May 17, 2024

MALNAD TV

HEART OF COFFEE CITY

ದೇವೀರಮ್ಮನ ಗುಡ್ಡವನ್ನ ಆವರಿಸಿದ ಕಾಮನಬಿಲ್ಲು, ನಯನ ಮನೋಹರ ದೃಶ್ಯ

1 min read

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಬಿಂಡಿಗ ದೇವಿರಮ್ಮ ನೆಲೆಸಿರುವ ಗುಡ್ಡವನ್ನು ಕಾಮನಬಿಲ್ಲು ಸಂಪೂರ್ಣವಾಗಿ ಆವರಿಸಿದ್ದು ನೋಡುವ ಕಣ್ಣುಗಳಿಗೆ ನಯನ ಮನೋಹರವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3800 ಅಡಿಗೂ ಎತ್ತರದಲ್ಲಿರುವ ದೇವಿರಮ್ಮನನ್ನು ಕಾಮನಬಿಲ್ಲು ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೂ ಸಂಪೂರ್ಣವಾಗಿ ಆವರಿಸಿದ್ದು ನೋಡಲು ಅತ್ಯದ್ಭುತವಾದ ದೃಶ್ಯದಂತಿದೆ. ಈಗಾಗಲೇ ದೇವಿರಮ್ಮನ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೋನ ಕಾರಣದಿಂದಾಗಿ ಬೆಟ್ಟ ಹತ್ತು ಅವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಈ ವರ್ಷ ಸುಮಾರು 80 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುವ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ, ದೇವಸ್ಥಾನದ ಆಡಳಿತ ಮಂಡಳಿ ಕೂಡ ಬೆಟ್ಟ ಹತ್ತುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಬೆಟ್ಟ ಹತ್ತುವ ಮಾರ್ಗದಲ್ಲೂ ಕೂಡ ಎಲ್ಲಾ ಸಿದ್ಧತೆ ಮಾಡುತ್ತಿದೆ. ಇದೇ ತಿಂಗಳ 23ರ ರಾತ್ರಿ ಬೆಟ್ಟ ಹತ್ತಲು ಭಕ್ತರು ಕೂಡ ಕಾತರದಿಂದ ಇದ್ದಾರೆ. ಇದೆ ವೇಳೆ ಗುಡ್ಡದ ತುದಿಯಲ್ಲಿರುವ ದೇವಿರಮ್ಮನನ್ನ ಏಳು ಬಣ್ಣಗಳ ಮಿಶ್ರಿತ ಕಾಮನಬಿಲ್ಲು ಆವರಿಸಿದ್ದು ನೋಡಲು ಈ ದೃಶ್ಯ ಸುಂದರವಾಗಿದೆ. ದೇವಿರಮ್ಮನ ದೇವಸ್ಥಾನದ ಬಳಿ ಸಂಪೂರ್ಣ ಮೂಡ ಕವಿದಿದೆ. ಬೆಟ್ಟದ ತುದಿಯಲ್ಲಿ ಬಿಸಿಲಿದ್ದು ಬಿಸಿಲು ಮೋಡದ ಮಧ್ಯೆ ದೇವಿರಮ್ಮನನ್ನ ಕಾಮನಬಿಲ್ಲು ಆವರಿಸಿದ್ದು ಈ ಸುಂದರ ಕ್ಷಣವನ್ನ ಭಕ್ತರು ಕಣ್ತುಂಬಿಕೊಂಡು ಸಂತಸಗೊಂಡಿದ್ದಾರೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!