May 15, 2024

MALNAD TV

HEART OF COFFEE CITY

ಆಮ್‌ಆದ್ಮಿ ಜನಸಾಮಾನ್ಯರ ಪಕ್ಷ ಮುಖ್ಯಮಂತ್ರಿ ಚಂದ್ರು

1 min read

ಚಿಕ್ಕಮಗಳೂರು: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ಜಾತೀಯತೆ, ಕೋಮುವಾದ ಕುಟುಂ ಬ ರಾಜಕಾರಣ ಮಾಡುತ್ತಿದ್ದು ಸಾಮಾನ್ಯ ವ್ಯಕ್ತಿ ರಾಜಕೀಯದಲ್ಲಿ ಬೆಳೆಯಲು ಸಹಕರಿಸುವ ಪಕ್ಷ ಆಮ್ ಆದ್ಮಿ ಪಕ್ಷ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ತಿಳಿಸಿದರು.
 ನಗರ ಸಮೀಪದಲ್ಲಿ ನಡೆದ ಆಮ್‌ಆದ್ಮಿ ಪಕ್ಷದ ನೂತನ ಕಚೇರಿ ಉದ್ಘಾಟನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಮ್‌ಆದ್ಮಿ ಪಕ್ಷವು ಜನತೆಯ ತೆರಿಗೆಯ ಹಣದಲ್ಲಿ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ಸಾವಿರಾರು ರೂ.ಗಳನ್ನು ಉಳಿಸುವುದರೊಂದಿಗೆ ಹಲವಾರು ಜನೋಪಯೋಗಿ ಕೆಲಸ ಮಾಡುತ್ತಿದ್ದು, ದೆಹಲಿಯಲ್ಲಿ ಜನತೆ ಅತ್ಯಂತ ಪ್ರಶಂಸಿಸುತ್ತಿದ್ದಾರೆ. ಅದೇ ರೀತಿ ಕರ್ನಾ ಟಕ ರಾಜ್ಯದಲ್ಲೂ ೪೦% ಕಮೀಷನ್ ರೀತಿಯಲ್ಲಿ ಕೆಲಸ ಮಾಡುವ ಪಕ್ಷವನ್ನು ಕಿತ್ತೊಗೆದು ಪ್ರಜೆಗಳ ಕಷ್ಟಗಳನ್ನು ಅರಿಯುವ ಅಭ್ಯರ್ಥಿಯನ್ನು ಗುರುತಿಸುವ ಕೆಲಸ ಮತದಾರರು ಮಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕೊಡುಗೆಗಳು ಶೂನ್ಯವಾಗಿವೆ. ಕೇವಲ ಧರ್ಮ ಹಾಗೂ ಹಣಬಲದಿಂದ ಓಟು ಪಡೆದು ಅಧಿಕಾರ ನಡೆಸುವ ಇವರಿಗೆ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕಬುದ್ದಿ ಕಲಿಸಬೇಕು. ಆ ಉದ್ದೇಶದಿಂದ ಮತದಾರರು ಅಭ್ಯರ್ಥಿಯನ್ನು ಅವರ ಯೋಗ್ಯತೆ, ಕೆಲಸಕ್ಕನುಗುಣವಾಗಿ ನಿಭಾಯಿಸುವಂತವವರನ್ನು ಗುರುತಿಸಿ ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕರ್ತರು ತಮ್ಮ ಕ್ಷೇತ್ರಗಳಲ್ಲಿ ತೆರಳಿ ಎಎಪಿ ವಿಚಾರಗಳನ್ನು ಪ್ರತಿ ಮನೆಗಳಿಗೂ ಮುಟ್ಟಿ ಸುವುದರೊಂದಿಗೆ ಅವರಲ್ಲಿ ಅರಿವು ಮೂಡಿಸಬೇಕು. ಕೇವಲ ಹಣಬಲದಿಂದ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ, ಜನಬೆಂಬಲವಿರಬೇಕು ಎಂಬುದನ್ನು ಮತದಾರರಲ್ಲಿ ತಿಳಿಸುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಅಭಿವೃದ್ದಿಯತ್ತ ಕೊಂಡೊಯ್ಯಲು ಸಹಕರಿಸಬೇಕು ಎಂದರು.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸಾಮಾನ್ಯ ವ್ಯಕ್ತಿ ದೆಹಲಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಪ್ರಧಾನ ಮಂತ್ರಿಗಳು ಗಮನಿಸುವ ರೀತಿಯಲ್ಲಿ ಅಧಿಕಾರ ನಡೆಸುತ್ತಿರುವುದಕ್ಕೆ ಮೂಲ ಕಾರಣ ಅರವಿಂದ್ ಕ್ರೇಜಿವಾಲ್ ಎಂದ ಅವರು, ರಾಜ್ಯದ ಮತದಾರರು ಓಮ್ಮೆಯಾದರೂ ದೆಹಲಿಗೆ ತೆರಳಿ ಅಭಿವೃದ್ದಿಗಳನ್ನು ಅರಿಯುವುದರ ಮೂಲಕ ಎಎಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ಆಮ್‌ಆದ್ಮಿ ಜನಸಾಮಾನ್ಯರ ಪಕ್ಷವಾಗಿದ್ದು ಎಂದಿಗೂ ಜಾತೀಯತೆಯನ್ನು ಬೆಂಬಲಿಸಿಲ್ಲ. ಎಲ್ಲಾ ಜನಾಂಗದವರಿಗೂ ಅವಕಾಶಗಳಿವೆ ಎಂದ ಅವರು, ವಿವಿಧ ಧರ್ಮ, ಭಾಷೆ ಹೊಂದಿರುವ ಭಾರತದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಎಎಪಿ ಯಲ್ಲಿ ಅಭಿವೃದ್ದಿಯನ್ನು ಬಯಸುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ಅಂತಹ ವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯಶರ್ಮ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪಕ್ಷದ ಜಿಲ್ಲಾಧ್ಯಕ್ಷ ಡಾ| ಕೆ.ಸುಂದರಗೌಡ ವಹಿಸಿದ್ದರು. ಈ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಮುಖಂಡರಾದ ಮೋಹನ್, ಎಂ.ಪಿ.ಈರೇಗೌಡ, ಸೈಯದ್ ಜಮೀರ್ ಅಹ್ಮದ್, ರವಿಕುಮಾರ್, ಹೇಮಂತ್, ಪರಮೇಶ್ವರಪ್ಪ, ರಂಗನಾಥ್ ಇದ್ದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!