April 29, 2024

MALNAD TV

HEART OF COFFEE CITY

ಚಾರ್ಮುಡಿ ಘಾಟಿಯಲ್ಲಿ ಪ್ರವಾಸಿಗರು ಮಾಡಿದ್ದಾದರು ಏನು…?!

1 min read

ಮೂಡಿಗೆರೆ : ಪೃಕೃತಿ ನಮಗೆ ಅಪಾಯದ ಪಾಠ ಎಷ್ಟೇ ಕಲಿಸಿದರು ಪಾಠ ಕಲಿಯದ ಉಂಬರಾಗಿದ್ದೇವೆ. ಅತಿಯಾದರೆ ಅಮೃತವು ವಿಷ ಎಂಬ ನಾಣ್ಣುಡಿ ತಿಳಿದಿದ್ದರು, ಕ್ಷಣಿಕ ಸುಖಕ್ಕಾಗಿ, ಮೋಜು-ಮಸ್ತಿಗಾಗಿ ಸಾಮಾನ್ಯ ಜ್ಞಾನವನ್ನು ಮರೆತು ಅಪಾಯದ ಬೆನ್ನೇರಿ ಹೋಗುತ್ತೇವೆ. ಅಪಾಯವೆಂದು ತಿಳಿದರು ಜಾರುವ ಬಂಡೆಗಳ ಮೇಲೆ ಹುಚ್ಚು ದೊಂಬರಾಟ ಆಡುತ್ತಾರೆ. ಹೌದು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಳೆಗಾಲ ಬಂತೆಂದರೆ ಸಾಕು ರಸ್ತೆಯುದ್ಧಕ್ಕೂ ಧುಮ್ಮಿಕ್ಕಿ ಹರಿಯುತ್ತಿರೋ ಸಣ್ಣ ಪುಟ್ಟ ಜಲಪಾತಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ದೂರದಲ್ಲೇ ಈ ಜಲಪಾತಗಳನ್ನು ಕಂಡು ರುನ್ಮನಗಳಲ್ಲಿ ಸಂತೋಷಪಡಬೇಕಾದ ಪ್ರವಾಸಿಗರು ನೀರು ಬೀಳುವ ಸ್ಥಳಕ್ಕೆ ಹೋಗಲು ಮುಂದಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಇಲ್ಲಿ ಸದಾ ನೀರು ಹರಿಯೋ ಜಾಗವಾಗಿರುವುದರಿಂದ ಪಾಚಿ ಕಟ್ಟಿ ತೀವ್ರವಾದ ಜಾರಿಕೆ ಇರುತ್ತದೆ, ಇಲ್ಲಿ ಸ್ವಲ್ಪ ಯಾಮಾರಿದ್ರು ಸಾವು ಸಂಭವಿಸಬಹುದಾದ ಅಪಾಯದ ಸ್ಥಳವಾಗಿದೆ. ಇದೇ ಜಾಗದಲ್ಲಿ ಕೆಲವರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ, ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡವರು ಇದ್ದಾರೆ. ಬಂಡೆಗಳ ಮೇಲೆ ಹತ್ತಬಾರದೆಂದು ಸರ್ಕಾರ ಆದೇಶವಿದ್ದರು, ಅಪಾಯದ ಸ್ಥಳ ಎಂದು ಮನಸ್ಸು ಸಾರಿ ಸಾರಿ ಹೇಳುತ್ತಿದ್ದರು, ಕ್ಷಣಿಕ ಸುಖದ, ಮೋಜು-ಮಸ್ತಿಯ ಕುದುರೆ ಏರಿದ ಪ್ರವಾಸಿಗರು ಯಾವ ಮಾತನ್ನು ಕೇಳದೆ ಹದ್ದುಮೀರಿ ವರ್ತಿಸುತ್ತಿದ್ದಾರೆ. ಇವರ ದುರ್ವರ್ತನೆಯನ್ನು ಕೇಳುವವರು ಇಲ್ಲದಂತಾಗಿದೆ. ಮೋಜು-ಮಸ್ತಿಯ ಅಮಲಿನಿಂದ ಜೀವ ಅಥವಾ ಅಂಗಾಂಗ ಊನ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ಅಗತ್ಯವಾಗಿದೆ..

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!