May 4, 2024

MALNAD TV

HEART OF COFFEE CITY

ಫೆಬ್ರವರಿ 28 ಕ್ಕೆ ಬ್ರಾಹ್ಮಣ ಮಹಾಸಭಾ ಚುನಾವಣೆಗೆ 16 ಜನರ ತಂಡ ಸ್ಪರ್ಧೆ ಮತ ನೀಡಲು ಮತದಾರರಲ್ಲಿ ಮನವಿ

1 min read

ಚಿಕ್ಕಮಗಳೂರು : ಬ್ರಾಹ್ಮಣ ಮಹಾಸಭಾಕ್ಕೆ ಫೆಬ್ರವರಿ 28 ರಂದು ನಡೆಯಲಿರುವ ಚುನಾವಣೆಯಲ್ಲಿ 16 ಜನರ ತಂಡ ಸ್ಪರ್ಧೆ ಮಾಡುತ್ತಿದ್ದೇವೆ. ಬ್ರಾಹ್ಮಣ ಸಮುದಾಯದ ಏಳಿಗೆಗಾಗಿ ಶ್ರಮಿಸಲು ನಮ್ಮ ತಂಡ ಕಟ್ಟಿಬದ್ದವಾಗಿದೆ ಎಂದು ಚುನಾವಣಾ ಸ್ಪರ್ಧಿಗಳಾದ ಕಳಸಾಪುರ ಆರ್.ವಿ.ಎಸ್ ಶಾಲೆಯ ಅಧ್ಯಕ್ಷರಾದ ಶ್ರೀಧರ್ ಕಳಸಾಪುರ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬ್ರಾಹ್ಮಣ ಮಹಾಸಭಾಕ್ಕೆ ಫೆಬ್ರವರಿ 28 ರಂದು ಚುನಾವಣೆ ನಡೆಯಲಿದೆ. ಚುನಾವಣೆಯಲ್ಲ್ಲಿ 40 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು, ಅವರಲ್ಲಿ ನಂ-4 ಎ.ಎಸ್ ಕುಮಾರ್, ನಂ-5 ಕೆ.ಕುಸುಮಾ, ನಂ-6 ಬಿ.ಕೆ ಗಣೇಶ್ ನಾಡಿಗ್, ನಂ-7 ಗೀತಾ ಸುಂದರೇಶ್, ನಂ-11 ಎನ್ ಚಂದ್ರಶೇಖರ್, ನಂ-12 ಬಿ.ಸಿ ಜಯರಾಮ್, ನಂ-16 ಎ. ನರಸಿಂಹ ಮೂರ್ತಿ, ನಂ-17  ಕೆ.ಎಸ್ ನಾರಾಯಣ ಅಯ್ಯಂಗಾರ್, ನಂ-18 ಎನ್. ಪ್ರಕಾಶ್, ನಂ-20 ಕೆ.ಎನ್ ಪ್ರಭಾಕರ್, ನಂ-22 ಭಾಗ್ಯಲಕ್ಷ್ಮೀ ಸುಬ್ಬಣ್ಣ, ನಂ-23 ಟಿ ಭುಜಂಗರಾವ್, ನಂ-26 ರಾಮಕೃಷ್ಣ ಎನ್.ಆರ್, ನಂ-31 ವೇಣುಗೋಪಾಲ್, ನಂ-35 ಶ್ರೀಧರ್, ನಂ-36 ಎಸ್ ಶ್ರೀನಿವಾಸ್ ಸೇರಿದಂತೆ 16 ಜನರ ತಂಡ ಸ್ಪರ್ಧೆ ಮಾಡುತ್ತಿದ್ದೇವೆ. ನಾವು ತ್ರಿಮತಸ್ಥ ಬ್ರಾಹ್ಮಣರಿಗೂ ಸಂಘದ ಸದಸ್ಯತ್ವ, ರಂಗಣ್ಣ ಕಲ್ಯಾಣ ಮಂಟಪದ ನವೀಕರಣ, ವಿದ್ಯಾರ್ಥಿ-ವಿದ್ಯಾರ್ಥಿ ನಿಯರಿಗೆ ಹೆಚ್ಚುವರಿ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಯೋಜನೆಗಳನ್ನು ಇಟ್ಟುಕೊಂಡಿದ್ದೇವೆ, ಬ್ರಾಹ್ಮಣ ಮಹಾಸಭಾದ ಸದಸ್ಯರು ನಮ್ಮ ತಂಡವನ್ನು ಬೆಂಬಲಿಸಬೇಕೆಂದು ಹೇಳಿದರು

ಸುದ್ದಿಗೋಷ್ಠಿಯಲ್ಲಿ ಬಿ.ಸಿ ಜಯರಾಮ್, ಕೆ.ಎನ್ ಪ್ರಭಾಕರ್, ಬಿ.ಕೆ ಗಣೇಶ್ ನಾಡಿಗ್, ಶಶಿಧರ್ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!