April 28, 2024

MALNAD TV

HEART OF COFFEE CITY

ಡಿಕೆಶಿ ಮಗಳ ಮದುವೆಗೆ ವಿನಯ್ ಗುರೂಜಿಗೆ ಆಹ್ವಾನ

1 min read

ಹೋದ ವರ್ಷ ವ್ಯಾಲಂಟೈನ್ ಡೇಗೆ ಮದುವೆಯಾಗಲಿ ಎಂದು ತಮಾಷೆಗೆ ಹೇಳಿದ್ದೆ. ನೋಡಿದರೇ ಅದೇ ದಿನ ಮದುವೆಯಾಗುತ್ತಿದೆ. ಖುಷಿಯ ವಿಚಾರ. ಇಬ್ಬರು ಮಕ್ಕಳಲ್ಲೂ ಒಂದೇ ರೀತಿಯ ಥಿಂಕಿಂಗ್ ಇದೆ. ಹಾಗಾಗಿ, ಇಬ್ಬರು ತುಂಬಾ ಚೆನ್ನಾಗಿ ಇರುತ್ತಾರೆ ಎಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಡಿಕೆಶಿ ಮಗಳ ಮದುವೆಗೆ ಶುಭ ಹಾರೈಸಿದ್ದಾರೆ.

ಇಂದು ಮಗಳ ಮದುವೆಗೆ ಗುರೂಜಿಯನ್ನ ಕರೆಯಲು ಡಿಕೆಶಿ ಜಿಲ್ಲೆಗೆ ಆಗಮಿಸಿದ್ದರು. ಇದೇ ವೇಳೆ, ಮಾತನಾಡಿದ ವಿನಯ್ ಗುರೂಜಿ, ಎರಡು ಫ್ಯಾಮಿಲಿ ಒಂದಾಗಲೆಂದು ಆಶ್ರಮ ತುಂಬಾ ಪ್ರಯತ್ನ ಮಾಡಿತ್ತು. ಮದುವೆಗೆ ಕರೆಯಲು ಬಂದಿದ್ದರು. ಎರಡು ಫ್ಯಾಮಿಲಿ ಆಶ್ರಮಕ್ಕೆ ತುಂಬಾ ನಿಕಟವಿರೋ ಫ್ಯಾಮಿಲಿ. ಎರಡು ಫ್ಯಾಮಿಲಿ ಮದುವೆ ಆಶ್ರಮದ ಮದುವೆ ಇದ್ದಂತೆ ಎಂದರು. ಸಿದ್ದಾರ್ಥ ಅವರು ಎಲ್ಲೇ ಇದ್ದರೂ ಸೂಕ್ಷ್ಮ ಶರೀರದಲ್ಲಿ ಇರುತ್ತಾರೆ. ಅಲ್ಲಿಂದಲೇ ಖುಷಿಪಡುತ್ತಾರೆ. ವಸಂತಕ್ಕನಿಗೂ ಸ್ವಲ್ಪ ನೆಮ್ಮದಿ ಆಗುತ್ತೆ. ಎಲ್ಲರಿಗೂ ಖುಷಿ ಕೊಡುವ ವಿಚಾರ ಎಂದರು. ಡಿಕೆಶಿ ರಾಜಕೀಯದ ಸುಮಾರು ವಿಷಯ ಕೇಳಿದರು. ಮದುವೆಯ ನಂತರ ಮಾತನಾಡೋಣ ಎಂದಿದ್ದೇನೆ ಎಂದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರು ನಗರಕ್ಕೆ ನಮ್ಮ ರೈತರನ್ನ ಬಿಟ್ಟಿಲ್ಲ. ರೈತರ ಕೋಪ-ತಾಪ-ಶಾಪ ಎಲ್ಲಾ ಈ ಸರ್ಕಾರಕ್ಕೆ ತಟ್ಟುತ್ತದೆ. ಈ ಸರ್ಕಾರಕ್ಕೆ ಅಂತ್ಯದ ದಿನ ಬರುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ಮಾತನಾಡಿದ ಅವರು, ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದು ಖಂಡನೀಯ. ಅವರು ರ್ಯಾಲಿ ಮಾಡಿಕೊಂಡು ಪ್ರತಿಭಟನೆ ಮಾಡ್ತಿದ್ರು. ಅವರ್ಯಾರು ಕಾನೂನು ಭಂಗ ಮಾಡಿರಲಿಲ್ಲ. ರೈತ ವಿರೋಧಿ ಸರ್ಕಾರ ಅನ್ನೋದಕ್ಕೆ ನಮ್ಮ ಸಂವಿಧಾನದ ಪ್ರಥಮ ದಿನ ಗಣರಾಜ್ಯೋತ್ಸವದಂದು ಇದಕ್ಕೆ ಸಾಕ್ಷಿ ನುಡಿಯನ್ನ ಮಾಡಿದ್ದಾರೆ ಎಂದರು. ಮಗಳ ಮದುವೆಗೆ ಆಹ್ವಾನ ನೀಡಲು ಚಿಕ್ಕಮಗಳೂರಿಗೆ ಬಂದಿದ್ದ ಡಿಕೆಶಿ, ಪರ್ಸನಲ್ ಕೆಲಸ, ಶೃಂಗೇರಿ ಶಾರದಾಂಭೆ ಹಾಗೂ ಗುರುಗಳು, ರಂಭಾಪುರಿ ಪೀಠದ ಗುರುಗಳು ಹಾಗೂ ಗೌರಿಗದ್ದೆ ಆಶ್ರಮದ ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!