May 16, 2024

MALNAD TV

HEART OF COFFEE CITY

ಯೋಗ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯ ಭಾಗ – ನ್ಯಾ. ಸೋಮ

1 min read

ಚಿಕ್ಕಮಗಳೂರು : ಭಾರತೀಯ ಸಂಸ್ಕೃತಿಯಲ್ಲಿ ಯೋಗ ಪ್ರಾಚೀನ ಕಾಲದಲ್ಲಿತ್ತು. ಯೋಗ ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಅನುಕೂಲಕಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎನ್.ಸೋಮ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ 9ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ಬದುಕಿನ ಶೈಲಿ ಬದಲಾವಣೆ, ಮಾಲಿನ್ಯ, ಆಹಾರ ಶೈಲಿ, ಮಾನಸಿಕ ಒತ್ತಡದ ಪರಿಣಾಮ ಆರೋಗ್ಯ ಕೆಡುತ್ತಿದ್ದು ಇದನ್ನು ನಿವಾರಿಸಲು ಯೋಗಾಭ್ಯಾಸದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಯೋಗಕ್ಕೆ ಸರ್ಕಾರದ ಕಡೆಯಿಂದ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಹಲವಾರು ಋಷಿಮುಣಿಗಳು ವಿಶ್ವಕ್ಕೆ ಯೋಗ ಕೊಟ್ಟ ಕೊಡುಗೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು. ಒತ್ತಡ ಬಹುದೊಡ್ಡ ಸಮಸ್ಯೆ, ಅದಕ್ಕೆ ಮದ್ದಿಲ್ಲ. ಯೋಗಾಭ್ಯಾಸ ಪ್ರತಿಯೊಬ್ಬರಿಗೆ ಅಗತ್ಯವಾಗಿದೆ. ದ್ವೇಷ ಮುಕ್ತ, ದುಷ್ಟಟ ಮುಕ್ತ ಸಮಾಜಕ್ಕೆ ಯೋಗಾಭ್ಯಾಸ ಅಗತ್ಯವಾಗಿದೆ ಎಂದರು.
ಯೋಗ ತಮ್ಮ ಪರಂಪರೆ ಹಾಗೂ ಸಂಸ್ಕöÈತಿಯ ಭಾಗವಾಗಿದೆ. ಯೋಗ ನಮ್ಮಿಂದ ಇಡೀ ಪ್ರಪಂಚಕ್ಕೆ ಬೆಳಗಾಗಿ ಹರಿದಿದೆ ಎಂಬುದು ಹೆಮ್ಮೆ. ಯೋಗ ಅಂದರೆ ಕೇವಲ ದೇಹದ ಆರೋಗ್ಯ ಅಲ್ಲ, ಮಾನಸೀಕ ಆರೋಗ್ಯಕ್ಕೂ ಅನುಕೂಲವಾಗಿದೆ ಎಂದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲ ಎಸ್.ಮೇಟಿ ಮಾತನಾಡಿ ಹಿಂದಿನ ಕಾಲದಲ್ಲಿ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಯಿರುವ ಕಾರಣ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುತ್ತಿದ್ದರು. ಇದೀಗ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿವೆ. ಮಾನವ ದೇಹವನ್ನು ದಂಡಿಸುವ ಬದಲು ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳುವಂತಹ ಸ್ಥಿತಿಯಲ್ಲಿದ್ದಾನೆ. ಮುಂದಿನ ದಿನಗಳಲ್ಲಾದರೂ ಯೋಗಾಭ್ಯಾಸ ಮಾಡುವ ಮೂಲಕ ರೋಗಮುಕ್ತವಾಗಬೇಕು ಎಂದು ಸಲಹೆ ಮಾಡಿದರು.
ಇದೇ ವೇಳೆ ಕಾರಾಗೃಹದ 50 ಮಂದಿ ಅಧಿಕಾರಿಗಳು ಹಾಗೂ 250 ಮಂದಿ ಬಂಧಿಗಳು ಸೇರಿದಂತೆ ಸುಮಾರು 300 ಮಂದಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸುಧಾಕರ್, ಕಾರಾಗೃಹ ಜೈಲರ್ ಎಂ.ಕೆ.ನೆಲಧರಿ, ಸಹಾಯಕ ಜೈಲರ್ ಬೊಂಗಾಳೆ, ವನಕಂಡೆ, ಮಾನಸಿಕ ತಜ್ಞ ವೈದ್ಯಾಧಿಕಾರಿ ಆಶಾ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!