ಕೆಂಪು ಕೋಟೆಯಲ್ಲಿ ನಡೆದ ಪ್ರತಿಭಟನೆ ರೈತರ ಪ್ರತಿಭಟನೆಯಲ್ಲ ಸಂಸದೆ ಶೋಭಾ
1 min readಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ ಅನ್ನೋದಕ್ಕೆ ನಿನ್ನೆ ನಡೆದ ಘಟನೆ ಸಾಕ್ಷಿಯಾಗಿದೆ. ಕೆಂಪು ಕೋಟೆಗೆ ನುಗ್ಗಿ ರೈತರು ಕೆಟ್ಟ ಪದ್ಧತಿಯನ್ನ ಹಾಕಿಕೊಟ್ಟಿದ್ದಾರೆ ಎಂದು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರಂಭದಿಂದಲೂ ಹೇಳ್ತಿದ್ದೆ ಪ್ರತಿಭಟನೆಯ ಹೋರಾಟವನ್ನ ರೈತರು ವಹಿಸಿಲ್ಲ. ಉಮ್ಮರ್ ಖಾಲಿದ್ ಬಿಡುಗಡೆಗೊಳಿಸುವಂತೆ ದೇಶದ್ರೋಹಿ ಶಕ್ತಿ ವಹಿಸಿವೆ ಎಂದಿದ್ದೆ ಎಂದು ಹೇಳಿದರು. ಗಣರಾಜ್ಯದ ದಿನ ತ್ರಿವರ್ಣ ಧ್ವಜ ಹಾರಿಸುವ ದಿನ ಕೆಟ್ಟ ಘಟನೆ ನಡೆದಿದೆ. ಕೆಂಪು ಕೋಟೆಗೆ ನುಗ್ಗಿ ರೈತರು ಕೆಟ್ಟ ಪದ್ಧತಿಯನ್ನ ಹಾಕಿಕೊಟ್ಟಿದ್ದಾರೆ. ಕೆಂಪು ಕೋಟೆ ಹತ್ತಿದವರು ಯಾರೂ ರೈತರಲ್ಲ. ರೈತರ ಪ್ರತಿಭಟನೆಯ ಹೆಸರಲ್ಲಿ ಭಾರತ ವಿರೋಧಿ ಚಟುವಟಿಕೆ ಮಾಡುತ್ತಿದ್ದ ಕೆನಡಾದ ಖಲಿಸ್ತಾನ್ ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g