದಾಗ ಬಂದು ರಕ್ತ ನೀಡುತ್ತಿದ್ದಾರೆ, ಅಪರೂಪದ ರಕ್ತದ ಗುಂಪುಗಳಿರುವ ದಾನಿಗಳನ್ನು ಗುರುತಿಸಿಟ್ಟುಕೊಳ್ಳಬೇಕಾಗಿದೆ ಎಂದರು.ರಕ್ತದಾನಿ ರಕ್ತನಿಧಿಗೆ ವಿಐಪಿಗಳಿದ್ದಂತೆ  ಅವರಿಲ್ಲದಿದ್ದರೆ ಇಂತಹ ಉತ್ತಮ ಕಾರ್ಯಗಳನ್ನು ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ಹೆಚ್ಚು ಹೆಚ್ಚು ರಕ್ತದಾನಿಗಳು ನೊಂದಾಯಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.ವಿವಿಧ ರೋಗಗಳಿಂದ, ಆಲ್ಕೋಹಾಲ್ ಅಭ್ಯಾಸ ಇರುವವರು ಹಣಕ್ಕಾಗಿ ರಕ್ತದಾನ ಮಾಡುವುದನ್ನು ತಿರಸ್ಕರಿಸಬೇಕು, ಈ ನಿಟ್ಟಿನಲ್ಲಿ ಸ್ವಯಂಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸುವುದರ ಜೊತೆಗೆ ಸಕಾಲದಲ್ಲಿ ಸರಿಯಾದ ಗುಂಪಿನ ರಕ್ತ ದೊರೆಯಲು ಸಹಕರಿಸಬೇಕೆಂದು ಮನವಿ ಮಾಡಿದ ಅವರು ಈ ಮಹತ್ ಕಾರ್ಯಗಳಲ್ಲಿ ತೊಡಗಿದವರಿಗೆ ಚಿರಋಣಿಯಾಗಿರುತ್ತೇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿರುವುದರಿAದ ಆರೋಗ್ಯ ಸೇವೆಗಳು ಬಹಾಳ ಸುಧಾರಿಸುತ್ತಿವೆ. ರೋಗಿಗಳು ಪಕ್ಕದ ಜಿಲ್ಲೆಗಳಿಗೆ ಹೋಗದಂತೆ ಎಲ್ಲಾ ರೀತಿಯ ಸೌಲಭ್ಯಗಳು ಒಂದೇ ಸೂರಿನಡಿ ಇಲ್ಲಿಯೇ ಸಿಗುವಂತಾಗಬೇಕು ಎಂದು ತಿಳಿಸಿದರು.ತೇರಾಪಂಥ್ ಯುವ ಪರಿಷತ್ ಅಧ್ಯಕ್ಷ ನಿತೀಶ್‌ಕುಮಾರ್ ಜೈನ್ ಮಾತನಾಡಿ, ರಕ್ತದಾನ ಮಹಾದಾನ, ಜೀವದಾನಕ್ಕಾಗಿ ರಕ್ತದಾನ ಮಾಡಿ ಜೀವ ಉಳಿಸಿ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡಲು ಮನವಿ ಮಾಡಿದರು.ಸಂಘದ ವತಿಯಿಂದ 2012 ರಲ್ಲಿ ಮೆಘಾ ರಕ್ತದಾನ ಶಿಭಿರವನ್ನು ಆರಂಭ ಮಾಡಿ 2023 ರಲ್ಲಿ ವಿಶ್ವದ 38 ರಾಷ್ಟçಗಳಲ್ಲಿ 6 ಸಾವಿರಕ್ಕೂ ಹೆಚ್ಚು ರಕ್ತದಾನ ಶಿಭಿರಗಳನ್ನು ಆಯೋಜಿಸುವ ಮೂಲಕ 2.50 ಲಕ್ಷ ರಕ್ತ ಸಂಗ್ರಹ ಮಾಡಲಾಗಿದೆ. ಇದೊಂದು ಹೆಮ್ಮೆಯ ಸಂಗತಿ ಎಂದು ಹೇಳಿದರುಸಮಾಜದಲ್ಲಿ ಬೇರೆ ಬೇರೆ ದಾನಗಳಿದ್ದು, ಕಣ್ಣುದಾನ ಮಾಡುತ್ತಿದ್ದಾರೆ ಇದರಿಂದ ಸಾವಿರಾರು ಜನರು ಉಪಯೋಗ ಪಡೆದುಕೊಂಡು ಜಗತ್ತನ್ನು ನೋಡುವ ಅಭಿಲಾಷೆಯನ್ನು ಈಡೇರಿಸಿದ್ದಾರೆ. ಇದಕ್ಕೆ ದೇಶದ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಲಭ್ಯವಾಗುತ್ತಿದ್ದು, ಚಿಕ್ಕಮಗಳೂರಿನಲ್ಲಿಯೂ ಯಶಸ್ವಿಯಾಗಲಿ ಎಂದು ಹಾರೈಸಿದರು.

