April 27, 2024

MALNAD TV

HEART OF COFFEE CITY

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಟ್ರಾಕ್ಟರ್ ಮರಳು ವಶ

1 min read

 

ಅಕ್ರಮವಾಗಿ ಮರಳುಗಾರಿಕೆ ಮಾಡಿ ಆಲ್ದೂರು ಸಮೀಪದ ಕಣತಿ ಸರ್ಕಾರಿ ಪ್ರೌಢಶಾಲೆ ಹಿಂಭಾಗದ ಗದ್ದೆಯಲ್ಲಿ ಗೋಪಾಲಗೌಡ ಎಂಬುವವರು ಸಂಗ್ರಹಿಸಿಟ್ಟಿದ್ದ 25 ಲೋಡ್‌ ಮರಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಆಲ್ದೂರು ಪಿಎಸ್ಐ ಅಕ್ಷಿತಾ ತಮ್ಮ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಗಸ್ತು ತಿರುಗುವಾಗ ಕಣತಿ ಗ್ರಾಮದ ಫ್ರೌಡಶಾಲಾ ಹಿಂಭಾಗದ ಗದ್ದೆಯಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ಮಾಡಿ ದಾಸ್ತಾನು ಮಾಡಿರುವ ಮಾಹಿತಿ ಮೇರೆಗೆ ಕಣತಿ ಬಳಿ ಹಾಳು ಬಿದ್ದುರುವ ಗದ್ದೆಯಲ್ಲಿ ಸುಮಾರು 25 ಟ್ರಾಕ್ಟರ್ ಲೋಡಿನಷ್ಟು ಮರಳು ದಾಸ್ತಾನು ಮಾಡಿರುವುದು ಕಂಡು ಬಂದಾಗ ಜಾಗದ ಮಾಲೀಕರಾದ ಎಂ.ಎಂ ಗೋಪಾಲಗೌಡಗೆ ಸಂಬಂಧಿಸಿದ್ದು ಎಂಬುದು ಖಾತ್ರಿಯಾಗಿ ಮಾಗೋಡು ಗ್ರಾಮದ ಸರ್ವೆ 46, 47 ನಂ ಸ್ವಂತ ಗದ್ದೆ ಜಾಗದಲ್ಲಿ ಹಣ ಸಂಪಾದನೆ ಮಾಡುವ ಉದ್ದೇಶ ದಿಂದ ಗದ್ದೆಯಲ್ಲಿ ದಾಸ್ತಾನು ಮಾಡಿರುವುದಾಗಿ ತಿಳಿಸಿದ ಮೇರೆಗೆ ಗದ್ದೆಯಲ್ಲಿ ಸುಮಾರು 25 ಟ್ರಾಕ್ಟರ್ ಲೋಡ್ ಮರಳು ವಶಪಡಿಸಿಕೊಂಡಿದ್ದಾರೆ. 50,000 ಬೆಲೆ ಬಾಳುವ ಮರಳಾಗಿತ್ತದೆ. ಆರೋಪಿ ವಿರುದ್ದ ಆಲ್ದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!