April 30, 2024

MALNAD TV

HEART OF COFFEE CITY

ಪುನೀತ್ ಬ್ಯಾನರ್ ಹಿಡಿದು ಬೆಟ್ಟ ಹತ್ತಿದ ಪುನೀತ್ ಅಭಿಮಾನಿ

1 min read

ಚಿಕ್ಕಮಗಳೂರು ನಗರದ ಅರವಿಂದ ನಗರದ ಪುನೀತ್ ರಾಜ್ ಕುಮಾರ್ ಅಭಿಮಾನಿಯೋರ್ವ ದೇವಿರಮ್ಮನ ಬೆಟ್ಟ ಹತ್ತುವಾಗ ಎದೆ-ಬೆನ್ನಿನ ಮೇಲೆ ಅಪ್ಪು ಇರುವ ಟೀ ಶರ್ಟ್ ಧರಿಸಿ, ಭುಜದ ಮೇಲೆ ಅಪ್ಪುವನ ಬ್ಯಾನರ್ ಹಿಡಿದು ದೇವೀರಮ್ಮನ ಬೆಟ್ಟ ಹತ್ತಿ ಗಮನ ಸೆಳೆದಿದ್ದಾರೆ. ಸೋಮವಾರ ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತರದಲ್ಲಿ ನೆಲೆಸಿರೋ ತಾಲೂಕಿನ ಬಿಂಡಿಗ ದೇವೀರಮ್ಮ ಜಾತ್ರೆ ಇತ್ತು. ಇದೇ ವೇಳೆ, ಅಪ್ಪು ರವಿ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರಿನಲ್ಲಿ ಕ್ಯಾಂಟೀನ್ ಇಟ್ಟುಕೊಂಡಿರೋ ರವಿ ಬೆಟ್ಟ ಹತ್ತುವಾಗ ಟೀ ಶರ್ಟ್‍ನಲ್ಲಿ ಹಿಂದೆ-ಮುಂದೆ ಅಪ್ಪು ಫೋಟೋ. ಕೈನಲ್ಲಿದ್ದ ಕನ್ನಡದ ಬಾವುಟದಲ್ಲೂ ಅಪ್ಪು ಫೋಟೋ.

 

ಮತ್ತೊಂದು ಕೈನಲ್ಲಿ ಸೌದೆ ತುಂಡು. ಜೊತೆಗೆ, ಇದೇ 28ರಂದು ಬಿಡುಗಡೆಯಾಗುವ ಅಪ್ಪು ಅಭಿನಯದ ಗಂಧದ ಗುಡಿ ಚಿತ್ರದ ಕಟೌಂಟ್ ಕೂಡ ಇಟ್ಟುಕೊಂಡು ಬೆಟ್ಟ ಹತ್ತಿದ್ದಾರೆ. ಬೆಟ್ಟದ ತುದಿಯಲ್ಲಿ ಅಪ್ಪುವಿನ ಗಂಧದಗುಡಿ ಚಿತ್ರದ ಫ್ಲೆಕ್ಸ್‍ಅನ್ನ ಇವರು ಮತ್ತೊಮ್ಮೆ ರಿಲೀಸ್ ಮಾಡಿ ಚಿತ್ರ ಭರ್ಜರಿ ಪ್ರದರ್ಶನ ಕಾಣುವಂತೆ ದೇವೀರಮ್ಮನಿಗೆ ಬೇಡಿಕೊಂಡಿದ್ದಾರೆ. ನಗರದ ಶ್ರೀಲೇಖಾ ಥಿಯೇಟರ್ ಬಳಿ ಕ್ಯಾಂಟೀನ್ ಇಟ್ಟುಕೊಂಡು ಜೀವನ ಸಾಗಿಸಿತ್ತಿರೋ ರವಿ ಇಷ್ಟು ವರ್ಷಗಳ ಕಾಲ ಕ್ಯಾಂಟೀನ್‍ಗೆ ತನ್ನ ಮಗಳ ಹೆಸರನ್ನ ಇಟ್ಟಿದ್ದರು. ಆದರೆ, ಕಳೆದೊಂದು ವರ್ಷದಿಂದ ಮಗಳ ಹೆಸರನ್ನ ತೆಗೆದು ಅಪ್ಪು ಕ್ಯಾಂಟೀನ್ ಎಂದು ಮರುನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!