May 9, 2024

MALNAD TV

HEART OF COFFEE CITY

ರಾಜಸ್ಥಾನದಿಂದ ಬಂದು ಹಣಕ್ಕಾಗಿ ಪೀಡಿಸಿದ ಯುವತಿಯರ ಗುಂಪು – ಯುವತಿಯರಿಗೆ ಕ್ಲಾಸ್ ತೆಗೆದುಕೊಂಡ ಕಾಫಿನಾಡಿಗರು

1 min read

 ಪ್ರಕೃತಿ ವಿಕೋಪದಿಂದ ಮನೆ ಆಸ್ತಿ ಕಳೆದುಕೊಂಡಿದ್ದೇವೆ ಎಂದು ಅನುಕಂಪ ಮೂಡಿಸಿ ನಗರದಲ್ಲಿ ಯುವತಿಯರ ಗುಂಪೊಂದು ಬಲವಂತವಾಗಿ ಹಣ ವಸೂಲಿ ಮಾಡುತ್ತಿದೆ.ರಾಜಸ್ಥಾನದಿಂದ ಬಂದಿರುವ ಈ ಯುವತಿಯರು ಸೊಗಸಾಗಿ ಡ್ರಸ್ ಮಾಡ್ಕೊಂಡು ಬಂದು ಹಣ ವಸೂಲಿ ಮಾಡುತ್ತಿದ್ದಾರೆ. 10, 20 ರೂ ಕೊಟ್ಟರೆ ತೆಗೆದುಕೊಳ್ಳುವುದಿಲ್ಲ 100, 200 ರೂಗಳನ್ನು ಕೊಡಬೇಕೆಂದು ನಗರದ ನಾಗರೀಕರಲ್ಲಿ ಬಲವಂತವಾಗಿ ಹಣ ಕೇಳುತ್ತಿದ್ದಾರೆ.ನಗರದ ಮನೆ, ಅಂಗಡಿಗಳಿಗೆ ಬರುವ ಈ ಯವತಿಯರ ಗುಂಪು ಹಣಕ್ಕಾಗಿ ಬೇಡಿಕೆ ಇಡುತ್ತದೆ ಮನೆ ಬಿದ್ದು ಹೋಗಿದೆ, ಹಾಕೋಕೆ ಬಟ್ಟೆ ಇಲ್ಲ, ತಂದೆ ತಾಯಿ ಕಷ್ಟದಲ್ಲಿದ್ದಾರೆ. ಎಂಬಿತ್ಯಾದಿ ಮಾತುಗಳನ್ನು ಹೇಳಿ ಅನುಕಂಪ ಬರುವಂತೆ ನಟಿಸಿ ಹಣ ಕೇಳುತ್ತಿದ್ದಾರೆ.ಈ ರೀತಿ ಅನುಕಂಪದ ಮಾತುಗಳನ್ನಾಡುವ ಯುವತಿಯರ ಬಗ್ಗೆ ನಗರದ ನಾಗರೀಕರು ಎಚ್ಚರ ವಹಿಸಿ ಯಾವುದೇ ಕಾರಣಕ್ಕೂ ಹಣ ನೀಡಬಾರದೆಂದು ಪೋಲೀಸ್ ಇಲಾಖೆ ಮನವಿ ಮಾಡಿದೆ ಆದರೂ ಹಣ ಕೊಡುವಂತೆ ಪೀಡಿಸಿದರೆ ಹತ್ತಿರದ ಪೋಲೀಸ್ ಠಾಣೆಗೆ ದೂರು ನೀಡುವಂತೆ ಕೋರಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!