May 4, 2024

MALNAD TV

HEART OF COFFEE CITY

ಪ್ರವಾಸಿಗರೇ ಎಚ್ಚರ… ಕಾಫಿನಾಡ ನಾನ್ ವೆಜ್ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸ 

1 min read

 

 

ಚಿಕ್ಕಮಗಳೂರು.: ಪ್ರವಾಸಿಗರೇ ಎಚ್ಚರ….ಎಚ್ಚರ…. ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿನ ನಾನ್ ವೆಜ್ ಹೋಟೆಲ್ ಕುರಿ ಬದಲು ದನದ ಮಾಂಸ ಬಳಸುತ್ತಿರೋದು ಸಾಕ್ಷಿ ಸಮೇತ ಸಾಬೀತಾಗಿದ್ದು, ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿದ್ದಾರೆ. ನಗರದ ಐ.ಜಿ. ರಸ್ತೆಯಲ್ಲಿರುವ ಬೆಂಗಳೂರು ಹೋಟೆಲ್ ಹಾಗೂ ಎವರೆಸ್ಟ್ ಹೋಟೆಲ್‍ನಲ್ಲಿ ದನದ ಮಾಂಸ ಇದ್ದಾಗ ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿ ದನದ ಮಾಂಸ ಹಾಗೂ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಎರಡು ಹೋಟೆಲ್‍ನಲ್ಲಿ ಊಟ ಮಾಡಿದ ಸ್ಥಳಿಯರು ಪೊಲೀಸರಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ಪೊಲೀಸರು ಐದು ಕೆ.ಜಿ. ದನದ ಮಾಂಸ ಹಾಗೂ ಅದರಿಂದ ತಯಾರಿಸಿದ್ದ ಬಿರಿಯಾನಿಯನ್ನೂ ವಶಕ್ಕೆ ಪಡೆದಿದ್ದಾರೆ. ಪ್ರವಾಸೋಧ್ಯಮದ ಜಿಲ್ಲೆ ಕಾಫಿನಾಡಿಗೆ ಬರುವ ಪ್ರವಾಸಿಗರು ಇಲ್ಲಿನ ಸೌಂದರ್ಯದಷ್ಟೆ ಊಟವನ್ನ ಇಷ್ಟಪಡುತ್ತಾರೆ. ಅದರಲ್ಲೂ ನಾನ್‍ವೆಜ್ ಊಟ ಚಿಕ್ಕಮಗಳೂರಿನಲ್ಲಿ ಚೆನ್ನಾಗಿ ಇರುತ್ತದೆ. ಆದರೆ, ಎಲ್ಲೋ ಒಂದೆರಡು ಹೋಟೆಲ್‍ನವರು ಹೀಗೆ ಗ್ರಾಹಕರಿಗೆ ಮೋಸ ಮಾಡಿದ್ದರಿಂದ ಇದೀಗ ಎಲ್ಲಾ ಹೋಟೆಲ್‍ನವರನ್ನೂ ಪ್ರವಾಸಿಗರು ಅನುಮಾನದಿಂದ ನೋಡುವಂತಾಗಿದೆ. 

 

ಹೇಳಿ-ಕೇಳಿ ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ಜಿಲ್ಲೆ. ಆ ಪ್ರವಾಸೋಧ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ದಿನದಿಂದ ದಿನಕ್ಕೆ ಕಾಫಿನಾಡ ಪ್ರವಾಸೋಧ್ಯಮವೂ ಬೆಳೆಯುತ್ತಲೇ ಇದೆ. ಪ್ರವಾಸಿಗರನ್ನ ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರು ಕೂಡ ಇನ್ನಿಲ್ಲದ ಕರಸತ್ತು ನಡೆಸುತ್ತಿದ್ದಾರೆ. ಆದ್ರೆ, ಪ್ರವಾಸಿಗರನ್ನ ಆಕರ್ಷಿಸೋದ್ರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್‍ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಚ್ ಅಡುಗೆ ಮಾಡುತ್ತಿದ್ದಾರೆ. ಕುರಿ ಮಟನ್ ಕೆ.ಜಿ.ಗೆ 700-800 ರೂಪಾಯಿ. ಆದ್ರೆ, ದನದ ಮಟನ್ 200-300 ರೂಪಾಯಿಗೆ ಸಿಗುತ್ತೆ. ಹಾಗಾಗಿ, ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಕ್ಸ್ ಮಾಡಿ ಅಡುಗೆ ಮಾಡಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ ಐದು ಕೆ.ಜಿ. ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ. 

