ಸುಖಾಂತ್ಯ ಕಂಡ ಕ್ರೈಸ್ತ ಯುವತಿ ಬ್ರಾಹ್ಮಣ ಯುವಕನ ಲವ್ ಸ್ಟೋರಿ
1 min readಕ್ರೈಸ್ತ ಯುವತಿ ಬ್ರಾಹ್ಮಣ ಯುವಕನ ಲವ್ ಅಂಡ್ ಡಿಸ್ಟರ್ಬ್ ಕಹಾನಿ ಕೊನೆಗೂ ಸುಖಾಂತ್ಯ ಕಂಡಿದ್ದು, ಪ್ರಿಯಕರನ ಮನೆಗೆ ತೆರಳುವ ಮೂಲಕ ಅಂತರ್ ಧರ್ಮ ಪ್ರೀತಿಗೆ ಯುವತಿ ಜೈ ಎಂದಿದ್ದಾಳೆ.
ಅಂತರ್ ಧರ್ಮದ ಯುವಕನನ್ನು ವಿವಾಹವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ತವರಿಗೆ ವಾಪಸ್ ಆಗಿದ್ದ ಯುವತಿ ಒಂದೇ ದಿನದಲ್ಲಿ ಮತ್ತೆ ಪ್ರಿಯಕರನ ಮನೆ ಸೇರುವ ಮೂಲಕ ಡಿಫರೆಂಟ್ ಲವ್ ಸ್ಟೋರಿ ಒಂದು ಕೊನೆಗೂ ಸುಖಾಂತ್ಯ ಕಂಡಿದೆ. ಈ ನಡುವೆ ಪೊಲೀಸರ ಮೇಲೆ ಪ್ರೀತಿಸಿದ ಜೋಡಿ ಬೇರ್ಪಡಿಸಿದ ಆರೋಪ ಕೇಳಿ ಬಂದಿದ್ದು ಕೊನೆಗೆ ಪೊಲೀಸರೆ ಯುವಕ ಯುವತಿಯನ್ನು ಒಟ್ಟಿಗೆ ಕಳುಹಿಸಿ ಕೊಟ್ಟಿದ್ದಾರೆ.
ಕ್ರೈಸ್ತ ಧರ್ಮದ ಅಭಿಷಾಗ್ ವಿಶ್ವಕರ್ಮ ಬ್ರಾಹ್ಮಣ ಯುವಕ ವಿನಯ್ ನನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸಿ ಕಳೆದ ಭಾನುವಾರ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದಾಳೆ. ವಿಷಯ ತಿಳಿದ ಅಭಿಷಾಗ್ ತಂದೆ ತಾಯಿ ಮಗಳು ಮೈನರ್ ಎಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಅಭಿಷಾಗ್ ಳನ್ನು ಠಾಣೆಗೆ ಕರೆಸಿ ಅವಳನ್ನು ಪೋಷಕರ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಪೊಲೀಸರು ವಿವಾಹವಾಗಿ ಬಂದಿದ್ದ ಅಭಿಷಾಗ್ ತಾಳಿ, ಕಾಲುಂಗುರ ಬಿಚ್ಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಆಕ್ರೋಶಗೊಂಡ ಯುವಕ ಯುವತಿ ಪೊಲೀಸ್ ವರಿಷ್ಟಾಧಿಕಾರಿ ಮೊರೆ ಹೋದರು ಎನ್ನಲಾಗಿದೆ. ಇಂದು ಮತ್ತೆ ಜೋಡಿಯನ್ನು ಠಾಣೆಗೆ ಕರೆಸಿದ ಪೊಲೀಸರು ಇಬ್ಬರ ಹೇಳಿಕೆ ಪಡೆದು ಕಳುಹಿಸಿಕೊಟ್ಟಿದ್ದಾರೆ. ಪ್ರಕರಣ ಸುಖಾಂತ್ಯ ಕಾಣುತ್ತಿದ್ದಂತೆ ಯುವ ಜೋಡಿ ಖುಷಿಯಿಂದ ಮನೆಗೆ ತೆರಳಿದೆ. ಇದರೊಂದಿಗೆ ಹಿಂದು ಕ್ರೈಸ್ತ ಧರ್ಮದ ಸಖತ್ ಪ್ರೇಮ್ ಕಹಾನಿ ಹ್ಯಾಪಿಯಾಗಿ ಅಂತ್ಯಗೊಂಡಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g