May 17, 2024

MALNAD TV

HEART OF COFFEE CITY

ಮೇ 27 ರಂದು ಎಸ್.ಪಿ.ಬಿ- ನೆನಪು

1 min read

ಚಿಕ್ಕಮಗಳೂರು : ದಕ್ಷಿಣ ಭಾರತದ ಖ್ಯಾತ ಗಾಯಕ ಪದ್ಮವಿಭೂಷಣ ಬಾಲಸುಬ್ರಹ್ಮಣ್ಯಂ ಹಾಡಿರುವ ಚತುರ್ಭಾಷೆಯ ಯುಗಳ ಚಿತ್ರ ಗೀತೆಗಳ ವಿಶೇಷ ಎಸ್.ಪಿ.ಬಿ- ನೆನಪು ವಿಶೇಷ ಗಾಯನ ಕಾರ್ಯಕ್ರಮವನ್ನು ಮೇ 27 ರಂದು ಶನಿವಾರ ಸಂಜೆ 5-30 ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನ ಅಧ್ಯಕ್ಷರಾದ ಎಂ.ಎಸ್ ಸುಧೀರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡಮಿ ಹಾಗೂ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಛೇರಿ, ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಮೇ 27 ರ ಶನಿವಾರ ಸಂಜೆ 5:30 ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಗಾನಯಾನ-87 ರ ಸಂಚಿಕೆಯಡಿಯಲ್ಲಿ ದಕ್ಷಿಣಭಾರತದ ಖ್ಯಾತ ಗಾಯಕ ಪದ್ಮವಿಭೂಷಣ ಬಾಲಸುಬ್ರಹ್ಮಣ್ಯಂ ಹಾಡಿರುವ ಚತುರ್ಭಾಷೆಯ ಯುಗಳ ಚಿತ್ರ ಗೀತೆಗಳ ವಿಶೇಷ ಎಸ್.ಪಿ.ಬಿ- ನೆನಪು ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ವಾಹಿನಿಯ ಎದೆತುಂಬಿ ಹಾಡುವೆನು ಖ್ಯಾತಿಯ ಮೈಸೂರಿನ ರಶ್ಮಿ ಬಿ, ಬೆಂಗಳೂರಿನ ರಮ್ಯ ಪ್ರಸನ್ನ, ತುಮಕೂರಿನ ಪೂಜ್ಯ.ಎಂ. ಖ್ಯಾತ ಹಿನ್ನಲೆ ಗಾಯಕಿ ಬೆಂಗಳೂರಿನ ಶೃತಿ ಮಹೇಶ್‌, ಅನುರಾಧ ಭಟ್, ಹಾಸನದ ಚೇತನ್ ರಾಮ್ ಹಾಗೂ ಪೂರ್ವಿ ಸಂಸ್ಥೆಯ ಗಾಯಕರಾದ ರಾಯನಾಯಕ್, ದರ್ಶನ್, ರೂಪ ಅಶ್ವಿನ್, ಸುಂದರಲಕ್ಷ್ಮಿ, ರುಕ್ಷಾನ ಕಾಚೂರ್‌, ರಮ್ಯ ಮಧುಸೂದನ್, ಪಂಚಮಿ, ಚೈತನ್ಯ, ಸಾತ್ವಿಕ್, ಪ್ರಣಮ್ಯ ಕಶ್ಯಪ್ ಇವರೆಲ್ಲರೂ ಎಂ.ಎಸ್.ಸುಧೀರ್‌ರವರ ಗಾಯನ ಸಾರಥ್ಯದಲ್ಲಿ ಹಾಡಲಿದ್ದು, ಚಿತ್ರದ ವಿಶೇಷತೆಯೊಂದಿಗೆ ಪರಿಣಾಮಕಾರಿಯಾಗಿ ಸುಮಾಪ್ರಸಾದ್ ಹಾಗೂ ರೂಪನಾಯ್ಕ ನಿರೂಪಿಸಲಿದ್ದಾರೆ. ಅಲ್ಲದೆ ವೇದಿಕೆಲ್ಲಿ ಈ ಬಾರಿ ಪೂರ್ವಿ ನಾದೋಪಾಸನೆ ಪ್ರಶಸ್ತಿಯನ್ನು ಮೈಸೂರಿನಲ್ಲಿ ನೆಲಸಿರುವ ಚಿಕ್ಕಮಗಳೂರಿನ ಗಾಯಕಿ ಹಾಗೂ ಉಪನ್ಯಾಸಕಿ ರಶ್ಮಿ.ಬಿ. ರವರಿಗೆ ನೀಡಿ ಅಭಿನಂದಿಸಲಾಗುವುದು. ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಸಿ.ಟಿ.ರವಿರವರು ಉದ್ಘಾಟಿಸಲಿದ್ದು, ಯುರೇಕಾ ಅಕಾಡೆಮಿಯ ಸಂಸ್ಥಾಪಕರಾದ ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸುಗಮ ಸಂಗೀತ ಅಧ್ಯಕ್ಷರಾದ ಡಾ.ಜೆ.ಪಿ.ಕೃಷ್ಣೇಗೌಡ, ಎ.ಐ.ಟಿ. ಕಾಲೇಜಿನ ನಿರ್ದೇಶಕರಾದ ಡಾ.ಸಿ.ಕೆ.ಸುಬ್ಬರಾಯ, ಸಮಾಜ ಸೇವಕರಾದ ಹಳಸೆ ಶಿವಣ್ಣ, ಸಿ.ಟಿ.ಜಯವರ್ಧನ್ ಹಾಗೂ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ಡಿ.ಅನಿಲ್ ಕುಮಾರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಮಾತುಗಳಿಗೆ ಹೆಚ್ಚು ಅವಕಾಶವಿಲ್ಲದೆ ಕೇವಲ ಗೀತೆಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಈ ಕಾರ್ಯಕ್ರಮವು ದಾನಿಗಳ ಸಹಾಯದಿಂದ ನಡೆಯುತ್ತಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿಸಿಕೊಂಡರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!