May 21, 2024

MALNAD TV

HEART OF COFFEE CITY

ಫೈನ್ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ವ್ಯಕ್ತಿ ಅಂದರ್

1 min read

 

ಚಿಕ್ಕಮಗಳೂರು : ಫೈನ್ ಹಾಕಿದ್ದಕ್ಕೆ ಆರೋಪಿಯೋರ್ವ ಜಡ್ಜ್ ಮೇಲೆ ಚಪ್ಪಲಿ ತೂರಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ವಿಭಾಗದಲ್ಲಿ ನಡೆದಿದೆ. ನ್ಯಾಯಧೀಶರ ಮೇಲೆ ಚಪ್ಪಲಿ ತೂರಿದ ಚಿಕ್ಕಮಗಳೂರು ನಗರದ ಅರವಿಂದ ನಗರ ನಿವಾಸಿ ಲೋಕೇಶ್‍ನನ್ನ ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಡ್ರಿಂಕ್ ಅಂಡ್ ಡ್ರೈವ್ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಲೋಕೇಶ್. ಪೊಲೀಸರು ಕೋರ್ಟ್‍ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ್ದರು. ಆಗ ಆರೋಪಿ ಲೋಕೇಶ್ ದಂಡ ಕೂಡ ಕಟ್ಟಿದ್ದರು. ಆದರೆ, ದಂಡ ಕಟ್ಟಿದ ತಿಂಗಳ ಬಳಿಕ ಇಂದು ಕೋರ್ಟಿಗೆ ಕುಡಿದು ಬಂದು ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ. ಕೂಡಲೇ ಅಲ್ಲೇ ಇದ್ದ ನಗರ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಕೋರ್ಟಿನಲ್ಲಿ ನಾನು ಏನು ತಪ್ಪು ಮಾಡಿದ್ದೇನೆ ಎಂದು ದಂಡ ಹಾಕಿದ್ದೀರಾ ಎಂದು ಕೂಗಾಡಿದ್ದಾನೆ. ಲೋಕೇಶನ ಈ ವರ್ತನೆ ನೋಡಿದ ಕೂಡಲೇ ಕೋರ್ಟಿನಲ್ಲಿದ್ದ ವಕೀಲರು ಕೂಡ ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!