April 27, 2024

MALNAD TV

HEART OF COFFEE CITY

ಮೇ 27 ಮತ್ತು 28 ರಂದು 2 ಹಂತದ ಎಮ್.ಆರ್.ಎಫ್ ರ‍್ಯಾಲಿ

1 min read

ಚಿಕ್ಕಮಗಳೂರು : ಮೇ 27 ಮತ್ತು 28 ರಂದು 2 ಹಂತದ ಎಮ್.ಆರ್.ಎಫ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿ ಅಭಿಜಿತ್ ಪೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಮ್.ಆರ್.ಎಫ್ ನ್ಯಾಷನಲ್ ಛಾಂಫಿಯನ್ ಷಿಫ್ ರ್ಯಾಲಿಯ 2 ನೇ ಹಂತದ ರ್ಯಾಲಿಯನ್ನು ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದು, ಮೊದಲನೇ ಹಂತದ ರ್ಯಾಲಿಯು ಕೊಡಗಿನಲ್ಲಿ ನಡೆದಿದ್ದು, 3 ಮತ್ತು 4 ನೇ ಹಂತದ ಕೊಯಮತ್ತೂರು, ಬೆಂಗಳೂರು ಮತ್ತು ಪೂನದಲ್ಲಿ ನಡೆಯಲಿದೆ. ಚಿಕ್ಕಮಗಳೂರಿನಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಭಾಗಹಿಸಲು ದೇಶದ ವಿವಿಧ ರಾಜ್ಯಗಳಿಂದ ಈಗಾಗಲೇ 130 ಜನ ಸ್ಪರ್ಧಾಳುಗಳು ಹೆಸರು ನೋಂದಣಿ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದು, ಇದರು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಅವರಲ್ಲಿ 9 ಜನ ಮಹಿಳೆಯರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ರ್ಯಾಲಿಯಲ್ಲಿ ಬೈಕ್ ನ ಸಿಸಿ ಗೆ ಅನುಗುಣವಾಗಿ 9 ವಿಭಾಗಗಳಿದ್ದು, ತಿಪ್ಪೆನಹಳ್ಳಿ ಎಸ್ಟೆಟ್ ನಲ್ಲಿ 6 ಕಿ.ಮೀ ಹಾಗೂ ವಸಂತಕೋಲ್ ನಲ್ಲಿ 8 ಕಿ.ಮೀ ರ್ಯಾಲಿಯನ್ನು ಆಯೋಜಿಸಲಾಗಿದೆ. ಕರ್ನಾಟಕದವರಿಗೆ ಹಾಗೂ ಚಿಕ್ಕಮಗಳೂರು ಸ್ಪರ್ಧಾಳುಗಳಿಗೆ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!