May 15, 2024

MALNAD TV

HEART OF COFFEE CITY

ನಗರಸಭೆ ಕಾರ್ಯವೈಖರಿ ವಿರುದ್ಧ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎ.ಸಿ.ಕುಮಾರ ಗೌಡ.

1 min read

ಚಿಕ್ಕಮಗಳೂರು: ನಗರಸಭೆ ಕಾರ್ಯವೈಖರಿ ವಿರುದ್ಧ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ನಗರಸಭೆ ಸದಸ್ಯ ಎ.ಸಿ.ಕುಮಾರ ಗೌಡ ತಿಳಿಸಿ ದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕಿನಡಿ ಯಲ್ಲಿ ಅರ್ಜಿ ಸಲ್ಲಿಸಿದರೇ ನಗರಸಭೆಯಿಂದ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಗರಸಭೆ ಯಲ್ಲಿ ನಡೆದಿರುವ ಅಕ್ರಮ ಅವ್ಯವಹಾರ ಬಯಲಿಗೆ ಬರುತ್ತದೆ ಎಂಬ ಕಾರಣಕ್ಕೆ ನನ್ನನ್ನೇ ಗುರಿಯಾಗಿಸಿಕೊಂಡು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಹೇಳಿಕೆ ನೀಡಿದ್ದರು. ಶಾಸಕ ಸಿ.ಟಿ.ರವಿ ಕೆರೆ, ರುದ್ರಭೂಮಿ ಒತ್ತುವರಿ ತೆರವುಗೊಳಿಸುವುದಾಗಿ ಹೇಳಿ ದ್ದು ನಗರಸಭೆ ನಿಯಮ ಧಿಕ್ಕರಿಸಿ ಕಟ್ಟಡ ನಿರ್ಮಿಸಿರುವ 15 ಕಟ್ಟಡಗಳ ಪಟ್ಟಿಯನ್ನು ನಗರ ಸಭೆಗೆ ನೀಡಿದ್ದು ಪರಿಶೀಲಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ನಗರಸಭೆ ಕಾನೂನು ಬದ್ಧವಾಗಿ ಮನೆ ನಿರ್ಮಿಸಿಕೊಂಡ ನನ್ನ ಮನೆಗಳಿಗೆ ನೋಟಿಸ್ ಅಂಟಿಸಿದ್ದಾರೆ. ಮನೆ ಆವರಣ ಪ್ರವೇಶಿಸದಂತೆ ತಡೆಯಾಜ್ಞೆ ತಂದಿದ್ದರೂ. ನಾನು ಇಲ್ಲದ ಸಮಯದಲ್ಲಿ ಮನೆಗೆ ಬಂದು ಮನೆಯ ಸುತ್ತಳತೆಯನ್ನು ಸಿಡಿಎ ಮತ್ತು ನಗರಸಭೆ ಅಧಿ ಕಾರಿಗಳು ಪಡೆದುಕೊಂಡು ಹೋಗಿದ್ದಾರೆ ಎಂದರು.
ನಗರಸಭೆಯಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಕೆಲಸ ಮಾಡಲಾಗುತ್ತಿದೆ. ನಗರಸಭೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಮುಖಾ ಮುಖಿ ಚರ್ಚೆಗೆ ಸಿದ್ಧರಿದ್ದು, ನಗರ ಸಭೆ ಅಧ್ಯಕ್ಷರು ಚರ್ಚೆಗೆ ಬರುವಂತೆ ಆಹ್ವಾನಿಸಿದರು.

ಜಿಲ್ಲಾಧಿಕಾರಿಗಳ ಮಾತನ್ನು ನಗರಸಭೆ ಆಯುಕ್ತರು ಕೇಳುತ್ತಿಲ್ಲ. ಈ ಹಿಂದಿನ ಜಿಲ್ಲಾಧಿಕಾರಿ ಸತ್ಯವತಿಯವರು 8 ಅಕ್ರಮ ಕಟ್ಟಡಗಳನ್ನು ತಡೆಹಿಡಿದಿದ್ದರು. ಆ ಕುರಿತು ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಅವರು ಮಾಹಿತಿ ಕೇಳಿದ್ದು, ನಗರಾಭಿವೃದ್ಧಿ ಕೋಶ ದಲ್ಲಿ ಮಾಹಿತಿ ಕೇಳಿದರೆ 3 ಫೈಲ್ ಸಿಕ್ಕಿವೆ, 5ಫೈಲ್ ಕಾಣುತ್ತಿಲ್ಲವೆಂದು ಹೇಳುತ್ತಾರೆ ಎಂದರು.
ಪೌರಾಯುಕ್ತರು, ನಗರಸಭೆ ಅಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷರುಗಳು ಮನೆಯನ್ನು ಕಾನೂನು ಬದ್ಧವಾಗಿಯೇ ನಿರ್ಮಿಸಿಕೊಂಡಿದ್ದಾರೆಯೇ? ಸರ್ಕಾರಿ ಸಂಸ್ಥೆಯಲ್ಲಿ ಸಾರ್ವಜನಿಕರ ಮತ್ತು ಸದಸ್ಯರ ಅರ್ಜಿಯನ್ನು ಸ್ವೀಕರಿಸಿದಿರುವ ಕಾರಣವೇನು? ಕಾನೂನು ಬಾಹಿರವಾಗಿ ಸಿಬ್ಬಂದಿಗಳಿಗೆ ಕೆಲಸವಹಿಸುವ ನಿಮ್ಮೆ ನಡೆಯ ಉದ್ದೇಶವೇನು ಎಂದು ಪ್ರಶ್ನಿಸಿದರು.
ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ರಂಜನ್‌ಅಜಿತ್‌ಕುಮಾರ್ ಮಾತನಾಡಿ, ಪಕ್ಷದ ನಗರಸಭೆ ಸದಸ್ಯರ ಹೋರಾಟಕ್ಕೆ ಪಕ್ಷದ ಬೆಂಬಲವಿದೆ. ಉಗ್ರಹೋರಾಟ ನಡೆಸುವ ಮೂ ಲಕ ನಗರ ಜನತೆಗೆ ನ್ಯಾಯದೊರಕಿಸಿಕೊಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಗೋಪಿ, ಪಕ್ಷದ ಮುಖಂಡರಾದ ಸಿ.ಕೆ.ಮೂರ್ತಿ, ಇರ್ಷಾದ್ ಅಹ್ಮದ್, ನಂದನ್, ಮಂಜುನಾಥ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!