May 3, 2024

MALNAD TV

HEART OF COFFEE CITY

ನುರಿತ ವೈದ್ಯರಿಂದ ಬದುಕುಳಿದ ಕೋಮ ಹಂತಕ್ಕೆ ತಲುಪಿದ ಹೃದ್ರೋಗಿ

1 min read

ಚಿಕ್ಕಮಗಳೂರು : ಹೃದಯಾಘಾತವಾಗಿ ಕೋಮ ಹಂತಕ್ಕೆ ತಲುಪಿ ಬದುಕುಳಿಯುವ ಆಸೆಯನ್ನೇ ಕೈಬಿಟ್ಟಿದ್ದ ವ್ಯಕ್ತಿಯ ಕುಟುಂಬಕ್ಕೆ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಸಿಬ್ಬಂದಿಯ ಸತತ ಪರಿಶ್ರಮದಿಂದಾಗಿ ಬದುಕುಳಿಯುವ ಭರವಸೆಯನ್ನೇ ಕೈಬಿಟ್ಟಿದ್ದ ವ್ಯಕ್ತಿ ಬದುಕುಳಿದು, ಅವರ ಕುಟುಂಬವು ಸಂತಸದಿಂದ ಕಣ್ಣಿರಾಕಿದ ನಿದರ್ಶನ ಕಣ್ಣಮುಂದಿದೆ ಎಂದು ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನರರೋಗ ತಜ್ಞರಾದ ಡಾ|| ರೂಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೃದಯಾಘಾತಕ್ಕೆ ಒಳಗಾದವರ ಜೀವ ರಕ್ಷಣೆಗಾಗಿ ನುರಿತ ವೈದ್ಯಕೀಯ ತಂಡ ನಮ್ಮಲಿದೆ. ಮಾರ್ಚ್ 23 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೋಮ ಹಂತಕ್ಕೆ ತಲುಪಿ, ಬದುಕುಳಿಯುವುದೇ ದುಸ್ತರ ಎಂಬ ಸ್ಥಿತಿಯಲ್ಲಿ ಶಿವಮೊಗ್ಗದಲ್ಲಿರುವ ಸಹ್ಯಾದ್ರಿ ನಾರಾಯಣಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು, ನರರೋಗ ತಜ್ಞರಾದ ಡಾ|| ರೂಪ ಕೆ.ಬಿ, ಹೃದ್ರೋಗ ತಜ್ಞರಾದ ಡಾ|| ಅಶ್ವಲ್ ಎ.ಜೆ. ಹಾಗೂ ಮೂತ್ರಪಿಂಡ ಶಾಸ್ತ್ರ ತಜ್ಞರಾದ ಡಾ|| ರವಿ. ಕೆ.ಆರ್, ತೀವ್ರ ನಿಗಾ ಘಟಕದ ತಜ್ಞರಾದ ಡಾ|| ದೀಪಕ್ ಶೆಟ್ಟಿ ಹಾಗೂ ಶುಶ್ರೂಶಕಿಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಯವರ ಸತತ ಪ್ರಯತ್ನದಿಂದ ಹೃದಯಘಾತಕ್ಕೆ ಒಳಗಾಗಿ ಬದುಕುಳಿದ ವ್ಯಕ್ತಿಯ ನಿದರ್ಶನ ತಮ್ಮ ಮುಂದಿದೆ. ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಚಿತ ಅಂಬುಲೆನ್ಸ್ ಸೇವೆಯನ್ನು ನೀಡಲಾಗಿದೆ. ನರರೋಗ ತಜ್ಞರಾದ ಡಾ|| ರೂಪ ಕೆ.ಜಿಯವರು ಪ್ರತಿ ತಿಂಗಳ 3 ನೇ ಶನಿವಾರ ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಯಲ್ಲಿ ಓಪಿಡಿ ಸೇವೆಗಳಲ್ಲಿ ಲಭ್ಯವಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಬಹುದೆಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!