May 3, 2024

MALNAD TV

HEART OF COFFEE CITY

ಮೊದಲ ದಿನ ಭರ್ಜರಿ ಗಳಿಕೆ ಮಾಡಿದ ‘ಘೋಸ್ಟ್’ ಸಿನಿಮಾ; ಇಲ್ಲಿದೆ ಕಲೆಕ್ಷನ್ ವಿವರ

1 min read

ಘೋಸ್ಟ್’ ಸಿನಿಮಾದಲ್ಲಿ ಗ್ಯಾಂಗ್​ಸ್ಟಾರ್​ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಶ್ರೀನಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೈಲನ್ನು ಹೈಜಾಕ್ ಮಾಡುವ ಕಥೆಯನ್ನು ‘ಘೋಸ್ಟ್’ ಸಿನಿಮಾ ಹೊಂದಿದೆ. ಈ ಚಿತ್ರದಲ್ಲಿ ಶಿವಣ್ಣ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.


ನವರಾತ್ರಿ ಪ್ರಯುಕ್ತ ಅಕ್ಟೋಬರ್ 19ರಂದು ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ರಿಲೀಸ್ ಆಗಿದೆ.

ಶ್ರೀನಿ ನಿರ್ದೇಶನ ಮಾಡಿದ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ ಒಳ್ಳೆಯ ಕಮಾಯಿ ಮಾಡಿದೆ. ಸಾಲು ಸಾಲು ರಜೆ ಇರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ. ಹಲವು ಶೋಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತಿವೆ.

‘ಘೋಸ್ಟ್’ ಸಿನಿಮಾ ಮೊದಲ ದಿನ 2 ಕೋಟಿ ರೂಪಾಯಿ ಸಿನಿಮಾ ಗಳಿಕೆ ಮಾಡಿದೆ. ಶುಕ್ರವಾರ (ಅಕ್ಟೋಬರ್ 20) 1.5 ಕೋಟಿ ರೂಪಾಯಿ ಬಾಚಿಕೊಳ್ಳುವ ಸಾಧ್ಯತೆ ಇದೆ. ಸಾಲು ಸಾಲು ರಜೆ ಇರುವುದರಿಂದ ಶಿವಣ್ಣನ ಸಿನಿಮಾ ಅಬ್ಬರದ ಗಳಿಕೆ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

‘ಘೋಸ್ಟ್’ ಸಿನಿಮಾದಲ್ಲಿ ಗ್ಯಾಂಗ್​ಸ್ಟಾರ್​ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಶ್ರೀನಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೈಲನ್ನು ಹೈಜಾಕ್ ಮಾಡುವ ಕಥೆಯನ್ನು ‘ಘೋಸ್ಟ್’ ಸಿನಿಮಾ ಹೊಂದಿದೆ. ಈ ಚಿತ್ರದಲ್ಲಿ ಶಿವಣ್ಣ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮ್ ಖೇರ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಶಿವರಾಜ್​ಕುಮಾರ್ ಅವರು ಈ ವರ್ಷ ‘ಜೈಲರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಆದಾಗ್ಯೂ ಅವರ ಪಾತ್ರವನ್ನು ಜನರು ಭರ್ಜರಿಯಾಗಿ ಮೆಚ್ಚಿಕೊಂಡರು. ಈಗ ‘ಘೋಸ್ಟ್​’ ಸಿನಿಮಾ ಮೂಲಕ ಮತ್ತೊಂದು ಗೆಲುವು ಕಂಡಿದ್ದಾರೆ ಅವರು. ತಮಿಳಿನಲ್ಲಿ ‘ಲಿಯೋ’ ಹಾಗೂ ತೆಲುಗಿನಲ್ಲಿ ‘ಭಗವಂತ್ ಕೇಸರಿ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಗಳ ಜೊತೆ ‘ಘೋಸ್ಟ್’ ಸ್ಪರ್ಧಿಸಿ ಗೆದ್ದಿದೆ.

‘ಘೋಸ್ಟ್’ ಸಿನಿಮಾದಲ್ಲಿ ಜಯರಾಂ, ಅರ್ಚನಾ ಜೋಯಿಸ್, ಅನುಪಮ್ ಖೇರ್ ಮೊದಲಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಜನರಿಗೆ ಇಷ್ಟವಾಗಿದೆ. ಈ ಚಿತ್ರದಲ್ಲಿ ಹೀರೋಯಿನ್ ಹಾಗೂ ಸಾಂಗ್ ಎರಡೂ ಇಲ್ಲ. ಈ ಕಾರಣಕ್ಕೂ ಸಿನಿಮಾ ವಿಶೇಷ ಎನಿಸಿಕೊಂಡಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!