 

ಯಾವಾಗ ಹೋಟೆಲ್‍ನಲ್ಲಿ ದನದ ಮಾಂಸ ಬಳಸುತ್ತಾರೆ ಎಂದು ಗೊತ್ತಾಯ್ತೋ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ, ಜಿಲ್ಲೆಗೆ ಬರುವ ಲಕ್ಷಾಂತರ ಪ್ರವಾಸಿಗರು ಕೂಡ ಜಿಲ್ಲೆಯ ಸೌಂದರ್ಯದಷ್ಟೆ ಇಲ್ಲಿನ ಊಟವನ್ನೂ ಲೈಕ್ ಮಾಡುತ್ತಾರೆ. ಆ ರೀತಿ ನಾನ್ ವೆಜ್ ಪ್ರಿಯರನ್ನೆ ಬಂಡವಾಳ ಮಾಡಿಕೊಂಡು ಹೋಟೆಲ್ ಮಾಲೀಕರು ದಂಧೆ ಮಾಡುತ್ತಿದ್ದಾರೆ. ಆದರೆ, ಹೋಟೆಲ್ ಮಾಲೀಕರ ದುರಾಸಗೆ ಸ್ಥಳಿಯರು ಜೊತೆ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ. ಯಾಕಂದ್ರೆ, ಹಿಂದೂಗಳಲ್ಲಿ ಯಾರೂ ದನದ ಮಾಂಸ ತಿನ್ನೋದಿಲ್ಲ. ಹೀಗಿರುವಾಗ ಹೋಟೆಲ್‍ಗಳಲ್ಲಿ ಕುರಿ ಮಾಂಸ ಎಂದು ದನದ ಮಾಂಸ ಕೊಟ್ಟರೆ ಮನುಷ್ಯರ ಭಾವನೆ, ಸಿದ್ದಾಂತದ ಜೊತೆ ಆಟವಾಡಿದಂತೆ. ಹಾಗಾಗಿ, ಬಜರಂಗದಳ ಕೂಡ ಹೋಟೆಲ್ ಮಾಲೀಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಎಲ್ಲಿಂದ ದನದ ಮಾಂಸ ಬರುತ್ತಿದ್ದೆ. ತರುತ್ತಿರೋರು ಯಾರು. ಪೊಲೀಸರು ಇಂತಹಾ ಪ್ರಕರಣಗಳಿಗೆ ಫುಲ್ ಸ್ಟಾಪ್ ಹಾಕಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಊಟ ವೈಯಕ್ತಿಕ ವಿಚಾರ. ಯಾರು ಏನನ್ನ ಬೇಕಾದರೂ ತಿನ್ನಬಹುದು. ಅದು ಅವರ ಸ್ವಇಚ್ಛೆಯಿಂದ ಮಾತ್ರ. ಆದ್ರೆ, ಗೋವನ್ನ ತಾಯಿ ಎಂದು ಪೂಜಿಸುವ ಮಲೆನಾಡಲ್ಲಿ ಈ ರೀತಿ ಗೊತ್ತಿಲ್ಲದಂತೆ ಕುರಿ ಜೊತೆ ದನದ ಮಾಂಸ ಮಿಕ್ಸ್ ಮಾಡ್ತಿರೋದು ಜನರ ಭಾವನೆ ಜೊತೆ ಆಟವಾಡಿ, ಪರೋಕ್ಷವಾಗಿ ಸಿದ್ಧಾಂತಕ್ಕೆ ಕೊಳ್ಳಿ ಇಟ್ಟಂತೆ. ಈ ಹೋಟೆಲ್‍ಗಳಲ್ಲಿ ಮಾಂಸ ತಿಂದೋರು ನಾವು ತಿಂದದ್ದು ಏನೆಂದು ಮಾನಸಿಕವಾಗಿ ಕೊರಗುವಂತಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!