May 13, 2024

MALNAD TV

HEART OF COFFEE CITY

ಜಗದ್ಗುರು ಬಾಲಗಂಗಾಧರನಾಥ ಸ್ವಾಮೀಜಿಯವರ 79ನೇ ಜಯಂತೋತ್ಸವ

1 min read

ಚಿಕ್ಕಮಗಳೂರು: ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಬಾಲಗಂಗಾಧರನಾಥ ಸ್ವಾಮೀಜಿಯವರ 79ನೇ ಜಯಂತೋತ್ಸವನ್ನು ನಗರದ ಒಕ್ಕಲಿಗರ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ 79ನೇ ಜಯಂತೋತ್ಸಕ್ಕೆ ಸ್ವಾಮೀಜಿಯವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಹಿರಿಯ ವೈದ್ಯ ಡಾ. ಕೃಷ್ಣೇಗೌಡ ಮಾತನಾಡಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಬಹಳ ಪ್ರಸಿದ್ಧವಾದಂತದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನಗೆ ಹೆಮ್ಮೆ ಇದೆ ಎಂದರು. ಬಾಲಗಂಗಾಧರನಾಥ ಶ್ರೀ ಮಠಾಧೀಶರಾದ ಕಥೆಯನ್ನು ನೆನೆದ ಅವರು, ಪತ್ರಿಕೆಯೊಂದರಲ್ಲಿ ಮಠಕ್ಕೆ ಮಠಾಧೀಶರು ಬೇಕಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿತ್ತು. ಅದಕ್ಕೆ ಮೂರು ಜನ ಅರ್ಜಿಯನ್ನು ಸಲ್ಲಿಸಿದ್ದು, ನಾನಾ ಕಾರಣಗಳಿಂದಾಗಿ ಉಳಿದ ಇಬ್ಬರು ಸ್ವಾಮೀಜಿಗಳು ಮಠವನ್ನು ತಲುಪಲು ಸಾಧ್ಯವಾಗಲಿಲ್ಲ, ಅಂತಹ ಸಂದರ್ಭದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಅವರು ತಲುಪಿ ಆ ಸಂಸ್ಥಾನದ ಮಠಾಧೀಶರಾದರು ಎಂಬುದನ್ನ ನೆನೆದರು.

5 ಪಂಚ ಲಿಂಗಗಳ ಪವಿತ್ರವಾದ ಸ್ಥಳ ಈ ಆದಿಚುಂಚನಗಿರಿ, ಇದು ನಮಗೆ ಹೆಮ್ಮೆಯ ವಿಷಯ. ಶೂನ್ಯದಿಂದ ಮೇಲೆ ಬಂದವರು ಈ ಗುರುಗಳು. ಈ ಮಠವನ್ನ ಕಟ್ಟುವಲ್ಲಿ ಇವರ ಶ್ರಮ ಬಹಳ ವಿದೆ. 470 ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದರು ಎಂದು ತಿಳಿಸಿದರು.

ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಜಿಲ್ಲೆಯ ಪ್ರತಿ ಮನೆಮನೆಗಳಿಗೆ ಹೋಗಿ ಸಹಾಯಧನವನ್ನ ಪಡೆದು ಈ ಮಠವನ್ನು ನಿರ್ಮಿಸಿದ್ದಾರೆ. ವಿದ್ಯಾ ಸಂಸ್ಥೆಯ ಮೂಲಕ ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿ ಅವರ ಜೀವನವನ್ನು ರೂಪಿಸುವಲ್ಲಿ ಸ್ವಾಮೀಜಿಯವರ ಪಾತ್ರ ಬಹಳವಿದೆ. ನೆಲ ಜಲ ಮತ್ತು ಬಡ ಮಕ್ಕಳ ಬಗ್ಗೆ ಇದ್ದ ಕಾಳಜಿಯಿಂದ ಹಳ್ಳಿ ಹಳ್ಳಿಯಲ್ಲೂ ಕೂಡ ಸಂಸ್ಥಾನದ ಅಧೀನ ವಿದ್ಯಾಸಂಸ್ಥೆಗಳು ಕಾರ್ಯರೂಪದಲ್ಲಿದೆ. ಇವರ ಉದ್ದೇಶ ಪ್ರತಿ ಒಬ್ಬ ಬಡ ಮಕ್ಕಳಿಗೂ ಕೂಡ ಉತ್ತಮವಾದ ಶಿಕ್ಷಣವನ್ನು ಶಿಕ್ಷಣ ಸಿಗಬೇಕು ಎಂಬುದಾಗಿತ್ತು ಎಂದರು. ಎಲ್ಲಾ ಒಕ್ಕಲಿಗ ಸಮುದಾಯದವರು ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮುಂದೆ ಸಾಗೋಣ ಎಲ್ಲಾ ಸಮುದಾಯದವರೊಂದಿಗೂ ಕೂಡಿ ಬೆರೆತು ಬಾಳೋಣ ಎಂದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಮತ್ತು ಹಿರಿಯ ಕಿರಿಯ ಸಾಧಕರಿಗೆ ಸನ್ಮಾನವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ , ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ನಿರ್ದೇಶಕರುಗಳಾದ ಕೆ.ಎಸ್.ನಾರಾಯಣಗೌಡ, ಕೆ.ಕೆ.ಮನುಕುಮಾರ್, ಎಂ.ಬಿ.ಆನಂದ್ , ಬಿ.ಸುಜೀತ್, ಟಿ.ಡಿ.ಮಲ್ಲೇಶ್, ಜಿ.ಹೆಚ್.ದಿನೇಶ್, ಕೆ.ಪಿ.ಪೃಥ್ವಿರಾಜ್, ಎಸ್.ಆರ್.ತಿಲೋಕ್, ಎ.ಹೆಚ್.ರುದ್ರೇಗೌಡ, ಹೆಚ್.ಎಂ.ಸತೀಶ್, ಹೆಚ್.ಕೆ.ನವೀನ್, ಹೆಚ್.ಪಿ .ಹೇಮಂತ್, ಕೆ.ಎ.ರಾಜೇಗೌಡ, ಮಾಜಿ ಅಧ್ಯಕ್ಷ ಐ.ಎಸ್.ಉಮೇಶ್‌ಚಂದ್ರ, ಆರತಿ ಓಂಕಾರೇಗೌಡ, ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!