ಡಾ|| ಮುರುಳೀಧರ್ ಮಾತನಾಡಿ, ಪರಿಷತ್ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ಸೌರ್ವಜನಿಕ ಸೇವೆಗೆ ಉಪಯೋಗವಾಗುವ ರೀತಿ ಕಾರ್ಯಕ್ರಮಗಳಾದ ಕುಡಿಯುವ ನೀರಿನ ಘಟಕ, ರಕ್ತದಾನ ಶಿಭಿರ, ಕಣ್ಣುದಾನ ಮುಂತಾದ ಜನಪರ ಸೇವೆಗಳನ್ನು ಕೈಗೊಳ್ಳುತ್ತಿವೆ ಎಂದು ಶ್ಲಾಘಿಸಿದರು.ಲಯನ್ಸ್ ಸಂಸ್ಥೆ ಜಿಲ್ಲಾಧ್ಯಕ್ಷ ಜಿ.ರಮೇಶ್ ಮಾತನಾಡಿ, ಸಂಸ್ಥೆಯಿAದ 500 ಆರೋಗ್ಯ ಕ್ಯಾಂಪ್‌ಗಳನ್ನು ನಡೆಸಲು ಗುರಿ ಹೊಂದಲಾಗಿದ್ದು, ಈ ಮೂಲಕ ರಕ್ತದಾನ ಶಿಭಿರ, ಉಚಿತ ಆರೋಗ್ಯ ತಪಾಸಣಾ ಶಿಭಿರಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲಾ ಸಂಘಸAಸ್ಥೆಗಳು ಈ ರೀತಿ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ನಗರಸಭೆ ಸದಸ್ಯ ವಿಫುಲ್‌ಕುಮಾರ್ ಜೈನ್ ಮಾತನಾಡಿ ರಕ್ತ ದಾನ ಎಂಬುದು ಮಹಾ ದಾನವಿದ್ದಂತೆ, ರಕ್ತ ದಾನ ಮಾಡುವುದರಿಂದ ಒಂದು ಜೀವ ದಾನ ಮಾಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತೇರಾಪಂತ್ ಸಭ ಅಧ್ಯಕ್ಷ ತಾರಾಚಂದ್‌ಜೈನ್ ಭರತ್‌ಬರ್ಲೋಟ, ತೇರಾಪಂತ್ ಟ್ರಸ್ಟ್ ಅಧ್ಯಕ್ಷ ಅಶೋಕ್‌ದೋಷಿ, ಜೈನ್ ಸಂಘದ ಅಧ್ಯಕ್ಷ ಕಾಂತಿಲಾಲ್ ಖಿವೆಸರ್, ಮಹಿಳಾ ಮಂಡಲ ಮಂತ್ರಿ ನರೀತ ಗಾಧಿಯ, ಅನುವೃತ ಸಮಿತಿ ಅಧ್ಯಕ್ಷ ಮಂಜು ಬನ್ಸಾಲಿ, ತೆರಾಪಂಥ್ ಯುವಕ ಪರಿಷತ್ ಉಪಾಧ್ಯಕ್ಷ ಜಸ್ವಂತ್‌ದೋಷಿ, ಹಿತೇಶ್‌ಜೈನ್, ರಾಕೇಶ್‌ಕಾವಾಡಿಯ, ಸಂಘಟನಾ ಕಾರ್ಯದರ್ಶಿ ಮುಕೇಶ್‌ಕೊಠಾರಿ, ಖಜಾಂಚಿ ಸುನಿಲ್‌ದೋಷಿ, ಎಂ.ಬಿ.ಡಿ.ಡಿ ಕನ್ವೀನರ್ ನಿತೇಶ್‌ಗಾದಿಯ, ಪೂರ್ವ ಅಧ್ಯಕ್ಷ ಅಶೋಕ್‌ಗಾದಿಯ, ಪ್ರೋಫೆಷನಲ್ ಫೋರಮ್ ಅಧ್ಯಕ್ಷ ಹರ್ಶಿತ್‌ದೋಷಿ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!