April 30, 2024

MALNAD TV

HEART OF COFFEE CITY

ತಲೆಯಲ್ಲಿ ಗಂಧದಗುಡಿ ಎಂದು ಬರೆಸಿಕೊಂಡು ಪ್ರಚಾರಕ್ಕಿಳಿದ ಕಾಫಿನಾಡ ಚಂದು

1 min read

 

 

 

ತನ್ನ ವಿಭಿನ್ನ ಶೈಲಿಯ ಹುಟ್ಟು ಹಬ್ಬದ ಶುಭಾಶಯಗಳನ್ನ ಮಾಡುವ ಮೂಲಕ ರಾಜ್ಯದಲ್ಲಿ ಕಾಫಿನಾಡ ಚಂದು ಎಂದೇ ಹೆಸರಾಗಿರುವ ಚಂದು ಮತ್ತೊಂದು ಶೈಲಿಯಲ್ಲಿ ಪವರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ. ತನ್ನ ತಲೆಯ ಹಿಂಭಾಗದ ಕೂದಲನ್ನ ಗಂಧದ ಗುಡಿ ಎಂದು ತೆಗೆಸಿಕೊಂಡು ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ. ತಲೆಯಲ್ಲಿ ಹಿಂದೆ ಗಂಧದಗುಡಿ ಎಂದು ಕೆತ್ತಿಸಿಕೊಂಡಿರುವ ಚಂದು ಚಿಕ್ಕಮಗಳೂರು ನಗರದಲ್ಲಿ ಓಡಾಡುತ್ತಾ ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ. ರಸ್ತೆಯಲ್ಲಿ ಸಿಕ್ಕವರೆಗೆ ಚಿತ್ರವನ್ನ ನೋಡುವಂತೆ ಪ್ರೇರೆಪಿಸುತ್ತಿದ್ದಾರೆ. ಈಗಾಗಲೇ ಪುನೀತಣ್ಣ ಸಾಕಷ್ಟು ಬೆಳೆದಿದ್ದಾರೆ. ಅವರು ಮೇಲಿಂದ ನೋಡುತ್ತಿರುತ್ತಾರೆ.

ನಾವು ಸಿನಿಮಾ ನೋಡಿದರೆ ಅವರಿಗೆ ಖುಷಿಯಾಗುತ್ತೆ. ಹಾಗಾಗಿ ಎಲ್ಲರೂ ತಪ್ಪದೇ ಸಿನಿಮಾ ನೋಡಿ ಎಂದು ಮನವಿ ಮಾಡುತ್ತಿದ್ದಾರೆ. ಓಂ, ಜನುಮದ ಜೋಡಿ ಚಿತ್ರ ವರ್ಷಗಳ ಕಾಲ ಓಡಿದೆ. ಈ ಚಿತ್ರ ಕೂಡ ವರ್ಷಗಳ ಕಾಲ ಓಡಬೇಕು. ಹಾಗಾಗಿ, ಎಲ್ಲರೂ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!