May 21, 2024

MALNAD TV

HEART OF COFFEE CITY

ರಾಷ್ಟ್ರಗೀತೆ ಕೇಳಿದಾಗ ಮೈ ರೋಮಾಂಚನಗೊಳ್ಳದಿದ್ದರೆ ಈ ದೇಶದ ಪ್ರಜೆಯಾಗಲು ಯೋಗ್ಯರಲ್ಲ : ಅಪರ ಜಿಲ್ಲಾಧಿಕಾರಿ ರೂಪ

1 min read

 

ಚಿಕ್ಕಮಗಳೂರು : ಆಧುನಿಕ ಸಮಾಜದಲ್ಲಿ ಪ್ರತಿಭೆಗಳನ್ನ ಗುರುತಿಸಿ-ಪೆÇ್ರೀತ್ಸಾಹಿಸುವ ಕೊರತೆ ಎದ್ದು ಕಾಣುತ್ತಿದೆ. ಪ್ರೋತ್ಸಾಹ ಸಿಗದೆ ಎಷ್ಟೋ ಪ್ರತಿಭೆಗಳು ತಮ್ಮ ಸಾಮಥ್ರ್ಯವನ್ನ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಯುವಜನತೆ ಯಾವುದೇ ತರನಾದ ಮನೋಭಾವನೆಯ ಕೀಳರಿಮೆ ಬಿಟ್ಟು ಪ್ರತಿಭೆಯನ್ನ ಪ್ರದರ್ಶಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ರೂಪ ಹೇಳಿದ್ದಾರೆ. ಅವರು ಇಂದು ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ಯುವಜನತೆಯಲ್ಲಿ ರಾಷ್ಟ್ರ ಕಟ್ಟುವ ಸಾಮರ್ಥ್ಯವಿದೆ. ದೇಶದ ಆಂತರಿಕ ಶತ್ರುಗಳಾದ ಅನಕ್ಷರತೆ-ಬಡತನ-ನಿರುದ್ಯೋಗ ಹಾಗೂ ಮೂಢನಂಬಿಕೆಗಳನ್ನ ಮೆಟ್ಟಿ ನಿಲ್ಲಬೇಕು ಎಂದರು.

ದೇಶವನ್ನ ಮುನ್ನೆಡೆಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು. ರಾಷ್ಟ್ರೀಯ ಯುವ ಸಪ್ತಾಹದ ಮೂಲಕ ರಾಷ್ಟ್ರದ ವಿವಿಧ ಭಾಗಗಳ ಯುವ ಜನತೆಯನ್ನ ಒಗ್ಗೂಡಿಸಿ ಅವರಲ್ಲಿ ದೇಶದ ಜಾಗೃತಿ, ರಾಷ್ಟ್ರಪ್ರೇಮ ಹಾಗೂ ದೇಶಸೇವೆ ಬೆಳೆಸುವುದು ಯುವ ಸಪ್ತಾಹದ ಪ್ರಮುಖ ಉದ್ದೇಶ ಎಂದರು. ದೇಶದಲ್ಲಿ ಶೇಕಡ 30ರಷ್ಟು ಯುವ ಜನತೆ ಇದೆ. ಜಗತ್ತಿನಲ್ಲೇ ಅತಿ ಹೆಚ್ಚು ಯುವಸಮೂಹವನ್ನ ಹೊಂದಿರುವ ದೇಶ ಭಾರತ. ದೇಶದ ಅಭಿವೃದ್ಧಿ ಹಾಗೂ ಅಧೋಗತಿ ಯುವಸಮೂಹದ ಮೇಲಿದೆ ಎಂದರು. ಯುವಸಮೂಹ ದೇಶವನ್ನ ಅಭಿವೃದ್ಧಿಯತ್ತ ಕೊಂಡೊಯ್ಯುವ ಮನೋಭಾವವನ್ನ ಬೆಳೆಸಿಕೊಳ್ಳಬೇಕು ಎಂದರು. ಇದೇ ವೇಳೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಯುವಕರು ಪ್ರತಿಯೊಂದರಲ್ಲೂ ಹೊಸತನ ತರುವಂತವರಾಗಬೇಕು. ಇಂದಿನ ಜಾಗತೀಕರಣದಲ್ಲಿ ಹಲವು ರೀತಿಯ ಸಮಸ್ಯೆಗಳು ಯುವ ಜನತೆಯನ್ನ ಕಾಡುತ್ತಿದೆ. ಯುವಸಮೂಹ ಹಲವು ಸವಾಲುಗಳನ್ನ ಎದುರಿಸಬೇಕಾಗುತ್ತದೆ. ಇಂತಹಾ ಸಂದರ್ಭದಲ್ಲಿ ಆತ್ಮವಿಶ್ವಾಸ ಹಾಗೂ ಆತ್ಮ ಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೆಂಬರ್ 4ನೇ ವಾರದಲ್ಲಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಯುವ ಉತ್ಸವವನ್ನ ಸಂಘಟಿಸಲಾಗುತ್ತದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!