April 29, 2024

MALNAD TV

HEART OF COFFEE CITY

ಅವಕಾಶ ಸದುಪಯೋಗವಾದಾಗ ಮಾತ್ರ ವರವಾಗುತ್ತದೆ : ತಮ್ಮಯ್ಯ

1 min read

ಚಿಕ್ಕಮಗಳೂರು-ದೇವರು ಎಲ್ಲರಿಗೂ ವರ ಕೊಡದೇ ಅವಕಾಶವನ್ನು ಕೊಡುತ್ತಾರೆ ಅದನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ವರವಾಗುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಇಲ್ಲಿನ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಗಣಪತಿ ಸೇವಾ ಸಮಿತಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ 34 ವರ್ಷಗಳಿಂದ ವಿವಿಧ ಹಲವು ಸಂಘ ಸಂಸ್ಥೆಗಳಲ್ಲಿ ಹಾಗೂ ಗಣಪತಿ ಸೇವಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದೇನೆ ಖಾಸಗಿ ಉದ್ಯೋಗಿಯಾಗಿದ್ದ ನಾನು ಸಾಮಾನ್ಯ ರೈತನ ಮಗನಾಗಿದ್ದು, ಶಾಸಕನಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ತಂದಿದೆ ಎಂದರು.
ಶಾಸಕರ ಸ್ಥಾನದ ಜನ ಸೇವಕನಾಗಿ ಜವಾಬ್ದಾರಿಯನ್ನರಿತು ಜನಪರ ಕೆಲಸ ಮಾಡುತ್ತೇನೆೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಮುಂದಿನ ರಾಜಕೀಯ ಜೀವನದಲ್ಲಿ ಅಧಿಕಾರ ಇರಲಿ ಬಿಡಲಿ ಎಲ್ಲರೊಂದಿಗೆ ಸ್ನೇಹ ಜೀವಿಯಾಗಿ ಕೊನೆಯವರೆಗೆ ಇರುತ್ತೇನೆ ಈಗ ಸಿಕ್ಕಿರುವ ಅಧಿಕಾರವನ್ನು ಸಾರ್ವಜನಿಕರ ಕೆಲಸ ಮಾಡುವ ಮೂಲಕ ಅವರ ಜನಪರ ಕೆಲಸದ ಸದುಪಯೋಗಕ್ಕೆ ಬಳಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಮುಂದೆ ನಡೆಯಲಿರುವ ಅಧಿವೇಶನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದು, ಅನುದಾನ ನಿರೀಕ್ಷಿಸಲಾಗದು.ಮುಂದಿನ ಬಜೆಟ್‌ನಲ್ಲಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ದೇವಸ್ಥಾನದ ಅಭಿವೃದ್ಧಿಗೆ ಸಂಬAಧಿಸಿದAತೆ ಸರ್ಕಾರದ ಗಮನಕ್ಕೆ ತಂದು ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ಸಮಿತಿಯ ಮಾಜಿ ಅಧ್ಯಕ್ಷ ಎಲ್.ವಿ ಬಸವರಾಜ್‌ರವರು ನಮಗೆಲ್ಲ ಮಾರ್ಗದರ್ಶಕರಾಗಿ ಕೆಲಸ ಮಾಡಲು ಹುರಿದುಂಬಿಸುತ್ತಿದ್ದರು ಆದರೆ ತಾವು ದೊಡ್ಡ ಸ್ಥಾನವನ್ನು ಅಲಂಕರಿಸಿರುವುದನ್ನು ನೋಡಲು ಅವರು ಇಲ್ಲದಿರುವುದು ನೋವುಂಟುಮಾಡಿದೆ ಎಂದು ದಿವಂಗತ ಎಲ್.ವಿ.ಬಿ ನೆನೆದು ಭಾವುಕರಾದರು.
ಬಡವರ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿ.ಮುಂದೆ ದೊಡ್ಡ ಹುದ್ದೆ ಅಲಂಕರಿಸುತ್ತಾರೆAಬುದಕ್ಕೆ ನಾನು ಒಂದು ಚಿಕ್ಕ ಉದಾಹರಣೆಯಾಗಿದ್ದೇನೆ. ನಿಮ್ಮೆಲ್ಲರ ಸಹಕಾರ, ಸಲಹೆ ಸದಾ ನಮ್ಮೊಂದಿಗೆ ಇರಲಿ ಎಂದು ಆಶಿಸಿದರು.
ಗಣಪತಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ ಅದೃಷ್ಟ ಎಲ್ಲರಿಗೂ ಬರುತ್ತದೆ ಆದರೆ ಬುದ್ದಿವಂತರು ಅವಕಾಶ ಸೃಷ್ಠಿಮಾಡಿಕೊಳ್ಳುತ್ತಾರೆ ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ ಈ ಸಾಲಿಗೆ ಸೇರಿದವರು ಶಾಸಕ ಹೆಚ್.ಡಿ ತಮ್ಮಯ್ಯ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಕೋಟೆ ಈಶಣ್ಣ ಮಾತನಾಡಿ ಸ್ವಾತಂತ್ರö್ಯ ಪೂರ್ವದಿಂದ ಚಿಕ್ಕಮಗಳೂರು ಗಣಪತಿ ಸೇವಾ ಸಮಿತಿ ಕಾರ್ಯರೂಪದಲ್ಲಿದ್ದು, 2007 ರಲ್ಲಿ ಕಾರಣಾಂತರಗಳಿAದ ಬೋಳರಾಮೇಶ್ವರ ದೇವಸ್ಥಾನದ ಆವರಣಕ್ಕೆ ಸ್ಥಳಾಂತರಗೊAಡಿದ್ದು, ಇಲ್ಲಿ ಪೂರ್ವಜರು ನಡೆಸಿಕೊಂಡು ಬರುತ್ತಿದ್ದ ಗಣಪತಿ ಸೇವಾ ಕಾರ್ಯಗಳನ್ನು ತಾವೂ ಸಹ ಮುಂದುವರೆಸಿಕೊAಡು ಬರುತ್ತಿದ್ದೇವೆ ಎಂದು ಹೇಳಿದರು.

