April 27, 2024

MALNAD TV

HEART OF COFFEE CITY

ಮಗಳಿಗೆ ಬ್ರೈನ್ ಇನ್ಫೆಕ್ಷನ್ ಇದೆ ಎಂದು ಹಣಕ್ಕಾಗಿ ಮನವಿ ಮಾಡಿದ ವ್ಯಕ್ತಿಯಿಂದಲೂ ವಂಚನೆ

1 min read

ಕಷ್ಟದಲ್ಲಿ ಇದ್ದವರನ್ನೂ ಬಿಡುವುದಿಲ್ಲ ಈ ಸೈಬರ್ ವಂಚಕರು. ಮಗಳಿಗೆ ಬ್ರೈನ್ ಇನ್ಫೆಕ್ಷನ್ ಇದೆ ಸಹಾಯ ಮಾಡಿ ಎಂದು ಸಹಾಯ ಕೇಳಿದರೆ ಮೊದಲು ಅಡ್ವಾನ್ಸ್ ಹಾರಿಸಿಕೊಂಡು ಲಕ್ಷಾಂತರ ಹಣ ಲಪಟಾಯಿಸಿದ್ದ ಖದೀಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ದಿನೇ ದಿನೆ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಷ್ಟದಲ್ಲಿ ಇರುವ ಜನರನ್ನೂ ಕೂಡಾ ಖದೀಮರು ಬಿಡುತ್ತಿಲ್ಲ. ಮಗಳಿಗೆ ಬ್ರೈನ್ ಇನ್ಫೆಕ್ಷನ್ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದ ಚಿಕ್ಕಮಗಳೂರಿನ ಬೆಟ್ಟದಮೇಲಹಳ್ಳಿ ಗ್ರಾಮದ ರವಿ ಎಂಬುವವರಿಗೆ ಹಣ ಹಾಕುತ್ತೇವೆ ಮೊದಲು ಅಡ್ವಾನ್ಸ್ ಹಾಕಬೇಕು ಎಂದು ನಂಬಿಸಿ 1 ಲಕ್ಷ 64 ಸಾವಿರ ಹಣ ಹಾಕಿಸಿಕೊಂಡಿದ್ದ ವಂಚಕ ತೀರ್ಥಹಳ್ಳಿಯ ಅಬ್ದುಲ್ ಖಾದರ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಹಿಡಿಯಲು ಸಿಇಎನ್ ಪೊಲೀಸರ ತಂಡ ಯಶಸ್ವಿಯಾಗಿದ್ದು ಖದೀಮ ಖಾದರ್ ನಿಂದ 1 ಲಕ್ಷ 35 ಸಾವಿರ ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ ಕಾರ್ಯಾಚರಣೆ ನಡೆಸಿದ ಸಿಇಎನ್ ತಂಡದ ಪೊಲೀಸರ ಕರ್ತವ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!