May 3, 2024

MALNAD TV

HEART OF COFFEE CITY

ವಿಶ್ವ ತಂಬಾಕು ದಿನ ಆಚರಣೆ – ಜಾಗೃತಿ ಜಾಥ

1 min read

ಚಿಕ್ಕಮಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪದವಿ ಪೂರ್ವ ಶಿಕ್ಷಣಾ ಇಲಾಖೆ, ಎಂ.ಇ.ಎಸ್ ಕಾಲೇಜ್, ಶಿವಮೊಗ್ಗದ ಮಲೆನಾಡ್ ಆಸ್ಪತ್ರೆ ಅವರುಗಳ ಸಂಯುಕ್ತಾ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾವರಣೆಯನ್ನು ಆಚರಿಸಲಾಯಿತು. ವಿಶ್ವ ತಂಬಾಕು ದಿನಾಚರಣೆಯನ್ನು ಆಚರಿಸಲಾಯಿತು. ಜನರಲ್ಲಿ ಜಾಗೃತಿ ಮೂಡಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥವನ್ನು ಮಾಡಿದರು,

ಎಂ.ಇ.ಎಸ್. ಕಾಲೇಜ್ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ|| ಮಂಜುನಾಥ್ , ತಂಬಾಕು ಸೇವನೆ ಇಂದು ಫ್ಯಾಷನ್ ಆಗಿದೆ. ಹೆಚ್ಚಿನ ಯುವಕ ಯುವತಿಯರು ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭದಲ್ಲಿ ತಂಬಾಕು ಸೇವನೆಯ ಚಟಕ್ಕೆ ದಾಸರಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ಆಗಬಹುದಾದ ದುಷ್ಟರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ತಂಬಾಕು ಬೆಳೆ ಬೆಳೆಯುವುದರಿಂದ ರೈತರ ಭೂಮಿ ಬಂಜರಾಗುತ್ತದೆ. ಇಡೀ ವಿಶ್ವದಲ್ಲಿ 13 ಲಕ್ಷಕ್ಕೂ ಹೆಚ್ಚು ಜನ ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ. ಅದರಲ್ಲಿ ಆರನೇ ಒಂದು ಭಾಗದಷ್ಟು ಜನ ಭಾರತ ದೇಶದಲ್ಲಿ ಸಾಯುತ್ತಿದ್ದಾರೆ. ಈ ವರ್ಷದ ಧ್ಯೇಯ ವಾಕ್ಯ ನಮಗೆ ಆಹಾರ ಬೇಕು, ತಂಬಾಕು ಬೇಡ ಎಂಬುದಾಗಿದೆ. ಚಲನಚಿತ್ರಗಳ ನಾಯಕರುಗಳ ಪ್ರಭಾವಕ್ಕೆ ಒಳಗಾಗಿ ತಂಬಾಕು ಸೇವನೆ ಹೆಚ್ಚುತ್ತಿದೆ. ತಂಬಾಕು ಸೇವನೆಯಿಂದ ಮಹಿಳೆಯರು ಸಂತಾನೋತ್ಪತಿಯಿಂದ ವಂಚಿತರಾಗಬಹುದು. ತಂಬಾಕು ಸೇವನೇಯಿಂದ ಕ್ಯಾನ್ಸರ್, ಪಾರ್ಶ್ವವಾಯು, ಅಸ್ತಮಾ ಸೇರಿದಂತೆ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುತ್ತಾರೆ. ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!