ಸಮಿತಿ ಗೌರವಾಧ್ಯಕ್ಷರಾಗಿದ್ದ ಹೆಚ್.ಡಿ ತಮ್ಮಯ್ಯನವರು ಶಾಸಕರಾಗಿದ್ದು ಉತ್ತಮ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡದೆ ಇನ್ನೂ ಉನ್ನತ ಹುದ್ದೆಗೆ ಏರಲಿ ಎಂದು ಗಣಪತಿಯಲ್ಲಿ ಪ್ರಾರ್ಥಿಸಿದರು.
ಸಮಿತಿಯೊಂದಿಗೆ ಸಹಕಾರ ನೀಡುವ ಮೂಲಕ ಹೊಸ ಕಾರ್ಯಾ ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಅನುಷ್ಠಾನ ಮಾಡುವಂತೆ ಸಮಿತಿಯಿಂದ ಕೋರಿಕೆಯ ಮನವಿ ಪತ್ರವನ್ನು ಇದೇ ಸಂದರ್ಭದಲ್ಲಿ ಶಾಸಕರಿಗೆ ನೀಡಿದರು.
ಮೊದಲಿಗೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಮೋಹನ್‌ಕುಮಾರ್, ಈ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದವರು ನಗರಸಭೆ ಅಧ್ಯಕ್ಷರಾಗುತ್ತಿದ್ದರು ಈಗ ಶಾಸಕರಾಗಿರುವುದು ಹೆಮ್ಮೆಯ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಗಣಪತಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಏಕಾಂತರಾಮ್, ಸಿ.ಎಸ್ ಕುಬೇರ, ಸಿ.ಆರ್ ಕೇಶವಮೂರ್ತಿ, ದಿವಾಕರ್, ಶಿವಶಂಕರ್, ವಿರೂಪಾಕ್ಷಪ್ಪ, ಮಂಜಣ್ಣ, ಎಲ್.ವಿ ಕೃಷ್ಣಮೂರ್ತಿ, ಚೇತನ್ ಕುಮಾರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಮತ್ತಿತರರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!